ಮನವಿ – ಕೃಷ್ಣಾ ಮೇಲ್ದಂಡೆ ಯೋಜನೆ

ಮಾನ್ಯರೇ ನಮಸ್ಕಾರ….

ಕೃಷ್ಣಾ ಮೇಲ್ದಂಡೆ ಯೋಜನೆ ಕ್ಕ್ರಿಯಾಕ್ರಮ ಯೋಜನೆ ಅನುಷ್ಠಾನ ತತ್ಸಂಬಂಧಿತ ಪುನರ್ವಸತಿ ಹಾಗೂ ಅದರನುಗುಣವಾಗಿ ಮಾಡಿದ್ದು ಮಾಡಬೇಕಾಗಿದ್ದು ವಿಷಯ ವಿಚಾರಯೋಗ್ಯ….

ಸಾಂಘಿಕವಾಗಿ ನಾವೆಲ್ಲರೂ ಬರಲಿರುವ ಸನ್ನಿವೇಶಗಳ ಬಗ್ಗೆ ಹಾಗೂ ತೆಗುದುಕೊಳ್ಳಬೇಕಾಗದ ನಿರ್ಧಾರಗಳ ಬಗ್ಗೆ ಪ್ರಸ್ತುತ ಈ ಒಡನಾಟ ಮನ್ವಂತರವಾಗಬೇಕು.

ಅಂದಾಜು ೭೦ ಋತುಗಳ ಸಂಘರ್ಷ ಕಂಡ ಕೃಷ್ಣಾ ಮೇಲ್ದಂಡೆ ಯೋಜನೆ ಅನುಕಂಪ ಗಿಟ್ಟಿಸಿಕೊಳ್ಳುವ ಅಥವಾ ಕೃಪಾಪೋಷಿತವಾಗಬಾರದು..ನಮ್ಮೆಲ್ಲರ ತ್ಯಾಗ ಸಹಿಷ್ಣುತೆಯ ದ್ಯೋತಕವಾಗಲೇಬೇಕು…

Photo:https://bagalkot.nic.in/ukp/

ಹತ್ತಾರು ಬಂದಾರು ತಿಳುವಳಿಕೆ ತಂದಾರು ಮನೆಮನೆಗು ಕನಸಿನ ತೊಟ್ಟಿಲು ಕೊಟ್ಟಾರು…. ಏರಿಳಿತದ ಜೀವನದ ನಿಟ್ಟುಸಿರು ಬಿಟ್ಟರೇ ನಮಗೇನು ಕೊಟ್ಟಾರು ???

ನಾಲ್ಕೆಮ್ಮೆ… ಎಂಟೆತ್ತು ಕಟ್ಟುವ ತಾಕತ್ತು ; ನೂರಾರು ಎಡೆಕೊಡುವ ನಮ್ಮೆಲ್ಲರ ಗಮ್ಮತ್ತು… ಎರಡೆರಡು ಪಡಸಾಲಿ; ನಾಲ್ಕ್ವಾಲೆಯ
ಅಡಿಗಿಮನಿ ; ಮಲಗಾಕ ಅಷ್ಟಪೈಲ ಇದ್ದವರು ನಾವೆಲ್ಲಾ……….ತಗಡಿನ ಸೂರ ನೋಡಿ ಕೆನೆಹಾಲ ಮೊಸರ ಕೊಂಡುತಿನ್ನುವರಾಗಿ ಸರ್ಕಾರದ ಮುಂದೆ ಕೈಮುಗಿದು ಕೇಳುವದ ??

ಯೋಚನೆ ಪ್ರಭುದ್ಧವಾಗಬೇಕು ; ಪ್ರತಿಯೊಬ್ಬ; ಕೃಷ್ಣಾ ಯೋಜನೆ ಬಾಧಿತ ಬೆಳೆಯುವಂತಾಗಬೇಕು…
ನಿಟ್ಟುಸಿರು ಕೊನೆಯಾಗಿ ; ಹಚ್ಚಹಸಿರು ಮರುಕಳಿಸಬೇಕು;
ಸರ್ಕಾರ ಎಚ್ಚೆತ್ತು … ಕೃಪೆಮಾಡಿವಿ ಎಂದೆನದೆ…
ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಪ್ರಾಧಿಕಾರ ರಚಿಸಿ ನಮ್ಮೆಲ್ಲರ ಹಕ್ಕು ಹಾಗೂ ಜೀವನಸ್ಫೂರ್ತಿ ಇಮ್ಮಡಿಸಬೇಕು ; ಗತವೈಭವ ಸಿಗಲೇಬೇಕು.

ಮಾಧವ (ಅಪ್ಪಣ್ಣಾ) ಯದುನಾಥ ಜೋಶಿ
ಗಲಗಲಿ / ಬೆಂಗಳೂರು…

Related post

Leave a Reply

Your email address will not be published. Required fields are marked *