ಜಗದ ವಾಸ್ತವ
ಆಸ್ತಿ ಅಂತಸ್ತು ಮಹಲುಗಳೇಕೆ ?
ಬಾಳಲಿ ನೆಮ್ಮದಿಯಿಲ್ಲದಿರೆ!!
ನಿಶೆಯ ಸೊಬಗಿನ ಬೆಳದಿಂಗಳು ಏತಕೆ ?
ಅದ ಸವಿಯುವ ಮನವಿಲ್ಲದಿರೆ!!
ಮಿತ್ರರೆಲ್ಲರ ಸ್ನೇಹದ ಗೊಂಚಲದೇತಕೆ ?
ಆತ್ಮೀಯತೆಯ ಸಮಭಾವವಿಲ್ಲದಿರೆ!!
ಸುರಿವ ಸಿರಿವಂತಿಕೆಯದೇತಕೆ ?
ಸಮರಸದ ಬಾಳ್ವೆಗದು ಸೋಪಾನವಾಗದಿರೆ!!
ಆಶ್ವಾಸನೆಗಳ ಮಹಾಪೂರವದೇತಕೆ ?
ಮನದ ಕಡು ಮೌನವರಿಯದಿರೆ!!
ಶಿಖರದಷ್ಟೆತ್ತರದ ಭರವಸೆಯ ನುಡಿಗಳೇತಕೆ ?
ಅದನೀಡೇರಿಸುವ ಸಡಗರವಿಲ್ಲದಿರೆ!!
ಮನವ ಕಾಡುವ ಪ್ರಶ್ನೆ ನೂರೆಂಟೇತಕೆ ?
ಬಿಡದೇ ಹುಡುಕಿದರೂ ಉತ್ತರ ಸಿಗದಿರೆ!!
ಅಂತರ್ಮನದ ಬೆನ್ನೇರಿ ಹುಡುಕಿದರೆ ಸಾಕು..
ಸಾರ್ಥಕ್ಯದ ಪಥದತ್ತ ಬದುಕು ನಡೆದಿರೆ!!

ಸುಮನಾ ರಮಾನಂದ