ತಾಯಗರ್ಭ

ತಾಯಗರ್ಭ

ಅಮ್ಮಾ ನಿನ್ನಯ ಒಡಲಲಿಹುದು
ನನ್ನಯ ಜೀವ ನನ್ನಯ ಉಸಿರು
ಜತನ ಮಾಡು ತಾಯೆ ನನ್ನುಸಿರನು
ಉಳಿಸು ತಾಯೇ ನೀ ಮನುಕುಲವನು

ಅದೆಷ್ಟು ಜೀವಿಗಳ ನೀ ಪೊರೆದೊರುವೆ
ಉಸಿರು ಉಸಿರಿನಲಿ ನೀ ಉಸಿರಾಗಿರುವೆ
ನೆಲಕ್ಕಂಟಿ ಬೆಟ್ಟ ತಬ್ಬಿ ಮಳೆ ಹಿಡಿದಿರುವೆ
ಹಸಿರೇ ಉಸಿರೆಂದು ನೀ ಸಾರುತಿರುವೆ

ವಿಷಗಳ ನೀನುಂಡು ಅಮೃತವನಿತ್ತಿರುವೆ
ಇಂಗದ ಇಂಗದ ಇಂಗಾಲವ ನೀ ಹೀರಿರುವೆ
ಪ್ರಾಣವಾಯುವ ನೀ‌ ಹರಿಸಿ ಜನನಿಯಾಗಿರುವೆ
ಅಮ್ಮಾ ನೀನಿದ್ದರೆ ನೆಲ ಜಲವು ಸಕಲವು

ಸಿ.ಎನ್. ಮಹೇಶ್

Related post

Leave a Reply

Your email address will not be published. Required fields are marked *