ಸಾಹಿತ್ಯೋತ್ಸವ – 2023

ಸಾಹಿತ್ಯೋತ್ಸವ – 2023

ಅವ್ವ ಪುಸ್ತಕಾಲಯ, ಸಾಹಿತ್ಯಮೈತ್ರಿ ಹಾಗೂ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಬಳಗಗಳ ಆಯೋಜನೆಯಲ್ಲಿ “ಸಾಹಿತ್ಯೋತ್ಸವ 2023” ಕಾರ್ಯಕ್ರಮವನ್ನು ದಿ. 29.01.23 ರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾಹಿತ್ಯಾಸಕ್ತರು ದಿನ ಪೂರ್ತಿ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಸಾಹಿತ್ಯ ಜಾತ್ರೆ ಮಾಡುವ ಸಲುವಾಗಿ ಇಡೀ ದಿನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಗಿನ ಕಾರ್ಯಕ್ರಮದಲ್ಲಿ ಹದಿನೈದು ಕೃತಿಗಳ ಲೋಕಾರ್ಪಣೆ, ಭರತನಾಟ್ಯ, ಪುಸ್ತಕ ಪರಿಚಯ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು, ನಾಡಿನ ಖ್ಯಾತ ಕಾದಂಬರಿಕಾರರಾದ ಕೆ.ಎನ್ ಗಣೇಶಯ್ಯ ಅವರು ಹದಿನೈದು ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಹಾಗೆಯೇ ಜನಪ್ರಿಯ ಕತೆಗಾರರಾದ ಕೇಶವ ಮಳಗಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ವಿದ್ವಾನ್ ಶ್ರೀ ಮಂಜುನಾಥ್ ಎನ್ ಪುತ್ತೂರು ಅವರಿಂದ ಭರತನಾಟ್ಯ ಪ್ರದರ್ಶನವಿರುತ್ತದೆ.

ಕಾರ್ಯಕ್ರಮಕ್ಕೆ ಬಂದವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ವಿರಾಮದ ನಂತರ ಕವಿಗೋಷ್ಠಿ, ಅವ್ವ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಲಿದೆ. ಸಂಜೆಗೆ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ, ಗೋಕುಲ ಸಹೃದಯ ಅಭಿನಯದ “ಚಿಟ್ಟೆ” ಏಕವ್ಯಕ್ತಿ ನಾಟಕ ಪ್ರದರ್ಶನವಿರುತ್ತದೆ. “ಕವಯಿತ್ರಿ ಎಂ ಆರ್ ಕಮಲ, ಹಿರಿಯ ಸಾಹಿತಿಗಳಾದ ನಿಡಸಾಲೆ ಪುಟ್ಟಸ್ವಾಮಯ್ಯ, ಕಾದಂಬರಿಗಾರ್ತಿಯರಾದ ಚಿತ್ರಲೇಖ, ಚಂದ್ರಿಕಾ ಪುರಾಣಿಕ್, ಆಶಾ ರಘು, ಶುಭಾ ನಾಡಿಗ್, ನಾಟಕಕಾರರಾದ ಬೇಲೂರು ರಘುನಂದನ್” ಇವರೆಲ್ಲರೂ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವ್ವ ಪುಸ್ತಕಾಲಯ ಬಳಗದ ರೂವಾರಿಗಳಾದ ಅನಂತ ಕುಣಿಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ ದಿನ ಬಿಡುಗಡೆಯಾಗುವ ಎಲ್ಲ ಕೃತಿಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇದ್ದು, ವಿಶೇಷ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ಲಭ್ಯವಾಗಲಿವೆ.

ನಿಮ್ಮ ಆಗಮನವನ್ನು ನಿರೀಕ್ಷಿಸುವ

ಅನಂತ್ ಕುಣಿಗಲ್ – ಅವ್ವ ಪುಸ್ತಕಾಲಯ
ಕು ಶಿ ಚಂದ್ರಶೇಖರ್ – ಸಾಹಿತ್ಯಮೈತ್ರಿ
ರಘುವೀರ್ – ಸಾಹಿತ್ಯಲೋಕ ಪಬ್ಲಿಕೇಷನ್ಸ್

Related post

1 Comment

  • 🙏❤️

Leave a Reply

Your email address will not be published. Required fields are marked *