ನೆನಪಿನ ಹಾದಿಯಲ್ಲಿ

ನೆನಪಿನ ಹಾದಿಯಲ್ಲಿ

ಒಲವಿನ ಮಳೆಯಲ್ಲಿ
ನಿನ್ನ ನೆನಪಾಗುತಿದೆ
ಏಕೆ ಹೀಗೆ!!?
ಭಾವ ಕಂಬನಿಗಳ ಜೊತೆಗೆ
ನನ್ನ ಕಂಬನಿಯೂ ಹರಿಯುತ್ತಿದೆ..
ನೋವಿಗೋ..? ನಲಿವಿಗೋ..?
ತಿಳಿಯದಾಗಿದೆಯಲ್ಲ !!!??

ನಿನ್ನ ನೆನಪಿನಲೇ ನಾನು ಬರೆಯುತ್ತೇನೆ,
ಬರೆದು ನಿರಾಳವಾಗುತ್ತೇನೆ,
ನಿನ್ನ ನೆನಪಾದ ಗಳಿಗೆಯಲಿ…!!

ನಾ ಬರೆದಾಗ ಭಾವದ ಬಸಿರು
ಪ್ರಸವ ವೇದನೆ ಅನುಭವಿಸಿ
ಒಡಲ ಮಾತುಗಳು ಹೊರಬಂದು
ಆಗಸದಿ ಚಂದಿರನ ಬೆಳದಿಂಗಳು ಕಂಡಾಗ
ನಿನ್ನ ನಗು ನೆನಪಾಗುತ್ತದೆ,
ನಿನ್ನ ಮುಂಗುರುಳ ನರ್ತನ ಕಣ್ಣು ತುಂಬುತ್ತದೆ
ನಿನ್ನ ಮಂದಹಾಸದ ನೆನಪಾಗಿ
ಮೌನವಾಗುತ್ತೇನೆ!!!

ನೀ ಅಂದು ಬೆನ್ನುಮಾಡಿ ಹೋದ
ಹಾದಿಯಲಿ ನಾನೂ ನಡೆಯುತ್ತೇನೆ,
ನಿನ್ನ ಹೆಜ್ಜೆಗಳ ಅರಸುತ್ತೇನೆ,
ಕಾಲ್ಗಳು ಮುಂದೆ ಸಾಗದೇ ನಿಲ್ಲುತ್ತವೆ,
ನಿನ್ನ ಹೆಜ್ಜೆ ಕಂಡ ಸಂತಸಕ್ಕೋ ?
ನಿನ್ನ ಹಾದಿಗುಂಟ ನಡೆದ ಆಯಾಸಕ್ಕೋ ? ತಿಳಿಯುತ್ತಿಲ್ಲ..

ನಿನ್ನ ಮರೆಯಲಾಗದೇ
ಮತ್ತೆ ಮತ್ತೆ ನೆನೆಸಿಕೊಳ್ಳುತ್ತೇನೆ
ಮರೆಯಬೇಕೆನ್ನುವಾಗಲೇ
ನಿನ್ನ ನೆನಪಾಗುತ್ತದೆ….
ಏಕೆ ಹೀಗೆ!!? ತಿಳಿಯುತ್ತಿಲ್ಲ..!!!

ಸುನೀಲ್ ಹಳೆಯೂರು

Related post