ಕೊರೋನ ಕಣ್ಣು
ಕೆಮ್ಮುವವರ
ಸೀನುವವರ
ಬಳಿ ನಿಲ್ಲಬೇಡ ಗೆಳತಿ
ನಡುವೆ ಅಂತರವಿರಲಿ!
ಹುಷಾರಾಗಿರು
ಕೊರೋನ ಕಣ್ಣು ನಿನ್ನ
ಮೇಲೆ ಬೀಳದಿರಲಿ!!
ಅಂದು – ಇಂದು
ಅಂದು
ಕೊರೋನ ಭಯ ಇರಲಿಲ್ಲ
ಸ್ವಚ್ಛಂದವಾಗಿ ಓಡಾಡತಿದ್ವಿ
ಕೈ ಕುಲುಕತಿದ್ವಿ!
ಇಂದು
ಕೊರೋನ ಭಯ ಇದೆ
ಮನೇಲಿ ಲಾಕ್ ಆಗಿದೀವಿ
ಕೈ ಕುಲುಕಲ್ಲ
ಕೈ ಮುಗಿತಿದ್ದೀವಿ!!
ಕಾಲನ ಕೈಗೆ
ಕೊರೋನ
ವಂಚನೆಯಿಂದ
ಬೀಸಿದೆ ಜಾಲ
ಮನೆಯೊಳಗಿದ್ದರೆ ಮಾತ್ರ
ಉಳಿಗಾಲ!
ಹೊಂಚುಹಾಕಿ ಕಾಯುತಿದ್ದಾನೆ
ಕ್ರೂರ ಕಾಲ!!
ಖಾಲಿಯಾಗಿದೆ
ನಿನ್ನ ಜೊತೆ
ದೂರ ಬಹುದೂರ
ಪಯಣಿಸುವಾಸೆ!
ಏಕೋ
ನೀರವ ದಾರಿಯಂತೆ
ಹೃದಯ ಖಾಲಿ ಖಾಲಿಯಾಗಿದೆ
ಮನಸ್ಸು ಪೂರ್ತಿ
ಕೊರೋನ ಭಯವೇ ತುಂಬಿದೆ!!
ಡಾII ಪರಮೇಶ್ವರಪ್ಪ ಕುದರಿ