ರವಿರಶ್ಮಿ
ನಡುನೆತ್ತಿಯಲಿ ನಿಂತ ಸೂರ್ಯನ
ಪ್ರಭೆಯು ಭೂತಳವ ಹುಡುಕುತಿದೆ
ರವಿಕಿರಣದಾಟಕ್ಕೆ ನೆರಳಿನ ನರ್ತನ
ಹೊನ್ನ ನೇಸರನ ನೇರ ರಶ್ಮಿಯು
ಭೂ ಸ್ಪರ್ಷವ ಮಾಡಲು ಕೆಂಪಾಗಲು
ಇಳೆಯ ಒಡಲು ಹಸಿರಾಗುವುದು
ಎಳೆ ಹಸಿರ ಗಿಡಬಳ್ಳಿಗಳು ಕಡುಬಣ್ಣಕೆ ತಿರುಗಿ
ಭೂ ಒಡಲಾಳದ ಜೀವಜಲ ಗಗನ ಸೇರಿ
ಬಾನಲ್ಲಿ ಕರಿಮೋಡವು ಮೂಡುವುದು
ಇಳೆಯ ತಿರುಗಾಟದಿ ಚಂದಮಾಮನು
ಹಗಲಿರುಳು ಕ್ಷೀಣಿಸುತಲಿ ವೃದ್ದಿಸುತಿಹನು
ಪಕ್ಷಪಕ್ಷಕೂ ಕುಂದಿ ಬೆಳಗುತಿಹನು.
ದಿನವೂ ಕಾಣುವ ನೇಸರನು ಅದೇ ಸೊಬಗಿನಲಿ
ತಿರುಗಾಡುತಾ ಭೂಮಿಯ ಮೇಲೆ ಕೃಪೆಯಿರಿಸಿ
ಕಣ್ಣು ಮುಚ್ಚಾಲೆಯಾಡುವನು ಮೋಡಗಳಲಿ
ನೇಸರನಿದ್ದರ ಮಳೆ
ಮಳೆಯಿದ್ದರೆ ಇಳೆ….
ಇಳೆ ಮಳೆಗಳ ಒಡನಾಟದಲಿ
ಬೆಳೆಯುತಿಹೆವು ನಾವು ಬೆಳೆ.
![](https://sahityamaithri.com/wp-content/uploads/2023/12/Mahesh-C-N.jpg)
ಸಿ.ಎನ್. ಮಹೇಶ್
2 Comments
It’s good
ತುಂಬ ಅರ್ಥವತ್ತಾದ ಬರಹ💐🏆
ತಮ್ಮ ಬರೆಯುವ ಹವ್ಯಾಸಕ್ಕೆ ಶುಭ ಹಾರೈಕೆಗಳು 💐