ಬಾಡಿಗೆ ತಾಯಿ

ಈ ಆಧುನಿಕ ಯುಗವು ದಿನದಿಂದ ದಿನಕ್ಕೆ ಹೈ ಮಾಸ್ಟ್ ಎಂಬಂತೆ ಮುಂದುವರೆಯುತ್ತಲಿದೆ, ,ಅಂಗೈ  ಬೆರಳ ತುದಿಯಲ್ಲೇ ಪ್ರಪಂಚ ಅಡಕವಾಗಿದೆ!

ಕ್ಯಾಬ್ ಸೌಲಭ್ಯವಿದೆ!

ಎರಡೇ ನಿಮಿಷದಲ್ಲಿ ನಿಮ್ಮ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತದೆ.

ಸ್ವಿಗ್ಗಿ, ಜೋಮ್ಯಾಟೋಗಳಿವೆ ಆರ್ಡರ್ ಮಾಡಿ 20 ನಿಮಿಷದೊಳಗೆ ಊಟ ನಿಮ್ಮ ಕೈಯಲ್ಲಿ!!

ಶರವೇಗದಲ್ಲಿ ಓಡುವ ಪ್ರಪಂಚದಲ್ಲಿ ಯಾರಿಗೂ, ಯಾರಿಗಾಗಿಯೂ, ಸಮಯವಿಲ್ಲ! ತಾಳ್ಮೆಯಿಲ್ಲ!! ಸಹನೆಯಂತೂ ಇಲ್ಲವೇ ಇಲ್ಲಾ!!!

 ಜನಸ್ತೋಮದಲ್ಲಿ ನುಗ್ಗಿಬಂದು,   ಅಂಬರದೆತ್ತರಕ್ಕೆ ಟಿಸಿಲೋಡೆದು, ಎದ್ದು ನಿಂತದ್ದು,

“ಸೆರೋಗೆಸಿ “

ಅಂದ್ರೆ, “ಸಂತಾನಕ್ಕಾಗಿ ಒಂದು ಹೆಣ್ಣಿನ ಗರ್ಭವನ್ನು ಬಾಡಿಗೆಗೆ ಪಡೆಯುವುದು…!!”

ಮಕ್ಕಳಿಲ್ಲವೆಂದು ಸಮಾಜದಲ್ಲಿ ನಿಂದನೆಗೋಳಗಾಗುವವರಿಗಿದು, “ಆಶಾ ಕಿರಣವೂ ಹೌದು, ಬಿಸಿಲು ಕುದುರೆಯೂ  ಹೌದು “

ಈಗೊಂದು ಪುಟ್ಟ ಕಥೆ

ಸುಮಾರು ವರ್ಷಗಳಿಂದ ಪ್ರೀತಿಸಿ, ಮನೆಯವರ ವಿರೋಧದಲ್ಲಿಯೂ ಮದುವೆಯಾದ ಜೋಡಿಗೆ ಅಂದು 11ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ!!!!!!!!

ದಂಪತಿಗಳು ಸಂತೋಷವಾಗಿದ್ದರೂ, ಯಾವುದೋ ತಿಳಿಯದ ನ್ಯೂನತೆ!

ಆದರೂ ಅವರಿಬ್ಬರಲ್ಲಿದ್ದ ಅನ್ಯೋನತೆಯಲ್ಲಿ, ಈ ನ್ಯೂನತೆ   ಎಂದೂ ತೊಡಕು ಮಾಡಲಿಲ್ಲ….

“Education travels us from thumb to pen….

Where as, technology turn’s from pen to thumb impression …”

ಈ ಸಾಲು ಇವರ ಜೀವನದಲ್ಲಿ ಅಕ್ಷರಶಃ ನಿಜವಾಗುತೆಂದ್ದು ಅವರಿಗಾದರೂ ಏನು ಗೊತ್ತಿತ್ತು?

ಮಕ್ಕಳಾಗಲಿಲ್ಲವೆಂಬ ಕೊರಗು, ತನ್ನ ಹೆಂಡತಿಯನ್ನ ಕಿತ್ತು ತಿನ್ನುತಿತ್ತೆ0ಬ ಸತ್ಯ ಅರಿಯದ ದಡ್ಡಿನೆನಲ್ಲ ಆಕೆಯ ಪತಿ.

ಆಸ್ಪತ್ರೆಯಾಯಿತು, ಒಂಟಿ ಅಶ್ವಥ ವೃಕ್ಷ ಹತ್ತಿಳಿದಾಯಿತು, ನಗರ ಬನದ ಪೂಜೆಯಾಯಿತು,11 ಮುತೈದೆಯರ ಕಾಲಿಗೆರಗಿ ಆಶೀರ್ವಾದವೂ ಪಡೆದ್ದಾದಾಯಿತು, ಸತತವಾಗಿ 11 ವರ್ಷದಿಂದ ಸಂತಾನ ಲಕ್ಷ್ಮಿ ಪೂಜೆಯೂ ಆಯಿತು..ಆದರೆ ಫಲಿತಾಂಶ ಮಾತ್ರ

 “ಸೊನ್ನೆ”!!

ಸಮಸ್ಯೆ ಇರುವುದಾದರೂ ಯಾರಲ್ಲಿ? ಎಂಬುದನ್ನು ತಿಳಿದುಕೊಳ್ಳಬೇಕೇನಿಸಿತು ಆಕೆಗೆ.

ತನ್ನ ಗಂಡನಲ್ಲಿ ಮೊರೆಯಿತ್ತಾಗ ಅವನ0ತೂ ಸಂಪೂರ್ಣವಾಗಿ ನಿರಾಕರಿಸಿಬಿಟ್ಟ!

ಆದರಿಲ್ಲಿ ಆಕೆ ತನ್ನ ಸಂಪೂರ್ಣ ವಿಚಾರಧರೆಯನ್ನ ಆತನ ಮುಂದೆ ಮಂಡಿಸಿರಲಿಲ್ಲ!

ಒಂದು ವೇಳೆ ಸಮಸ್ಯೆ ತನ್ನ ಗಂಡನದ್ದೇ ಆದರೆ,  ಆ ಹೊಣೆಯನ್ನು ತಾನು ಹೊತ್ತುಕೊಂಡು, ಒಂದು ಅನಾಥ ಮಗುವನ್ನು ದತ್ತು ಪಡೆದುಕೊಂಡರಾಯಿತು ಎಂಬ ಆಕೆಯ ನಿರ್ಧಾರ, ನಾಲಿಗೆ ಒಳಗೆ ನಿಂತಿತು.

ದಿನಗಳು ಊರುಳತೊಡಗಿದವು,

ತುಂಬಾ ದಿನದ ನಂತರ, ಮನೆಗೆ ಬಂದ ಗೆಳತಿಯನ್ನು ಪ್ರೀತಿಯಿಂದ ಆದರಿಸಿದಳು.

 ವಿಚಾರ ವಿನಿಮಯಗಳಾದವು..

ಆಕೆಯ ನೋವನ್ನರಿತ ಗೆಳತಿ, ಹೊರಡುವ ಮುನ್ನ ಸಲಹೆಯನ್ನಿತ್ತಳು,

ನೋಡೇ ಟೆಕ್ನಾಲಜಿ ತುಂಬಾ ಮುಂದಿದೆ, ನಿನ್ನ ಗಂಡ ಆಸ್ಪತ್ರೆಗೆ ಹೋಗಲಿಲ್ಲವೆಂದರೆ ಏನಂತೆ?

ನೀನು ಚೆಕಪ್ ಮಾಡಿಸಿಕೊ,

ನಿನ್ನಲ್ಲಿ ಸಮಸ್ಯೆವಿಲ್ಲವೆಂದರೆ, ಸಮಸ್ಯೆ ಯಾರದೆಂದು ತಿಳಿದ ಹಾಗೆ ತಾನೇ?

ಎಂದಾಗ, ಸರಿ ಎನಿಸಿತು..

 ಈಗ ಯೋಜನೆಗೆ ಬಿದ್ದಳು, ಒಂದು ವೇಳೆ ಸಮಸ್ಯೆ ತನ್ನ ಗಂಡನದಾದರೆ ತನ್ನ ಮೇಲೆ ತಪ್ಪು ಹೊರಿಸಿ ಕೊಂಡರಾಯಿತು ಎಂದುಕೊಂಡಳು,

ಒಂದು ಪಕ್ಷ ಸಮಸ್ಯೆ ಇರೋದು ತನ್ನಲ್ಲೇ ಎಂದಾದರೆ….?

ಪ್ರೆಶ್ನೆ ಉದ್ಭವಿಸಿ ಗೆಳತಿಯ ಮುಖ ನೋಡಿದಾಗ,

ಅದಕ್ಕೂ ಸಲಹೆಯನ್ನಿತ್ತಲು ಗೆಳತಿ..

“ಬಾಡಿಗೆ ತಾಯಿ”

ಆಸ್ಪತ್ರೆಗೆ ಬಾ ಎಲ್ಲಾ ವಿವರಿಸಿ ಹೇಳ್ತೀನಿ ಅಂದಾಗ ತಡ ಮಾಡಲಿಲ್ಲ….

ತನ್ನ ಗೆಳತಿ ಕೆಲಸ ಮಾಡುತಿದ್ದ ಆಸ್ಪತ್ರೆಗೆ ದೌಡಯಿಸಿದಳು, ಬಾಡಿಗೆ ತಾಯಿ ಎನ್ನುವ ಕಾನ್ಸೆಪ್ಟ್ ಬಗ್ಗೆ ತಿಳಿದುಕೊಳ್ಳಬೇಕೆಂದು ಹವಣಿಸಿದಾಗ,

ತನ್ನ ಗೆಳತಿ ಅದಕೆಲ್ಲಾ ಪರದೆ ಎಳೆದಳು…

 ಮೊದಲು ನೀನು ತಪಾಸಣೆ ಮಾಡಿಸಿಕೊಳ್ಳಬೇಕು, ಸಮಸ್ಯೆಯಾರದೆಂದು ಗೊತ್ತಾಗದೆ, ಯಾವ ಡಾಕ್ಟರ್ ಕೌಂಸ್ಲಿಂಗ್ ಮಾಡೋದಿಲ್ಲ!

ಎಂದಾಗ,

ತಪಾಸಣೆ ನಡೆಯಿತು, ಫಲಿತಾಂಶವೂ ಹೊರಬಿದ್ದಿತು

“ಸಮಸ್ಯೆ ತನ್ನಲ್ಲೇ ಇದೆ”

ಈಗ ಸ್ವಲ್ಪ ನಿರಾಳವಾದಳು ಹುಡುಗಿ!

ತನ್ನ ಗಂಡನಲ್ಲಿ ಯಾವ ದೋಷವೂ ಇಲ್ಲವೆಂದು..

ಡಾಕ್ಟರ್ ಬಳಿ ಈ “ಬಾಡಿಗೆ ತಾಯಿ”ಯ ಸವಿವರಕ್ಕಾಗಿ ಅವರ ಮುಂದೆ ಕುಳಿತಳು.

ಸ್ತ್ರೀ ತಜ್ಞೆ, ತಾನು ಹೇಳಬೆಕಾಗಿದ್ದನ್ನು ಹೇಳರಾ0ಭಿಸಿದಳು,

ತನ್ನ ಗೆಳತಿಯನ್ನ ಈ ಪರಿಸ್ಥಿತಿಯಲ್ಲಿ ನಿರೀಕ್ಷೆಸಿರಲಿಲ್ಲ ವೈದ್ಯೇ.

ಆದರೂ ಈಗವಳು ತನ್ನ ಕರ್ತವ್ಯ ಮಾಡಬೇಕಷ್ಟೆ!

ಬಾಡಿಗೆ ತಾಯ್ತಾನದ ಎಲ್ಲಾ ವಿಷಯಗಳನ್ನು ಹೇಳುತ್ತಾ, ಕೊನೆಯ ಹಂತಕ್ಕೆ ಬಂದಳು,

ಈ  surrogacy  ಯಾರಿಗೆ ಉಪಯೋಗವಾಗುತ್ತೆoದರೆ,

ಹೆಣ್ಣಿನ ಗರ್ಭಕೋಶದಲ್ಲಿ  ಸಮಸ್ಯೆ ಇದ್ದು, ಅಲ್ಲಿ ಮಗುವನ್ನು ಬೆಳಸಲಿಕ್ಕೆ ಆಗುವುದಿಲ್ಲವೆಂದಾಗ, ಮಾತ್ರ ಬಾಡಿಗೆ ತಾಯಿ ಮೊರೆ ಹೋಗಬೇಕಾಗುತ್ತೆ!

ಅಲ್ಲಿ IVF ಮಾಡಲೂ, ಸಾಧ್ಯವಿಲ್ಲದಿದ್ದಾಗ ಮಾತ್ರ ಬಾಡಿಗೆ ಗರ್ಭ ಬೇಕಾಗುತ್ತದೆ!

ತುಂಬಾ ಹಣ ಖರ್ಚಗುತ್ತೆ, ಒಮ್ಮೆ ಯೋಚಿಸು, ಅನಾಥಶ್ರಮದ ಮಕ್ಕಳನ್ನ ದತ್ತು ಪಡೀಬಹುದಲ್ವಾ? ಎಂಬ ಸಲಹೆ ನೀಡಿದಾಗ, ಅಷ್ಟಾಗಿ ಇಷ್ಟವಾಗಲಿಲ್ಲ ಈಕೆಗೆ..

ಆಕೆ ಬಾಡಿಗೆ ತಾಯ್ತಾನದ ಬಗ್ಗೆ ಅತೀ ಉತ್ಸಕಳಾಗಿದ್ದಳು!

ಅದರ ಬಗ್ಗೆ ವಿವರಣೆ, ವಿಧಾನ  ಕೇಳತೊಡಗಿದಳು,

“ನಿನ್ನ ಗಂಡನ ವೀರ್ಯಾಣು, ಹಾಗೂ ನಿನ್ನ ಅಂಡಾಣುವಿನ ಸಹಾಯದಿಂದ, ಪ್ರನಾಳ ಶಿಶು ಬೆಳಸಿ ತಾಯಿಯ ಗರ್ಭದಲ್ಲಿ ಕಸಿ ಮಾಡುವುದು, ಆದರೆ ಆ ಗರ್ಭ ಇನ್ನೊಂದು ಹೆಣ್ಣಿನದ್ದಾಗಿರುತ್ತದೆ “

ಈಗೊಂದು ಪ್ರೆಶ್ನೆ ಉದ್ಭವಿಸಿತು,

DNA ಮಾಡಿಸಿದಾಗ ಮಗು ಯಾರದೆಂದು ಇರುತ್ತದೆ?ಎಂದಾಗ..

“ನಿನ್ನ ಹಾಗೂ ನಿನ್ನ ಗಂಡನದ್ದು”

ಅಂತೆಯೇ ಬರುತ್ತೆ ಎಂದಾಗ,

ಅತ್ಯಂತ ಸಂಭ್ರಮಪಟ್ಟಳು.

ಈಗ ಸರಿಯಾಗಿ ಕೇಳಿಸಿಕೋ,

ಎಷ್ಟೋ ಆಸ್ಪತ್ರೆಯಲ್ಲಿ ಬಾಡಿಗೆ ತಾಯಿಯನ್ನು ಪರಿಚಯಿಸುವುದಿಲ್ಲ!

ಇಲ್ಲೂ ಅಷ್ಟೇ!

ಎಂದಾಗ ಕತ್ತಾಡಿಸಿ ಎದ್ದು ಹೊರಬಿದ್ದಳು,

ಆದರೆ ಈಕೆ ಈ ವಿಚಾರವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಳು..

ಗಂಡನ ಮುಂದೆ ನಡೆದ ಪ್ರತಿಯೊಂದು ಘಟನೆಯನ್ನು ಒಂದಕ್ಷರ ಬಿಡದೆ ವಿವರಿಸಿದಾಗ,  ತನ್ನ ಹೆಂಡತಿಯ ಮುಖವನೊಮ್ಮೆ ನೋಡಿದ,

ಎಲ್ಲಿಲ್ಲದ ಉತ್ಸಾಹ ಆಕೆಯ ವದನದಲ್ಲಿ ತುಂಬಿತ್ತು.

“ಸರಿ ಹಾಗೆ ಮಾಡೋಣವೆಂದ”

ಎಲ್ಲೋ ನಂದಿ ಹೋಗುತ್ತಿದ್ದ ಆಕೆಯ ಜೀವನ ಜ್ಯೋತಿ, ಮತ್ತೆ ಪ್ರಕಾಶಿಸಿದ ಹಾಗೆ ಅನ್ನಿಸಿತು,

ಆದರೆ ಅದು ಬೆಂಕಿಯಗುತ್ತದೆಂದು ಆ ಕ್ಷಣಕ್ಕೆ ಆಕೆಗೆ ತಿಳಿಯಲ್ಲಿಲ್ಲ.

ಮಾರನೇ ದಿನ ತಡಮಾಡದೆ ಆಸ್ಪತ್ರೆಗೆ ಬಂದು ಎಲ್ಲ ಫಾರ್ಮ್ಯಾಲಿಟಿಸ್ ಮುಗಿಸಿದರು,

ಡಾಕ್ಟರ್ ಮುಖ ನೋಡಿ,

ಆ ಹುಡುಗಿಯನ್ನು ನಂಗೆ ಪರಿಚಯ ಮಾಡಿ ಕೊಡ್ತೀರಾ ಎಂದಾಗ, ಡಾಕ್ಟರ್ ಸುತರಾಮ್ ಒಪ್ಪಲಿಲ್ಲ!

ಸಧ್ಯವಿಲ್ಲ ಎಂದು ಕಡ್ಡಿ ತುಂಡಾದoತೆ ಹೇಳಿಬಿಟ್ಟರು..

ಅವಳ ಮುಖ ಚಿಕ್ಕದಾಯಿತು, ಇದು ತನ್ನ ಗಂಡನಿಗೆ ಸಹ್ಯವಾಗಲಿಲ್ಲ,

ಅವನು ತುಂಬಾ ಹೊತ್ತು ಬೇಡಿಕೊಂಡಾಗ ಒಪ್ಪಿಕೊಂಡಳು ವೈದ್ಯೆ, ಆದರೆ ಅದು ಕೂಡ ಆಸ್ಪತ್ರೆಯ ವೇಳೆ ಮುಗಿದ ನಂತರ!

ಸಂಜೆ ಯಾವುದೋ ಕಾಫಿ ಡೇ ನಲ್ಲಿ, ಭೇಟಿ ನಿಗದಿಯಾಯಿತು, ಸಮಯಕ್ಕೂ ಮುಂಚೆ ತಯಾರಾಗಿ, ಗಂಡನಿಗೆ ಅವಸರಿಸುತ್ತಿದ್ದಾಳಾಕೆ!,

ತುಂಬಾ ಸಂಭ್ರಮದಲ್ಲಿದಂತೆ ಕಂಡಾಗ ಅವನ ಮನಕ್ಕೆ ಹಾಯೆನಿಸಿತು,

ಗೌರ ವರ್ಣ, 26ವರ್ಷ, ಸಪೂರ ಸುಂದರ, ನೋಡಲು ಥೇಟು ಲಕ್ಷ್ಮಿಯಂತೆ!

ಸಂಜೆ ಬಂದಾಗಿನಿಂದ ಇದನ್ನೇ ಹೇಳಿ ಹೇಳಿ ತನ್ನ ಗಂಡನ ತಲೆ ತಿನ್ನುತಿದ್ದಳು,

ಅವ ಅದಾಗಲೇ ನಿದ್ರೆ ಹೋಗಿದ್ದ.

 ಹೀಗೆ ಆ ಹುಡುಗಿಯನ್ನು ಪರಿಚಯ ಮಾಡಿಕೊಂಡು ವಾರಕ್ಕೊಮ್ಮೆ ಆಕೆಯ ಮನೆಗೆ ಹೋಗುವುದು, ರುಚಿಕಟ್ಟಾಗಿ ಊಟ ತಯಾರಿಸಿ ಆಕೆಯನ್ನು ನೋಡಿಕೊಳ್ಳುವ ವರೆಗೂ ಅವರಿಬ್ಬರ ಸಂಬಂಧ ಗಟ್ಟಿಯಾಗತೊಡಗಿತು…

 ಇದೆಲ್ಲಾ ಆಸ್ಪತ್ರೆಯ ನಿಯಮಕ್ಕೆ ವಿರೋಧವಾಗಿದ್ದರು, ನಿಯಮವನ್ನು ಉಲ್ಲಂಘಿಸಿದ್ದರೂ, ಯಾರೊಬ್ಬರೂ ತಲೆಕೆಡಿಸಿಕೊಳ್ಳಲಿಲ್ಲ!

ಹೀಗೊಂದು ಸಂಜೆ, ಯಾವ ಸೂಚನೆ ಕೊಡದೆ, ತನ್ನ ಮುಗುವನ್ನು ಹೊತ್ತ ತಾಯಿಗೆ ಏನಾದರು ಸಿಹಿ ತಯಾರಿಸಿ, ಸಂಭ್ರಮದಿಂದ ಆಕೆಯ ಮನೆಗೆ ಹೊರಟಳು.

ಸುರ್ಪ್ರೈಸ್ ಕೊಡಲು, ಅವಳಿಗೆ ತಿಳಿಸದೆ ಮನೆಗೆ ಹೋದಾಗ, ಆಕೆ ಕಣ್ಣಾರೆ ಕಂಡ ದೃಶ್ಯ ಆಕೆಯನ್ನು ಬೆಚ್ಚಿ ಬೀಳಿಸಿತು,

ಕನಿಷ್ಠ ಪಕ್ಷ, ಬೀದಿ ಬಾಗಿಲನ್ನು ಹಾಕದೆ, ಸಂಜೆ ಏರುವ ಹೊತ್ತಲ್ಲಿ, ತನ್ನ ಗಂಡನ ತೆಕ್ಕೆಯಲ್ಲಿ ನಲುಗುತಿದ್ದ ಆ ಹುಡುಗಿಯನ್ನು ಕಂಡವಳ ಹೃದಯ ಚೂರಾಗಿತ್ತು!

ಅದ್ಯಾವ ಭಂಗಿಯೋ?

ಅದೆಂಥ ಕೆಟ್ಟ ಸ್ಥಿತಿಯೋ?

ಇದನೆಲ್ಲ ಕಂಡವಳಿಗೆ, ಮನುಷ್ಯ ರೂಪದ ಎಲ್ಲ ಸಂಬಂಧದ ಮೇಲೆ ಅಸಹ್ಯ ಭಾವವನ್ನು ಅನುಭವಿಸಿ, ಹೇಸಿಗೆ ಹುಟ್ಟಿಕೊಂಡಿತು..

ಪರಮ ಉನ್ಮಾದದಲ್ಲಿದ್ದವರನ್ನು ತೊಂದರಿಸದೆ, ಅಲ್ಲಿಂದ ಹೆಜ್ಜೆ ಕಿತ್ತಿದಳು,

ಮೌನದಲ್ಲಿ ಕರೆಯದೆ ಬರುತ್ತಿದ್ದ ಕಣ್ಣೀರು ಬೀದಿ ತಲುಪುತಿದ್ದಂತೆ ಆಕೆಯ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿತು!

ಗಂಡಸರಿಗೆ life starts at 40  ಎಂಬ ಮಾತು ಅದೇಷ್ಟು ಸತ್ಯವೆನಿಸಿತು ಆಕೆಗೆ

ಆಕೆಯ ಗಂಡ ಸಂಜೆ ಮನೆಗೆ ಬಂದವನೇ ಹೆಂಡತಿಯನ್ನು ಹುಡುಕಲಾರಾಂಭಿಸಿದ…

ಆದರೆ ಆಕೆ ಬರೆದಿಟ್ಟ ಪತ್ರ ಸಿಕ್ಕಿತು..

“I am tired “

ನನ್ನ ಹುಡುಕುವ ಪ್ರಯತ್ನ ಖಂಡಿತ ಬೇಡ ಏಕೆಂದರೆ…

“You will be tired too”

****

ಎಲ್ಲ surrogacy motherhood ನಲ್ಲೂ ಈ ರೀತಿಯಲ್ಲಿ ಆಗುತ್ತೆ0ದು ಅಲ್ಲ!

ಪ್ರತಿ ಸಂದರ್ಭಕ್ಕೂ, ಪ್ರತಿ ಅನುಕೂಲಕ್ಕೂ.

ಸಾಧಕ ಮತ್ತು ಬಾಧಕ ಎರಡೂ ಇರುತ್ತದೆ!

ನೀವೆದಿತಾ ರಾಮ್
ಹಗರಿಬೊಮ್ಮನಹಳ್ಳಿ.
ವಿಜಯನಗರ…

ಚಿತ್ರ ಬರಹ ಹಾಗು ಕೃಪೆ : ಲಕ್ಷ್ಮೀನಾರಾಯಣ್ ಟಿ

ಹಾಗು

https://intendedparents.com/
https://www.thestar.com.my/

Related post