ನಾದ ನಾನು
ನನ್ನ ಕವಿತೆಯ
ಸಾಲಿನ ಪದ ನೀನು
ಕವಿತೆಯೊಳಗಿನ
ನಾದ ನಾನು
ಭಾವ ನೀನು
ಹಾವ – ಭಾವ ನಾವು!!
ಜೊತೆಗಿದ್ದರೆ
ನೀ ತೋರುವ ಪ್ರೀತಿಗೆ
ಮನಸೋತಿರುವೆ
ನಿನ್ನ ಸನಿಹಕೆ ನಾ
ಹಾತೊರೆಯುವೆ!
ನೀ ನನ್ನ ಜೊತೆಗಿದ್ದರೆ
ಕಪ್ಪೆ ಚಿಪ್ಪಿನಲ್ಲಿ
ಇಡೀ ಸಮುದ್ರವನೇ
ನಾ ತುಂಬಬಲ್ಲೆ!!
ಪಂಚ ಪ್ರಾಣ
ಚಿನ್ನದಂತ ಮನಸು ನಿನ್ನದು
ಅದನು ಕದ್ದ ಹೃದಯ ನನ್ನದು!
ನೀನೆಂದರೆ ನನಗೆ ಪಂಚ ಪ್ರಾಣ
ನೀ ನನ್ನ ಬದುಕಿನ ಎಲ್ಲ ತ್ರಾಣ
ಅಲೆದಾಡಿದೆವು ಅದೆಷ್ಟೋ ತಾಣ
ಕಡಿಮೆಯೇ ಕಣ್ಣಿಂದ ನೀ ಬಿಟ್ಟ
ಬಾಣ!!
ಸಾಧ್ಯವಿಲ್ಲ
ನಿನ್ನಿಂದ ನನ್ನ
ಮನಸು ಲೂಟಿಯಾಗಿದೆ
ನೀನು, ನಿನ್ನ ನೆನಪು ಇಲ್ಲದೇ
ಈ ಬದುಕು ಸಾಧ್ಯವಿಲ್ಲ
ಎನಿಸಿಬಿಟ್ಟಿದೆ!
ನಿನ್ನ ನೆನಪು
ನಿನ್ನ ಪ್ರೀತಿಯಷ್ಟೇ ಗಟ್ಟಿಯಾಗಿದೆ
ಸಿಕ್ಕಾಪಟ್ಟೆ ಪ್ರೀತಿಯಾಗಿದೆ!!
ಡಾII ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ
ಶೀರ್ಷಿಕೆ ಚಿತ್ರ : ಭುಪಿಂದೆರ್ ಸಿಂಗ್ ಬಿಂದ