ಪ್ರತ್ಯಗಾತ್ಮ ಚಿಂತನ (ನೇನಂಶಿ) – 54

ವರಸೆ ಚಳಿ ರೋಗಿಯನು ಮೂಡಣಕೆ ಮುಖಮಾಡಿ
ಅರಿಸಿನದ ಬಟ್ಟೆಯನು ನಾಡಿಯೆಡೆ ಕಟ್ಟು
ನರನ ಬಲಗೈ ನಾಡಿ, ನಾರಿಯರ ಎಡಗೈಗೆ
ವರಸೆ ಚಳಿ ನಿಲ್ಲುವುದು- || ಪ್ರತ್ಯಗಾತ್ಮ ||

ಎಂಟೆಂಟು ತುಂಬೆ ಹೂ, ತುಂಬೆ ಶ್ರೀತುಳಸಿ ಎಲೆ
ಎಂಟು ಕರಿ ಮೆಣಸೊಂದು ಬೆಳ್ಳುಳ್ಳಿ ಹಿಲುಕು
ಒಂಟಿ ವೀಳ್ಯ – ಲವಂಗ ಅರೆದು ನುಂಗಿಸಿ, ಮೇಲೆ
ಗುಟುಕ ನೀರ- || ಪ್ರತ್ಯಗಾತ್ಮ ||

ಒಂದು ಗಜ್ಜುಗ ಒಡೆದು ಅದರ ಬಿತ್ತವ ತೆಗೆದು
ಮಂದ ಕಲಗಚ್ಚಿನಲಿ ತೇದು ಹಚ್ಚಿದರೆ
ನೊಂದ ವೃಷಣದ ಊತ ಇಳಿದು ಮೊದಲಂತಹುದು
ಒಂದೆರಡು ಸಲ ಹಚ್ಚು- || ಪ್ರತ್ಯಗಾತ್ಮ ||

ಪರಿಪರಿಯ ಕಷ್ಟದಲಿ ಸಿಲುಕಿ ತೊಳಲಾಡುತಿರೆ
ಕರಿ ಇರುವೆ ಗುಣಿಸಾಗಿ ಸಕ್ಕರೆಯ ಹಾಕು
ಮೂರು ಮಂಗಳವಾರ ಬಿಡದೆ ನೀನಾಚರಿಸೆ
ಪರಿಣಾಮ ರಮಣೀಯ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *