ನಗುವ ಶಕ್ತಿ
ಎಲ್ಲ ನೋವೂ ನನ್ನೊಳಗಿರಲಿ
ಹೊರ ಜಗತ್ತಿಗೆ ನನ್ನ
ನಗುವೊಂದೇ ಕಾಣಲಿ!
ಓ ದೇವ
ನೋವು ನುಂಗಿ
ನಗುವ ಶಕ್ತಿಯ
ಕೊಡುತಿರು
ಜೀವನ ಪರ್ಯಂತ!!
ಬೇಕಿಲ್ಲ!
ಬೇಕಿಲ್ಲ ಈಗ
ಬರೆಯುವ ಗೊಡವೆ
ಬದುಕು ಈಗ
ಗೋಡೆಗಳ ನಡುವೆ
ಅಂತರವೇ ಈಗ
ಬೆಲೆ ಬಾಳುವ ಒಡವೆ!!
ಅಂತರ ಕಾಯ್ದುಕೊಂಡೇ
ಅಂತರಂಗ ಅರಿಯಬೇಕು
ಬದುಕಿ ಬಾಳಬೇಕು!!!
ಅಳತೆಗೋಲು
ಎಲ್ಲಿಲ್ಲ ಹೇಳಿ ತಾಪತ್ರಯ
ತಾಪತ್ರಯವೇ
ಬದುಕಿನ ಅಳತೆಗೋಲು!
ಅವುಗಳನ್ನು ಎದುರಿಸಿದವರೇ
ಬದುಕನ್ನು ಜಯಿಸುತ್ತಾರೆ
ಸತ್ತ ಮೇಲೂ ಬದುಕಿರುತ್ತಾರೆ!!
ತಲೆ ತಗ್ಗಿಸದಿರು
ಸೋತೆನೆಂದು ತಲೆ
ತಗ್ಗಿಸದಿರು
ಸೋಲನೆಂದೂ
ಸ್ವೀಕರಿಸದಿರು!
ಗೆಲುವಿಗಾಗಿ ನೆಡೆಯುತ್ತಿರಲಿ
ಹೋರಾಟ ನಿರಂತರ
ಸತತ ಪ್ರಯತ್ನ ತರುವುದು
ಜಯ ನಿರಂತರ!!

ಡಾII ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ