ಓ ಮನುಜ,
ಸಾವಿನ ಸ್ವರಕೇ ಅಂಜಿಹೆ ನೀ,
ಸತ್ತ ಪ್ರತಿ ಸಲವು
ಬಿಟ್ಟ ಕೇವಲ ಕಣದಿಂ ಹುಟ್ಟಿ
ಅರಳಿ ಮರಳಿಹೆ ನಾ..
ಬದುಕ ನಡೆಸುವ ಕರ್ಮ ನಿನಗೆ
ಉಸಿರನ್ ಇತ್ತು,ಅನ್ನವ ಕೊಟ್ಟು
ಉಳಿಸಿ ಬೆಳೆಸುವ ಮರ್ಮ ಎನಗೆ …
ಬದುಕುವ ಬವಣೆಗೆ
ಕೊಲ್ಲುವ ಸ್ವಾರ್ಥಿ ನೀನಾದೆ
ನೀ ಎಷ್ಟೇ ಕೊಂದರು, ಕೊಟ್ಟು ಕಾಯುವ
ಬದುಕಿಗೆ ಅರ್ಥ ನಾನಾದೆ …
ಮರಣಕೆ ಮರುಗುವ ಮನುಜ
ಅರಿವನೆ ಮರೆತೆಯ ತನುಜ
ಕಷ್ಟದಲಿ ತಾಳ್ಮೆಯಿಂ ತಾಳು
ಬಂದಷ್ಟು ದಿನ ಬದುಕಿ ಬಾಳು …
ಸಮಾಜದ ಸಮರದೊಳ್
ಸತ್ಕಾರ್ಯವ ಮಾಡು,
ನಿಸರ್ಗವ ಅಳಿವ
ಸಾವಿಗೇ ಸಾವಾಗು,
ಪ್ರಕೃತಿಯ ಬದುಕಿನ
ಬಸಿರಿಗೇ ಉಸಿರಾಗು …
ಅ