ಹೂವಾದವು
ಇಬ್ಬರ ನಡುವೆ
ಮುನಿಸಿತ್ತು
ಪರಸ್ಪರ ಅರ್ಥ
ಮಾಡಿಕೊಂಡೆವು!
ನಮ್ಮ ನಮ್ಮ ತಪ್ಪುಗಳನ್ನು
ತಿದ್ದಿಕೊಂಡೆವು
ಜೀವನ ಹೂವಾಯಿತು!!
ಜೋಡಿ ಜೀವ
ಒಲಿದ ಜೀವ
ಜೊತೆಗಿರಬೇಕು
ಸುಮಧುರವಾದ ಬದುಕಿಗೆ!
ಅವಕಾಶವಿರಬೇಕು
ಸ್ವಚ್ಛಂದ ಪ್ರೀತಿಗೆ!!
ಅರ್ಥೈಸಿಕೊಂಡು
ಬದುಕುವ ಜೋಡಿ
ಜೀವಗಳಾಗಿರ
ಬೇಕು!!!
ಸುಂದರ ಲೋಕ
ದೂರದಲ್ಲಿದೆ
ಸುಂದರ ಲೋಕ
ಅಲ್ಲಿ ನೀನು – ನಾನು
ಬರೀ ಆಟ ಕೂಟ!
ನನಗೆ ನೀನು
ನಿನಗೆ ನಾನು
ಜೀವನ ಸಿಹಿ ಜೇನು!!
ಆಡುತಿರಲು
ನೀನು ನಾನಾಗಿ
ನಾನು ನೀನಾಗಿ
ಜೋಡಿ ಮೀನಾಗಿ
ಆಡುತಿರಲು
ಹೊತ್ತು ಹೋದದ್ದೇ
ತಿಳಿಯಲಿಲ್ಲ!
ನಿನ್ನ ಸ್ನೇಹವೇ
ಅಂತಹುದು
ಎಲ್ಲಾ ಮರೆಸುವಂತಹದು!!
ಡಾII ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ