ಪನ್ನೀರ ಹನಿ – ಡಾ|| ಪರಮೇಶ್ವರಪ್ಪ ಕುದರಿ

ಬೆಳದಿಂಗಳಿರುತ್ತದೆ

ನೀನು ಎಲ್ಲಿರ್ತಿಯೋ
ಅಲ್ಲಿ ಒಲವಿರುತ್ತದೆ
ಗೆಲುವಿರುತ್ತದೆ
ಹಾಲಿನಂಥ
ಬೆಳದಿಂಗಳಿರುತ್ತದೆ
ನೀ ನಕಾಗೆಲ್ಲ
ಅದು ಕಾಣ್ತಿರುತ್ತದೆ!!

ಶಿಕ್ಷೆ

ಸದಾ
ನಿನ್ನ ನೆನಪಿನಲ್ಲೇ
ಇರುವ
ಶಿಕ್ಷೆಯೊಂದೇ
ಈ ಜನ್ಮಕೆ
ಸಾಕೆನಗೆ!
ಮತ್ತೇನೂ
ಬೇಡವೇ ಬೇಡ
ನನಗೇ!!

ವಿಶೇಷ ಭತ್ಯೆ

ನಿನ್ನ ನೆನಪಿನ ಸುಳಿಯಲ್ಲಿ
ಸಿಲುಕಿರುವೆ
ಹೊರ ಬರುವ ದಾರಿ ತಿಳಿಯದೇ
ನಲುಗಿರುವೆ!
ಚಕ್ರವ್ಯೂಹದಿ ಅಭಿಮನ್ಯು
ಬಂಧಿಯಾದಂತೆ!!
ಅಭಿಮನ್ಯುವಿಗೆ ಸಿಕ್ಕಿದ್ದು
ವೀರಮರಣ
ನನಗೋ ಆತ್ಮಹತ್ಯೆಯೇ
ವಿಶೇಷ ಭತ್ಯೆ!!!

ನಿತ್ಯ

ಎಲ್ಲೇ ಇರು
ಹೇಗೆ ಇರು
ನನ್ನ ಎದೆಯಲ್ಲಿ
ಪ್ರೇಮ ದೀವಿಗೆಯಾಗಿರು!
ನನ್ನೆದೆಯ
ಒಲವ ಎರೆಯುವೆ
ನಿತ್ಯ ನೀ
ಬೆಳಗಲು!

ಡಾ!! ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ

Related post

2 Comments

  • ಪನ್ನೀರ ಹನಿಗಳು ತುಂಬಾ ಚನ್ನಾಗಿದೆ..
    ವಿಶೇಷವಾಗಿ ‘ಶಿಕ್ಷೆ’ ಬಲು ಮಧುರ..
    ಅದು ದೂರಾಗಿ ನೀಡಿದ ಶಿಕ್ಷೆ
    ನೆನಪಾಗಿ ಉಳಿವ ಅಪೇಕ್ಷೆ..
    👌👌👌👌👌👌👌👌

  • Thank You Sir

Leave a Reply

Your email address will not be published. Required fields are marked *