ಪ್ರೀತಿಯ ಅನಂತತೆ

ಪ್ರೀತಿಯ ಅನಂತತೆ

ಬೆಲೆಕಟ್ಟಲಾರದ ಅನಂತ ಪ್ರೀತಿಯಿರಲು
ಕಲೆಯಾಗಲಾರದು ಎಂದಿಗೂ ಬದುಕು!
ಸೆಲೆಯಂತೆ ಮುಗಿಲತ್ತ ಚಿಮ್ಮುತಿರಲು..
ನೆಲೆ ಕಂಡೀತು ಮಬ್ಬಾದ ಬೆಳಕು!!

ಜಟಿಲತೆಯಲಿ ಪ್ರತೀ ಬಾಳು ಸಾಗಿರಲು
ಕುಟಿಲತೆಯಲಿ ಕಾಣದೆಂದಿಗೂ ನೆರಳು!
ಸರಳತೆಯಲಿ ಆ ದೈವ ಉತ್ತರಿಸಿರಲು..
ಮಧುರತೆಯಲಿ ಮಧುವಂತೆ ಜೀವನದೊಳು!!

ಜಗ್ಗದ ಜಗದಿ ಪ್ರೀತಿಯೇ ಸತ್ಯವಾಗಿರಲು
ಕಗ್ಗದಲಿರುವಂತೆ ಕಳೆವುದು ಬಾಳು!
ಸಗ್ಗದಲಿ ತನ್ನಿನಿಯನ ಜೊತೆಯಾಗಿರಲು..
ಬಗ್ಗದ ಶಕ್ತಿಯಲಿ ಬದುಕಿನ ಸರಳು!!

ಸುಮನಾ ರಮಾನಂದ

Related post

Leave a Reply

Your email address will not be published. Required fields are marked *