ವಾಸ್ತವ ಸತ್ಯ

ವಾಸ್ತವ ಸತ್ಯ

ನೀನಿಲ್ಲದಿರಲಾರೆನೆ,
ಈ ಜೀವ ಶವವಾಗುತ್ತಿದೆ
ಗೆಳತಿ, ಈ ಹಸಿ ಸುಳ್ಳು, ಒಪ್ಪಿಕೊಂಡು ಬಿಡು.

ಮನದೊಳಗೆ ನಿನ್ನದೇ ಧ್ಯಾನ
ನಿಧ್ರಾಹಾರಗಳು ಶೂನ್ಯ.
ಈ ಮಾತಿಗೆ ನಕ್ಕು ಬಿಡು.

ಸದಾ, ತೆರೆದಿದೆ ಮನೆ, ಮನ
ಕಾಯುತಿಹೆನು ಪ್ರತೀ ಕ್ಷಣ
ಬಾ, ಬೆಳಗೋಣ ಜೀವನ.
ಈ ನುಡಿಗಳಿಗೆ, ಚಕಿತಗೊಳ್ಳದಿರು.
ಗಹ, ಗಹಿಸಿ ಬಿಡು.

ಸದಾ ಹಾತೊರೆಯುವ,
ವಿರಹಿಯಾಗಿ ಅಲೆಯುವ,
ನಿದ್ರಾಹಾರ ತ್ಯಜಿಸುವ, “
ನಿನ್ನದೇ ಧ್ಯಾನದೊಳು ಲೀನವಾಗುವ
ಹೋ! ಬೇರೆ ಕೆಲಸವಿಲ್ಲವಾ.?

ಇದು ವಾಸ್ತವ.

ಪವನ ಕುಮಾರ ಕೆ ವಿ
ಬಳ್ಳಾರಿ

Related post

Leave a Reply

Your email address will not be published. Required fields are marked *