ಹದಗೆಟ್ಟ ಕವಿತೆ
ಕವಿತೆ ಸುಂದರ ಎಂದವರಾರು
ಆ ಮಾತು ಬರೀ ಪೋಷಾಕು.
ಹದಗೆಟ್ಟ ಕವಿತೆ ನಾನು ಕಂಡಂತೆ ನಿಜವು.
ಒಮ್ಮೊಮ್ಮೆ ಪತ್ರಿಕೆಯ ಮುಖಪುಟವನ್ನು
ವಿರೂಪಗಳಿಸಿದ ಹೆಗ್ಗಳಿಕೆ ಇವುಗಳದ್ದು.
ತಲೆ ಬುಡವಿಲ್ಲದ ಅರ್ಥಾನುಸಂಧಾನಗೈದು
ಇಲ್ಲದ ಉಪಮೆಗಳ ಮೈತಾಕಿಸಿಕೊಂಡು
ಖ್ಯಾತನಾಮರ ಹಣೆಪಟ್ಟಿಯೊಂದಿಗೆ
ಪ್ರಕಟಗೊಂಡಿರುತ್ತವೆ ಹಲವಾರು ಬಾರಿಯು.
ಒಂದಾದರೂ ಸ್ವವಚನವಿಲ್ಲವು.
ಯಾರೋ ಎಲ್ಲೋ ಹೇಳಿಹೋದ ನೆನಪುಗಳೇ.
ಒಮ್ಮೊಮ್ಮೆ ಹೀಗೂ ಆಗುವುದುಂಟು
ಈಗಿನ ರಾಜಕಾರಣಿಗಳಿಗೂ
ಗಾಂದೀಜಿಗೂ ನಂಟು
ಹಲವು ಬಾರಿ ನಕ್ಕದ್ದುಂಟು
ಉಗ್ರವಾದಕ್ಕೂ ಶಾಂತತೆಗೂ ಸಾಮ್ಯತೆಗೂ ಒಂದೇ ಅರ್ಥವೇ?
ಇಲ್ಲವೇ ಚಂದ್ರನಿಗೂ ಹುಡುಗಿಗೂ
ಹೋಲಿಕೆಯ ನಂಟು
ಪಾಪದ ಹುಡುಗಿಗೇನು ಗೊತ್ತು!
ಚಂದಿರನೊಳಗಿನ ಕುಳಿಗಳು.
ಕವಿತೆಯೆಂದರೆ ಬೇಂದ್ರೆ,
ಕವಿತೆಯೆಂದರೆ ಜಿ. ಎಸ್. ಭಟ್ಟರು
ಕವಿತೆಯೆಂದರೆ ಮಹಾಕವಿ ಕುವೆಂಪು
ರಾಜರತ್ನಂ ಪೈ ಅಲ್ಲವೇ..?
ಅವರದು ಸುಂದರತೆ.
ಸುಂದರತೆಯೇ ಕವಿತೆ.
ನಮ್ಮದು ಹದಗೆಟ್ಟ ಕವಿತೆ…

ಪವನ ಕುಮಾರ ಕೆ ವಿ
ಬಳ್ಳಾರಿ
9663346949