ಒಲುಮೆ
ಮನದಲ್ಲಿ ಅಡಗಿ ಕುಳಿತಿದೆ
ನಿನ್ನ ಪ್ರೇಮದ ಮಧುರ ನೆನಪು
ನೆನೆದಷ್ಟು ಮನಕೆ ಹೊಳಪು
ಈ ಬದುಕು ಸವಿಯಲು
ನಿನ್ನ ಸಾಂಗತ್ಯ ಬೇಕು
ಸಲುಗೆ ಬೇಕು
ಒಲುಮೆಯು ಬೇಕು
ಗತ್ತು
ನನ್ನ ಎದೆ
ಬಗೆದು ನಿನ್ನ
ಹೆಸರನ್ನು
ಜಗತ್ತಿಗೆ ತೋರಿಸುತ್ತಲೇ
ಇರುತ್ತೇನೆ!
ಜೊತೆಗೆ ನಿನ್ನ
ಗತ್ತನ್ನೂ!!
ಮಾನ್ಯ
ನೀ ನನ್ನ ಜೀವನ
ಸಂಗಾತಿ
ನೀನೆ ನನ್ನ
ಬದುಕಿನ ಸಂಗತಿ!!
ಬದುಕಲ್ಲಿ ನಿನ್ನ ಶ್ರಮ
ಅಸಾಮಾನ್ಯ
ನಿನ್ನಿಂದಲೇ ನನ್ನ
ಬದುಕು ಮಾನ್ಯ!
ತೇವ
ನಾ ನಿನಗಿಷ್ಟವೆಂದು
ನಿನ್ನ ಮುಖದ ರಂಗೇ
ಸಾರಿ ಸಾರಿ ಹೇಳುತಿದೆ!
ಆದರೂ
ನಿನ್ನ ನಾಲಿಗೆ
ಏಕೆ ಮೌನ?
ಕಣ್ಣುಗಳೇಕೆ
ತೇವ?
ಡಾII ಪರಮೇಶ್ವರಪ್ಪ ಕುದರಿ