ಸಂಚು
ನೀ ಮತ್ತೆ ಬಂದಿರುವೆ
ದೂರದಿ ಮುಖ
ತೋರದೆ ನಿಂತಿರುವೆ
ನಿನಗನ್ನಿಸಿರಬಹುದು
ನಾ ನಿನ್ನ ಮರೆತಿರಬಹುದೆಂದು!
ನೆನಪು ಆರಿದರೆ ತಾನೇ
ಮರೆಯುವುದು!
ನೀ ನನ್ನ ಮಿಂಚು
ದೂರವಾಗಲು
ಮತ್ತೆ ಮಾಡದಿರು ಸಂಚು!!
ಅಳಿವೆ
ನೀ ಬರುವ
ದಾರಿಯಲ್ಲಿ
ಹಾಕಿ ಕುಳಿತಿರುವೆ
ಪ್ರೀತಿಯ ರಂಗವಲ್ಲಿ!
ನೀ ತುಳಿದು ಬಂದರೆ
ನಾ ಅಳಿವೆ
ದಾಟಿ ಬಂದರೆ
ನಾ ಉಳಿವೆ!!
ನಿನ್ನದೇ
ನಿನ್ನ ಸ್ವಾಧೀನಕ್ಕೆ
ಒಳಗಾಗಿದ್ದೇನೆ
ನನ್ನತನವನ್ನು
ಕಳೆದುಕೊಂಡಿದ್ದೇನೆ!
ಹಗಲು ರಾತ್ರಿ
ಎಲ್ಲವು ನಿನ್ನದೇ
ನಿನ್ನ ಜೊತೆಗೇ
ಕಳೆಯುತಿದ್ದೇನೆ
ಕಳೆದು
ಕೊಳ್ಳುತ್ತಿದ್ದೇನೆ!!
ಒಪ್ಪಿಕೊ
ಅಲೆಯ ಅಪ್ಪುಗೆಗೆ
ಕಡಲ ತಟ
ಕಾಯುವಂತೆ
ಕಾದಿರುವೆ ನಾನೂ!
ಬಾ ಒಪ್ಪಿಕೊ
ಮನ ಬಯಸಿದೆ
ನಿನ್ನ ಅಪ್ಪುಗೆಯನ್ನು!!
ಮನಸಾರೆ ಅಪ್ಪಿಕೋ

ಡಾ|| ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ