ರಾಮ ಭಕ್ತ ಹನುಮ

ರಾಮ ಭಕ್ತ ಹನುಮ

ಆಂಜನೇಯಗೆ ಶರಣು |
ನಮ್ಮ ಮಹಿಮಾನ್ವಿತನಿಗೆ ಶರಣು ||
ವಾಯುಪುತ್ರಗೆ ಶರಣು |
ನಮ್ಮರಾಮ ಭಕ್ತನಿಗೆ ಶರಣು || ||೧||

ಅಂಜನಿ ಪುತ್ರ ಹನುಮಂತ
ಕೇಸರಿ ತನಯ ಹನುಮಂತ |
ಸುಗ್ರೀವ ಸಚಿವ ಹನುಮಂತ
ಮಹಾ ಶಕ್ತಿವಂತ ಹನುಮಂತ || ೨||

ಕೇಳೋಣ ಆಂಜನೇಯನ ಮಹಿಮೆಯನು
ನೋಡೋಣ ಅವನ ಪರಾಕ್ರಮವನು |
ಸಾಗರವನ್ನು ದಾಟಿದನು
ಸೀತಾ ಮಾತೆಯ ಹುಡುಕಿದನು|| ||೩||

ಲಂಕಿಣಿಯನು ಯುದ್ಧದಿ ಕೊಂದನು
ಲಂಕೆಗೆ ಸೇತುವೆ ಕಟ್ಟಿಸಿದನು|
ಸಂಜೀವಿನಿ ಬೆಟ್ಟವನು ತಂದನು
ಸೀತಾ ಮಾತೆಯನು ಕರೆತಂದನು || ||೪||

ನಾಗರಾಜು. ಹ
ಬೆಂಗಳೂರು

Related post

Leave a Reply

Your email address will not be published. Required fields are marked *