ಬಾರೊ ಬಾರೊ ಮಳೆರಾಯ
ಚಿಗುರಿದ ಪೈರುಗಳೆಲ್ಲವು ಬಾಡಿ
ಕೊರಗಿ, ಸೊರಗಿ ಬಾಡುತಿದೆ,,,
ಅನ್ನದಾತರ ಅಂಗಳ ನೋಡು
ಬಳಲಿ,ನರಳಿ ಒಣಗುತಿದೆ,,
ಬಾರೊ, ಬಾರೊ ಮಳೆರಾಯ,,
ನೀ ಬಂದರೆ ಜಗವೆ ಹಸಿರುಮಯ.!!೧!!
ಪ್ರಾಣಿ ಪಕ್ಷಿಗಳೆಲ್ಲವು ನೋಡು
ಮೇವಿಗು,ಕಾಳಿಗು ಹುಡುಕಾಟ,,
ತೀರದ ಹಸಿವಿನ ಹೊಟ್ಟೆಯ ಪಾಡು
ದಾಹವ ತಣಿಸಲು ಪರದಾಟ,,
ಬಾರೊ, ಬಾರೊ ಮಳೆರಾಯ,,,
ನೀ ಬಂದರೆ ಜಗವೆ ಹಸಿರುಮಯ.!!೨!!
ಭೂಮಿ ತಾಯಿಯ ಒಡಲು ಕಾದಿದೆ
ಪಾದರಕ್ಷೆಯು ಬೆಂದು ಹೋಗಿತು
ಬೆಳಗುವ ರವಿಯ ಕಾವು ಏರಿದೆ
ನೆರಳಿನ ಮರದ ಎಲೆಗಳುದುರಿತು.
ಬಾರೊ, ಬಾರೊ ಮಳೆರಾಯ,,,
ನೀ ಬಂದರೆ ಜಗವೆ ಹಸಿರುಮಯ.!!೩!!
ಅನ್ನದಾತನಿಗೆ ನೆಮ್ಮದಿ ಇಲ್ಲ
ನೀನು ಬಾರದೆ, ಹೀಗೆ ಮುನಿದರೆ
ತುತ್ತು ತುತ್ತಿಗು ಕಲಹವೆ ಎಲ್ಲ
ಈಗಲು ನೀನು ಬಾರದಾದರೆ,,,
ಬಾರೊ, ಬಾರೊ ಮಳೆರಾಯ,,,
ನೀ ಬಂದರೆ ಜಗವೆ ಹಸಿರುಮಯ.!!೪!!

ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ