ಧರೆಯ ಸಿರಿಬೆಳಗು

ಧರೆಯ ಸಿರಿಬೆಳಗು

ದಿನಕರನಿತ್ತ ಹೊಂಗಿರಣದಿ
ಧರೆಗಿಂದು ದಿವ್ಯಬೆಳಗು!
ದಿನದಿನವೂ ಅವ ಆಗಮಿಸಿರಲು
ಅನುಕ್ಷಣವೂ ಅರಿಯದ ಸಿರಿಸೊಬಗು!!

ವಸುಧೆಯ ಹಸಿರ ಬನ
ನಗುತಲಿದೆ ಕಿರಣದಾಲಿಂಗನದಿ!
ಲೋಕದ ಜಡವದು ನೀಗಿ
ಸಡಗರವು ತುಂಬಿದೆ ಮನದಿ!!

ಕಾರ್ಗತ್ತಲ ಇರುಳು ಕಳೆದು
ನವಬೆಳಗು ಮೂಡಿದೆ ಧರೆಗಿಂದು!
ಬಾಡಿದ ಮರ ನಳನಳಿಪುದು..
ಕೊರಡಲಿ ಹಸಿರು ಚಿಗುರಿದಂದು!!

ಹೊಸಭಾವದಿ ಹೊಸಹಾದಿಯಲಿ
ಬದುಕು ಸಾಗಿರಲು ಸಂಭ್ರಮದಿ!
ದಿನಪನಾಗಮನ ನೀಡಿದೆ
ಬಾಳಿಗೆ ಬೆಳಗನು ಆನಂದದಿ!!

ಸುಮನಾ ರಮಾನಂದ

Related post

Leave a Reply

Your email address will not be published. Required fields are marked *