ಮಂಜಿನ ಹನಿ
ಕಾವಳದ ರಾತ್ರಿ ಸರಿದಾಯ್ತು
ನಲ್ಬೆಳಕಿನ ನಸುಕು ಮೂಡಿತು
ಭುವಿಯ ಮೇಲೆ ಚಿತ್ತಾರ ಅರಳಿತು
ಕಾನನದ ಅಂಚಿನಲಿ ನಡುಮಧ್ಯ ನಾಡಿನಲಿ
ತರುಲತೆ ಪರ್ಣಗಳಲಿ ಹೊಳೆಯುತಿಹ
ಬೆಲೆ ಕಟ್ಟಲಾರದ ಮುತ್ತುಗಳು
ಪ್ರತಿದಿನವೂ ಪಕ್ಷಿ ಕೀಟಗಳಿಗಾಸರೆ
ಬರಗಾಲದಲಿ ಪಶುಪಕ್ಷಿಗಳಿಗಾಸರೆ
ಅವರೆ ತೊಗರಿ ಬೆಳೆಗಳ ಸೊಗಡಿನಾಸರೆ
ನಿನ್ನಯ ಮುತ್ತಿನ ಪ್ರತಿ ಬಿಂದು
ಮೂಡಿಸಿದೆ ಮನದಲಿ ಹರ್ಷವಿಂದು
ನಿನ್ನ ರೂಪಕೆ ಶರಣು ಓ ಹಿಮಬಿಂದು

ಸಿ.ಎನ್. ಮಹೇಶ್