ಸಂಚಾರಿ ವಿಜಯ್- ಇಲ್ಲವಾದ ಮೇಲೂ ಜೀವಂತ!!!

ಸಂಚಾರಿ ವಿಜಯ್ ಶ್ರೇಷ್ಠ ನಟರಷ್ಟೇ ಆಲ್ಲ ಬರಹಗಾರರೂ ಹೌದು!

ಸಂಚಾರಿ ವಿಜಯ್ ಅವರು ಲೇಖನಗಳನ್ನೂ ಬರೆಯುತ್ತಿದ್ದರು. ಆಗಾಗ ಬರಹದಲ್ಲೂ ತೊಡಗಿಸಿಕೊಂಡಿದ್ದರಲ್ಲದೇ ತಮ್ಮ ಸಮಾನ ಮನಸ್ಕರಲ್ಲಿ ಅದನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲದೇ ವಿಜಯ್ ಅವರಿಗೆ ತಮ್ಮ ಅಮ್ಮನ ಜೀವನಗಾಥೆಯನ್ನು ಬರೆಯಬೇಕೆಂಬ ಹೆಬ್ಬಯಕೆಯೂ ಇತ್ತೆಂಬುದು ಅವರು ತಮ್ಮ ಆಪ್ತ ಬಳಗದಲ್ಲಿ ಹಂಚಿಕೊಂಡಿದ್ದರು.

ಅವರ “ಮೆಜೆಸ್ಟಿಕ್ ಎಂಬ ಮಾಯಾಜಾಲದಲ್ಲೊಮ್ಮೆ ನಾನು” ಎಂಬ ಕಿರು ಕಥೆ ಅವರು ಅಪಘಾತಕೀಡಾಗಿ ಸಾಯುವ ಎರಡು ದಿನದ ಮುಂಚೆ ನಮ್ಮ ಗೆಳೆಯರ ಬಳಗಕ್ಕೆ ಸೇರಿತ್ತು.

ವಿಜಯ್ ಅವರು ನನಗೇನು ಅಷ್ಟೇನು ಪರಿಚಯವಿಲ್ಲ. ಆದರೆ ರಾಷ್ಟ್ರ ಪ್ರಶಸ್ತಿ ಬಂದ ಸಂದರ್ಭದಲ್ಲಿ ನಮ್ಮ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಚಾನೆಲ್ಗೆ ಬಂದಿದ್ದಾಗ ಮಾತಾಡಿಸಿದ್ದೆ. ಅಭಿನಂದನೆಗಳನ್ನು ನೇರಾ ನೇರ ತಿಳಿಸಿದ್ದೆ. ಆದರೆ ಆನಂತರ ದಿನಗಳಲ್ಲೂ ಅವರೊಂದಿಗೆ ವಾಟ್ಸ್ಯಾಪ್ನ ಮೂಲಕ ಕಳುಹಿಸುವಿಕೆ, ಪಡೆಯುವಿಕೆ ನಿರಂತರ ನಡೆದಿತ್ತು.

ಹಾಗಾಗಿ ಈ ಮೇಲಿನ ಲೇಖನ ಓದಿದ ನಾನು ಅವರೊಂದಿಗೆ ಅಂದು ಮಾತುಕತೆ ನಡೆಸಿದ್ದು ಹೀಗೆ:

ನನ್ನ ಪ್ರತಿಕ್ರಿಯೆ:

  • ಬರಹ ಕಣ್ಣಿಗೆ ಕಟ್ಟುವಂತಿದೆ. ಇಂತಹ ಅನುಭವ ಬರಹಗಳನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡಿ. 🤘👍

ವಿಜಯ್ ಅವರ ಪ್ರತಿಕ್ರಿಯೆ:

  • ಇನ್ನು ಸಾಲದು ಅನ್ಸುತ್ತೆ ಸರ್. ಒಂದಷ್ಟು ಓದಿ ಬರೆಯಬೇಕೆಂಬ ಇಚ್ಛೆ.

ನನ್ನ ಪ್ರತಿಕ್ರಿಯೆ:

  • ನಿಮ್ಮ ಬರಹದ ಬಗ್ಗೆ ನಿಮಗಿಂತ ಓದುಗರಿಗೆ ಸಾಕಷ್ಟು ತಿಳಿದಿರುತ್ತೆ. ಬರಹಗಾರ ಸಾಮಾನ್ಯ ಓದುಗನಂತೆ ತನ್ನ ಅನುಭವಗಳನ್ನು ನೇರಾನೇರ ಬರೆದರೆ ಸಾಕು‌. ಅದು ಎಲ್ಲರಿಗೂ ಮುಟ್ಟುತ್ತೆ.

ವಿಪರ್ಯಾಸವೆಂದರೆ ನಂತರ ಅವರು ಉತ್ತರಿಸಲಿಲ್ಲ…

ವಿಜಯ್ ನಟಿಸಿದ್ದ ‘ಅವ್ಯಕ್ತ’ ಕಿರುಚಿತ್ರ ಹೀಗಿದೆ.

ಕಿರುಚಿತ್ರದ ಹೂರಣ:

  • ಪತ್ರದಲ್ಲಿದ್ದ ಫೋನ್ ನಂಬರಿನ ಗೊಂದಲದಿಂದಾಗಿ ಕಥಾನಾಯಕ ಆ ಹೆಣ್ಣನ್ನು ಭೇಟಿಯಾಗಲು ಮಾಡುವ ಪ್ರಯತ್ನಗಳಲ್ಲಿ ‘ಮಾನವ ಸಹಜ ಅವ್ಯಕ್ತ ಆಸೆ’ ಯನ್ನು ಅನಾವರಣಗೊಳಿಸುವುದು.
  • ಅನಿರೀಕ್ಷಿತವಾದ ತಿರುವುಗಳಿಂದ ಒಂದೇ ದಿನ ಒಂದೇ ಹೆಸರಿನ ಮೂವರು ಹೆಣ್ಣುಗಳು ಕಥಾನಾಯಕನ ಮನೋವೃತ್ತಿಯನ್ನು ಆವರಿಸಿ, ಅಂದೇ ಮರೆಯಾಗುವ ಬಗೆಯನ್ನು ನಿರೂಪಿಸುವ ಪ್ರಯೋಗ.
  • ಕತೆಯ ಬಹುಮುಖ್ಯ ಅಂಶ – ಮನುಷ್ಯ ಜೀವನದಲ್ಲಿ ನಡೆಯಬಹುದಾದ ಅನಿರೀಕ್ಷಿತಗಳು ಮತ್ತು ಅಂತ ಘಟನೆಗಳು ಇನ್ಯಾರದ್ದೋ ಜೀವನಕ್ಕೆ ಹೇಗೆ ತಾಳೆಯಾಗುತ್ತವೆ ಅಲ್ಲದೆ ಒಂದೇ ರೀತಿಯ ಅತ್ರಪ್ತ ಆತ್ಮಗಳು ಕಾಯುತ್ತಿರುವ ಅಚಾನಕ್ ಅವಕಾಶಗಳನ್ನು ಹೇಳುತ್ತಲೇ, ಅವುಗಳನ್ನು ಈಡೇರಿಸಿಕೊಳ್ಳುವಲ್ಲಿ ಇರುವ ನೈತಿಕ ಮಿತಿಗಳನ್ನು ನೆನಪಿಸುವುದು.
  • ‘Story within a story’ ಎಂಬಂತೆ ಕತಾನಾಯಕನನ್ನು ಭೇಟಿಯಾಗುವ ಓರ್ವ ಹೆಣ್ಣು, ಹೇಳುವ ತನ್ನ ಚಳವಳಿ ಮತ್ತು ಹೋರಾಟಗಳ ಬದುಕಿನ ಕತೆ. ಈಗಿನ ಬಹಳ ಜನ ಹೋರಾಟಗಾರರ Hypocarcy ಯನ್ನು ಬಲು ಸೂಕ್ಷ್ಮವಾಗಿ ಹೇಳುತ್ತದೆ.

ಈ ಕೆಳಗಿನ ಲಿಂಕ್ನಲ್ಲಿ ಈ ಕಿರುಚಿತ್ರವನ್ನು ನೋಡಿ:

https://youtu.be/TdjjwNNUnO0

ವಿಜಯ್ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದ ‘ಅವನು ನಾನಲ್ಲ ಅವಳು’ ಈಗ ಯೂಟ್ಯೂಬ್ ನಲ್ಲಿ ನೋಡ ಬಹುದೆಂದು ಚಿತ್ರದ ನಿರ್ದೇಶಕರಾದ ಬಿ ಎಸ್ ಲಿಂಗದೇವರು ನುಡಿದಿದ್ದಾರೆ. ಕೆಳಗಿನ ಲಿಂಕನ್ನು ಬಳಸಿ ಚಿತ್ರವನ್ನು ಯುಟ್ಯೂಬ್ ನಲ್ಲಿ ವೀಕ್ಷಿಸಿ

ಅಲ್ಲದೇ ನಿರ್ಮಾಪಕರಾದ ರವಿ ಗರಣಿ ಅವರ ಈ ಕಾರ್ಯವನ್ನು ನಿರ್ದೇಶಕರು ಶ್ಲಾಘಿಸಿದ್ದಾರೆ.

ಪ್ರಶಸ್ತಿ ವಿಜೇತ ಚಿತ್ರಗಳನ್ನು ಬಿಡುಗಡೆ ಮಾಡೊಲ್ಲ ಎಂಬ ಆರೋಪಕ್ಕೆ ಉತ್ತರವಾಗಿ ಕರ್ನಾಟಕದಾದ್ಯಂತ ಬಿಡುಗಡೆ ಮಾಡಲಾಯಿತು. ಆದರೂ ಹೆಚ್ಚು ಹೆಚ್ಚು ಜನರಿಗೆ ತಲುಪಲಾಗಲಿಲ್ಲ ಎಂಬ ಕೊರಗು ಮನೆ ಮಾಡಿತ್ತು.

ಆದರೆ ಈಗ ವಿಜಯ್ ಅವರ ಈ ಚಿತ್ರ ನೋಡಲು ನೂರಾರು ಕರೆಗಳು ಬಂದವು ಹಾಗಾಗಿ ಅವರ ನೆನಪಿಗಾಗಿ ಈ ಸಿನಿಮಾದ ಲಿಂಕ್ ಅನ್ನು ಶೇರ್ ಮಾಡಿದ್ದೀವಿ.

ವಿಜಯ್ ಮತ್ತಷ್ಟು ಕನ್ನಡಿಗರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಯೂರಲೆಂಬುದು ಆಶಯ. ಸಂಚಾರಿ ಥೀಯೇಟರ್ ನಿಂದ ಒಂದು ಸಣ್ಣ ವಿಡಿಯೋ ನೋಡಿ

ಸಂಚಾರಿ ವಿಜಯ್ ಮೇರು ನಟರ ಸಾಲಿನಲ್ಲಿ ನಿಲ್ಲುವಂತಹ ಪ್ರತಿಭಾವಂತ ಕಲಾವಿದ. ಅವರ ಅಗಾಧ ಶಕ್ತಿಯ ಪರಿಚಯ ಆಗಿದ್ದು ‘ನಾನು ಅವನಲ್ಲ ಅವಳು’ ಈ ಸಿನಿಮಾದಿಂದ ಎಂಬ ಹೆಮ್ಮೆಯೇ ಇವತ್ತು ಮನಸ್ಸು ಭಾರವಾಗಿಸುತ್ತಿದೆ.
ಈ ಸಿನಿಮಾ ನೋಡಿದರೆ ಸಂಚಾರಿ ವಿಜಯ್ ಎಂಬ ಅಪ್ಪಟ ಪ್ರತಿಭೆ ಮತ್ತಷ್ಟು ಮನಸ್ಸುಗಳಿಗೆ ಕಾಡುತ್ತದೆ ಎಂಬ ನಂಬಿಕೆ ನನಗಿದೆ ಎನ್ಬುತ್ತಾರೆ ನಿರ್ದೇಶಕ ಲಿಂಗದೇವರು.

ವಿಜಯ್ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ವಿಜಯ್ ಅವರ ಕುಟುಂಬಕ್ಕೆ ಆ ಭಗವಂತ ದಯಪಾಲಿಸಲಿ ಎಂದು ನನ್ನ ಹಾಗು ಸಾಹಿತ್ಯಮೈತ್ರಿ ಬಳಗದ ಕಡೆಯಿಂದ ಕೋರುತ್ತೇನೆ.

ತುಂಕೂರ್ ಸಂಕೇತ್

ರೇಖಾಚಿತ್ರ ಕೃಪೆ: ರಘುಪತಿ ಶೃಂಗೇರಿ

Related post

Leave a Reply

Your email address will not be published. Required fields are marked *