ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಅಥವಾ ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್

ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಅಥವಾ ಪಾಲಿಸಿಸ್ಟಿಕ್ ಓವರಿಯನ್ ಡಿಸೀಸ್

ಪಿ ಸಿ ಓ ಎಸ್ (PCOS) ಅಥವಾ ಪಿ ಸಿ ಓ ಡಿ (PCOD) ಇದು ಹೆಣ್ಣು ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಬರುತ್ತಿರುವ ಕಾಯಿಲೆ ಅಂಡಾಶಯದ ಹಾರ್ಮೋನುಗಳ ಅಸಮತೋಲನದಿಂದ ಈ ಕಾಯಿಲೆ ಬರುತ್ತದೆ.

ಪಿ ಸಿ ಓ ಡಿ (PCOD) ಅಥವಾ ಪಿ ಸಿ ಓ ಎಸ್ (PCOS) ಮಹಿಳೆಯರ ಅಂಡಾಶಯಗಳ ಮೇಲೆ ಪರಿಣಾಮ ಬೀರುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಆರೋಗ್ಯಕರ ಅಂಡಾಶಯಗಳು ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನ್‌ಗಳನ್ನು ಉತ್ಪಾದಿಸುವ ಸಂತಾನೋತ್ಪತ್ತಿ ಅಂಗಗಳು. ಈ ಹಾರ್ಮೋನ್ಗಳು ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಕಡಿಮೆ ಪ್ರಮಾಣದ ಹಾರ್ಮೋನ್‌ಗಳಾದ ರಿಲ್ಯಾಕ್ಸಿನ್ ಮತ್ತು ಆಂಡ್ರೋಜೆನ್‌ಗಳನ್ನು ಅಂಡಾಶಯ ಉತ್ಪಾದಿಸುತ್ತದೆ. ಮೊದಲೇ ಈ ಖಾಯಿಲೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರೆ ಮುಂದೆ ಇದು ತುಂಬಾ ಹೆಚ್ಚಿನ ಪರಿಣಾಮಗಳನ್ನು ಉಂಟುಮಾಡುತ್ತದೆ.

ಹೆಣ್ಣು ಮಕ್ಕಳಲ್ಲಿ ಜೀವನಶೈಲಿಗೆ ಸಂಬಂಧಪಟ್ಟ ಒಂದು ಪ್ರಮುಖವಾದ ಕಾಯಿಲೆ ಎಂದು ಹೇಳಬಹುದು ಇದರಿಂದ ಬೇರೆ ದೇಹದ ಅಂಗಾಂಗಗಳಿಗೂ ತೊಂದರೆ ಉಂಟಾಗುತ್ತದೆ. ಪಿ ಸಿ ಓ ಡಿ ಸಮಸ್ಯೆಯು ಬಂಜೆತನಕ್ಕೂ ಕಾರಣವಾಗಬಹುದುಸಂತಾನೋತ್ಪತ್ತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುವಂತಹ ಈ ಕಾಯಿಲೆ ವಿಶ್ವಸಂಸ್ಥೆಯ ಪ್ರಕಾರ 8% ರಿಂದ 13% ರಷ್ಟು ಋತು ಚಕ್ರದ ಒಳಗಿರುವ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಆದರೆ ಭಾಗಶಃ 75% ಹೆಣ್ಣು ಮಕ್ಕಳಿಗೆ ಈ ವಿಷಯದ ಅರಿವಿಲ್ಲ ಇದರಿಂದ ರೋಗ ನಿರ್ಣಯ ನಿಧಾನವಾಗಿ, ಹೆಣ್ಣು ಮಕ್ಕಳು ಹೆಚ್ಚಿನ ತೊಂದರೆಗೆ ಒಳಗಾಗುತ್ತಾರೆ.

ಹೆಣ್ಣಿನ ಅಂಡಾಶಯದಲ್ಲಿ ಪುರುಷ ಹಾರ್ಮೋನುಗಳು ಹೆಚ್ಚಾಗುವುದರಿಂದ ಈ ಪಿ ಸಿ ಓ ಎಸ್ ಬರುತ್ತದೆ.ಪಿ ಸಿ ಒ ಎಸ್ ಅನ್ನು ಮೊದಲಿಗೆ ಗುರುತಿಸುವ ಲಕ್ಷಣಗಳು ಏನು ಪಿಸಿಒಎಸ್ ನ ಆರಂಭಿಕ ಲಕ್ಷಣಗಳು ಹೀಗಿವೆ:

1-ಮುಟ್ಟಿನ ಸಮಯದಲ್ಲಿ ಹೆಚ್ಚಿದ ರಕ್ತಸ್ರಾವ

2-ತಿಂಗಳಿಗೆ ಸರಿಯಾಗಿ ಮುಟ್ಟಾಗದೇ ಇರುವುದು

3-ಮುಟ್ಟಿನ ದಿನಗಳಲ್ಲಿ ಕಡಿಮೆ ಪ್ರಮಾಣದಲ್ಲಿ ರಕ್ತಸ್ರಾವವಾಗುವುದು.

4-ಆಗಾಗ ಅನಿಯಂತ್ರಿತವಾಗಿ ರಕ್ತಸ್ರಾವವಾಗುವುದು

5-ಕತ್ತು ಹಾಗೂ ಚರ್ಮದ ಒಳ ಭಾಗಗಳಲ್ಲಿ ಕಪ್ಪಾಗುವುದು.

6-ಇದಕ್ಕಿದ್ದಂತೆ ಚರ್ಮದಲ್ಲಿ ಎಣ್ಣೆಯಂಶ ಮೂಡುವುದು ಮತ್ತು ಮೊಡವೆಗಳು ಉಂಟಾಗುವುದು.

7-ಮುಖದ ಮೇಲೆ ಬೇಡದ ಕೂದಲುಗಳು ಬೆಳೆಯುವುದು ಮತ್ತು ದೇಹದ ಇತರ ಭಾಗಗಳಲ್ಲಿ, ಗಲ್ಲ ಎದೆ,ಕತ್ತು, ಬೆನ್ನು ಈ ಭಾಗದಲ್ಲಿ ಕೂದಲು ಬೆಳೆಯುವುದು.

8-ಬಂಜೆತನ

9-ಕೂದಲು ಉದುರುವುದು

10-ದೇಹದಲ್ಲಿ ಇನ್ಸುಲಿನ್‌ ಪ್ರಮಾಣ ಹೆಚ್ಚುವುದು

11-ಮೂಡ್‌ ಸ್ಪಿಂಗ್‌ ಮಾನಸಿಕ ಸ್ವಾಸ್ಥತೆ ಕಮ್ಮಿಯಾಗುವುದು

12-ತೂಕ ಹಠತ್ತನೇ ಹೆಚ್ಚಳವಾಗುವುದು

13-ಮುಟ್ಟಿನ ದಿನಗಳಿಗೂ ಮೊದಲು ಅತಿಯಾದ ಬಾಯಾರಿಕೆ

14-ಮುಟ್ಟಿನ ದಿನಗಳಲ್ಲಿ ಹಾಗೂ ಮುಟ್ಟಿನ ದಿನಗಳ ಆರಂಭಕ್ಕೂ ಮೊದಲು ಅತಿಯಾಗಿ ಸಿಹಿ ತಿನ್ನಬೇಕು ಎನ್ನುವ ಬಯಕೆ ಮೂಡುವುದು.

ಈ ಎಲ್ಲಾ ಲಕ್ಷಣಗಳು ಇನ್ಸುಲಿನ್ ಅಂಡ್ರೋಜನ್ ಹಾರ್ಮೋನುಗಳ ಪ್ರಭಾವದಿಂದ ಉಂಟಾಗುವಂಥದ್ದು.

ಈ ರೋಗಲಕ್ಷಣಗಳನ್ನು ಹೊಂದಿರುವವರು ಇದನ್ನು ನಿರ್ಲಕ್ಷ್ಯ ಮಾಡಬಾರದು. ರಕ್ತ ಪರೀಕ್ಷೆ ಮಾಡಿಸಿಯೇ ಈ ಕಾಯಿಲೆಯನ್ನು ಕಂಡುಹಿಡಿಯಬೇಕಾಗಿಲ್ಲ ಮೇಲೆ ಹೇಳಿರುವ ಲಕ್ಷಣಗಳಲ್ಲಿ ಎರಡು ಮೂರಾದರೂ ಇದ್ದರೆ, ವೈದ್ಯರಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆಯನ್ನು ಶುರು ಮಾಡಬಹುದು.

ಈ ರೋಗದ ಕಾಂಪ್ಲಿಕೇಷನ್ಸ್

ಸಕ್ಕರೆಕಾಯಿಲೆ, ರಕ್ತದೊತ್ತಡ, ಹೃದ್ರೋಗ ಸಂಬಂಧಿ ಕಾಯಿಲೆ, ಬಂಜೆತನ, ಖಿನ್ನತೆ, ಹೆಪಟೈಟಿಸ್, ಪಾರ್ಶ್ವ ವಾಯು, ನಿದ್ರಾ ಉಸಿರು ಕಟ್ಟುವಿಕೆ, ಗರ್ಭಕೋಶದ ಕ್ಯಾನ್ಸರ್ ಉಂಟಾಗಬಹುದುಅದಕ್ಕಾಗಿ ಶೀಘ್ರವಾಗಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಮಾಡುವುದು ಒಳ್ಳೆಯದು.

ಪಿ ಸಿ ಓ ಡಿ ಹಾಗೂ ಪಿ ಸಿ ಓ ಎಸ್ ಎರಡು ರೋಗಗಳಲ್ಲಿ ಲಕ್ಷಣಗಳು ಏಕವಾಗಿದ್ದರು, ಅವುಗಳ ಪರಿಣಾಮ, ಬೇರೆ ಬೇರೆ.

ದೈಹಿಕ ಅಸ್ವಸ್ಥತೆ,ಸ್ಟ್ರೆಸ್ ಹಾಗೂ ಬೊಜ್ಜು ಹಾರ್ಮೋನುಗಳ ಅಸಮತೋಲನ ದಿಂದ ಉಂಟಾಗುತ್ತದೆ ಮಹಿಳೆಯ ಫಲವತ್ತತೆಗೆ ಇದು ಭಂಗ ತರುವುದಿಲ್ಲ ಜೀವನಶೈಲಿಯ ಮಾರ್ಪಡುವಿಕೆಯಿಂದ ಕೆಲವು ಔಷಧಗಳಿಂದ ಮಹಿಳೆಯಲ್ಲಿ ಅಂಡ ಉತ್ಪತ್ತಿಯಾಗಿ ಮಹಿಳೆಯ ಗರ್ಭ ಧರಿಸಬಹುದು ಗಂಭೀರ ತೊಡಕು ಉಂಟಾಗುವುದಿಲ್ಲ.

ಪಿ ಸಿ ಒ ಎಸ್ ಒಂದು ಗಂಭೀರ ಕಾಯಿಲೆ ಪಿಸಿಒಡಿಯ ತೀವ್ರರೂಪದ ಕಾಯಿಲೆ ಇದು ಮಹಿಳೆಯ ಫಲವತ್ತತೆಯ ಮೇಲೆ ಇದು ಪರಿಣಾಮ ಬೀರುತ್ತದೆ ಹಾಗೂ ದೈಹಿಕವಾಗಿ ಕಾಯಿಲೆಗಳನ್ನು ತರುವಂತ ಸ್ಥಿತಿ.

ಬಿಡುವಿಕೆ, ನಿಯಮಿತ ವ್ಯಾಯಾಮಗಳು ಪರಿಣಾಮಕಾರಿ ಫಲಿತಾಂಶಗಳನ್ನು ತೋರಿಸಿವೆ ಧ್ಯಾನ, ಫಲವಂತಿಕೆಯ ಚಿಕಿತ್ಸೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸುವುದು, ಮಾತ್ರೆಗಳ ಮೂಲಕ ಋತುಚಕ್ರವನ್ನು ನಿಯಂತ್ರಿಸುವುದು ಲ್ಯಾಪ್ರೋಸ್ಕೋಪಿಕ್ ಮೂಲಕ ಅಂಡ್ರೋಜನ್ ಪ್ರಮಾಣ ಹೆಚ್ಚಿಸುತ್ತಿರುವ ಅಂಡಾಶಯದ ಆಪರೇಷನ್ ಈ ಎಲ್ಲಾ ಚಿಕಿತ್ಸೆಯನ್ನು ಮಾಡಬಹುದು.

ಒಟ್ಟಿನಲ್ಲಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಾಣಬರುವ ಈ ಖಾಯಿಲೆಯನ್ನು ಮೊದಲೇ ಗುರುತಿಸಿ ಚಿಕಿತ್ಸೆ ಮಾಡಿಕೊಂಡರೆ ಮುಂಬರುವ ಎಷ್ಟೋ ಗುರುತರ ಖಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು. ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೆ ಒಳ್ಳೆಯದಲ್ಲವೇ.

ಡಾ. ರುಕ್ಮಿಣಿ ವ್ಯಾಸರಾಜ

Related post

Leave a Reply

Your email address will not be published. Required fields are marked *