ಭರವಸೆ

ಬೆಂಕಿಯ ಕಾವು ಸೋಕಿ
ಪದರುಗುಟ್ಟುವ
ಪತಂಗದಂತಾದ
ಮನವ ಹೊತ್ತು,
ದೇವರಮನೆಯಲಿ
ಹಚ್ಚಿಟ್ಟ ಸೊಡರಿನೆದುರು
ಮೌನದಲಿ ಕುಳಿತಾಗ,
ನಡುಗುತ್ತಿದ್ದ ಮನಕೆ
ಬೆಚ್ಚನೆಯ ಭಾವವೊಂದು
ಭರವಸೆಯನಿತ್ತಂತಿದೆ!!

ದೇವರಿಗಾಗಿ ಹಚ್ಚಿದ
ಗಂಧದ ಕಡ್ಡಿ ಮತ್ತು
ಕರ್ಪೂರಗಳುರಿದು
ಗಾಳಿಯಲಿ ಸೇರಿದಂತೆ,
ಅಸಡ್ಡೆ, ಅವಮಾನದ
ಕಟು ಮಾತಿನಿರಿತದಿಂದ
ಮನಕಾದ ನೋವು,
ತಂತಾನೆ ಕರಗಿ ನೀರಾಗಿ
ಮನ ಹಗುರಾಗಿ,
ಬದುಕು ಹಸನಾದಂತಿದೆ !!

ಶ್ರೀವಲ್ಲಿ ಮಂಜುನಾಥ

Related post