ಹೆಣ್ಣು ಮತ್ತು ಆರೋಗ್ಯ – 9

ಹೆಣ್ಣು ಮತ್ತು ಆರೋಗ್ಯ – 9

ಒಂದರಿಂದ ನಾಲ್ಕರವರೆಗೆ ಮಕ್ಕಳಿಗೆ ಸಾಮಾನ್ಯವಾಗಿ ಬರುವಂತಹ ಕಾಯಿಲೆಗಳು, ಅದಕ್ಕೆ ನಾವು ಮನೆಯಲ್ಲೇ ಮಾಡಬಹುದಾದಂತಹ ಚಿಕಿತ್ಸೆಗಳು ಇದರ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಯೋಣ.

ನಮ್ಮ ಮಕ್ಕಳಿಗೆ ವೈರಸ್ಗಳಿಂದ ಬರುವಂತ ನೆಗಡಿಗೆ ಆಂಟಿಬೈಯೊಟಿಕ್ ನಿಂದ ಪ್ರಯೋಜನವಿಲ್ಲ, ಹೆಚ್ಚಾಗಿ ನೀರು ಕುಡಿಸುವುದು, ಮಕ್ಕಳಿಗೆ ವಿಶ್ರಾಂತಿ ಕೊಡುವುದು, ಅವರನ್ನು ಬೆಚ್ಚಗೆ ಇಡುವುದು, ಬಿಸಿ ನೀರು ಕೊಡುವುದು ಹಾಗೂ ಬಿಸಿಯಾದ ಸೂಪ್ ತಯಾರಿಸಿ ಕೊಡುವುದು, ಶ್ವಾಸಕೋಶ ತೆರೆಯುವಂತೆ ಹಬೆಯ ಕೊಡುವುದು ಜ್ವರ ಇದ್ದರೆ ಜ್ವರದ ಔಷಧಿ ಕೊಡುವುದು, ಮೂಗಲ್ಲಿ ನೀರು ಸುರಿಯುತ್ತಿದ್ದರೆ ಅದಕ್ಕೆ ಔಷಧಿ ಕೊಡುವುದು, ಇವೆಲ್ಲವುಗಳಿಂದ ಸಾಮಾನ್ಯ ನೆಗಡಿಯನ್ನು ಹತೋಟಿಗೆ ತರಬಹುದು.

ಅಲರ್ಜಿ ಅಥವಾ ಮೈನೂರತೆ : ಇದು ಹುಳಗಳ ಕಡಿತದಿಂದ, ಸೊಳ್ಳೆಯ ಕಡಿತದಿಂದ ಅಥವಾ ಯಾವುದಾದರೂ ರಾಸಾಯನಿಕ ವಸ್ತು ತಗಲುವುದರಿಂದ, ವಾತಾವರಣದ ಏರುಪೇರುಗಳಿಂದ, ಆಹಾರ ಪದಾರ್ಥಗಳಿಂದ ಅಲರ್ಜಿ ಆಗಬಹುದು ಇದಕ್ಕೆ ಸೂಕ್ತವಾದ ಔಷಧಿ ಎಂದರೆ ಮಕ್ಕಳನ್ನು ಅಲರ್ಜಿಯು ಯಾವ ಕಾರಣದಿಂದ ಆಗಿದೆ ಎಂದು ತಿಳಿದು ಅದರಿಂದ ದೂರ ಇಡುವುದು, ಕಡಿತವಿದ್ದರೆ ಅದಕ್ಕೆ ಔಷಧಿಯನ್ನು ಕೊಡುವುದು.

ಕಂಜೂಕ್ಟಿವಿಟಿಸ್ (Conjunctivitis) : ಇದು ಮಕ್ಕಳ ಕಣ್ಣಿಗೆ ಬರುವ ಇನ್ನೊಂದು ಸಾಮಾನ್ಯ ಕಾಯಿಲೆ ಮಕ್ಕಳು ಬೇರೊಬ್ಬರನ್ನು ಮುಟ್ಟಿ, ಕೈಯನ್ನು ತೊಳೆಯದೇ ತಮ್ಮ ಕಣ್ಣನ್ನು ಮುಟ್ಟಿಕೊಳ್ಳುವುದರಿಂದ ಈ ಕಂಜಕ್ಟೀವೈಟಿಸ್ ಬರುತ್ತದೆ. ಕಣ್ಣಿನಲ್ಲಿ ಉರಿ, ಕಣ್ಣಿನಲ್ಲಿ ನೀರು ಸೇರುವುದು, ಕಣ್ಣು ಕೆಂಪಗಾಗುವುದು ಕಣ್ಮುಚ್ಚಿಕೊಳ್ಳುವುದು ಇವು ಈ ಕಂಜಕ್ಟವೈಟೀಸ್ ನ ಲಕ್ಷಣಗಳು. ಪದೇ ಪದೇ ಕಣ್ಣನ್ನು ತಣ್ಣೀರಿನಲ್ಲಿ ಡ್ರಾಪ್ಸ್ ಹಾಕುವುದು, ಆದಷ್ಟು ಕಣ್ಣನ್ನು ಜ್ವರ ಅಥವಾ ಅಲರ್ಜಿಕ್ ರೈನಟಿಸ್ ಉಂಟಾದಾಗ ಮೂಗು ಹಾಗೂ ಕಣ್ಣಿನ ಒಳಚರ್ಮದ ಊತ ಬರುತ್ತದೆ. ಅಲರ್ಜಿಕ್ ರೈನಟಿಸ್‌ನ ಲಕ್ಷಣಗಳೆಂದರೆ ಮೂಗು ಸೋರುವುದು, ಮೂಗಿನಿಂದ ಉಸಿರಾಡಲು ಕಷ್ಟವಾಗುವುದು, ಕಣ್ಣು, ಮೂಗು, ಕಿವಿ ಹಾಗೂ ಗಂಟಲಿನಲ್ಲಿ ತುರಿಕೆ, ಸೀನು, ನೆಗಡಿ, ತಲೆನೋವು ಕಾಣಿಸುತ್ತದೆ. ಅಲರ್ಜಿಕ್ ರೈನಟಿಸ್ ಸೀಸನಲ್. ಅಂದರೆ ಕೆಲವು ಹವಾಮಾನಗಳಲ್ಲಿ ಮಾತ್ರ ಕಾಣಿಸುತ್ತದೆ. ಪೆರಿನಿಯಲ್ ಅಂದರೆ ವರ್ಷ ಪೂರ್ತಿ ಕಾಣಿಸುತ್ತದೆ. ಧೂಳು, ಪ್ರಾಣಿಗಳ ಕೂದಲು, ಜಿರಳೆ, ಕೆಲವು ರೀತಿಯ ಗಿಡಗಳು ಹಾಗೂ ಹೂವಿನ ಕುಸುಮಗಳಿಂದ ಅಲರ್ಜಿಕ್ ರೈನಟಿಸ್ ಬರುತ್ತದೆ. ಅಲರ್ಜಿ ಸಮಸ್ಯೆ ಉಂಟಾದಾಗ ಶ್ವಾಸನಾಳವು ಬಿಗಿದುಕೊಳ್ಳುವುದು. ಅದರಿಂದ ಉಸಿರಾಡಲು ತೊಂದರೆಯಾಗುತ್ತದೆ. ಇರುವುದು,ಕೈಯನ್ನು ಆಂಟಿಸೆಪ್ಟಿಕ್ ಲೋಷನ್ನಿಂದ ತೊಳೆದುಕೊಳ್ಳುವುದು, ಕನ್ಸೆಕ್ಟಿವಿಟಿಸ್ ಅನ್ನು ತಡೆಯಬಹುದು.

ಆಹಾರ ಅಸಹಿಷ್ಣುತೆ (Food Intolerence) : ಕೆಲವು ಆಹಾರ ಪದಾರ್ಥಗಳು ಮಕ್ಕಳಿಗೆ ಸರಿ ಹೋಗುವುದಿಲ್ಲ. ಅದರಿಂದ ಅಲರ್ಜಿ ಉಂಟಾಗುತ್ತದೆ. ಮುಖ್ಯ ಲಕ್ಷಣಗಳು ಮುಖ , ಬಾಯಿ ಹತ್ತಿರ ತುರಿಕೆ, ಊತ, ಹೊಟ್ಟೆನೋವು, ಮೈಯಲ್ಲಿ ತುರಿಕೆ ಅಥವಾ ಕೆಂಪಗಾಗಿ ದದ್ದು ಬರುವುದು, ಭೇದಿ ಲಘುವಾಗಿ ಹೊಟ್ಟೆನೋವು ಬರುವುದು ಇವು ಗುಣಲಕ್ಷಣಗಳು ಇದಕ್ಕೆ ಔಷಧ ಹಿಸ್ಟಮಿನೋದ್ರೋಕಗಳು ವೈದ್ಯರ ಸಲಹೆಯಂತೆ ಇವನ್ನು ಕೊಡಬೇಕಾಗುತ್ತದೆ, ನೀರಿನಂಶದ ಪದಾರ್ಥ ಹೆಚ್ಚಾಗಿ ಕೊಡಬೇಕು ಯಾವ ಆಹಾರ ಪದಾರ್ಥದಿಂದ ಯಾವುದರಿಂದ ಈ ರೀತಿ ಅಲರ್ಜಿ ಉಂಟಾಗಿದೆ ಎಂದು ಗೊತ್ತುಮಾಡಿಕೊಂಡು ಅದನ್ನು ದೂರ ಮಾಡುವುದರಿಂದ ಈ ಅಲರ್ಜಿ ಕಮ್ಮಿಯಾಗುತ್ತದೆ.

ಗ್ಯಾಸ್ಟ್ರೋಎಂಟರೈಟಿಸ್ ಅಥವಾ ಜಠರ ಕರುಳಿನ ಉರಿಯೂತ : ಈ ಕಾಯಿಲೆ ಬಂದಾಗ ಮಗುವಿಗೆ ಭೇದಿ, ವಾಂತಿ, ಹೊಟ್ಟೆ ನೋವು ಊಟ ಮಾಡದಿರುವಿಕೆ ಜ್ವರ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದು ಯಾವುದಾದರೂ ಒಂದು ಬ್ಯಾಕ್ಟೀರಿಯಾ ಇಂದ ಬರಬಹುದು ಆಗ ಇದರ ಲಕ್ಷಣ ಹೆಚ್ಚಾಗಿರುತ್ತದೆ. ಮಗುವಿಗೆ ವಿಶ್ರಾಂತಿ ನೀರಿನಂಶದ ಆಹಾರ ಪದಾರ್ಥಗಳನ್ನು ಕೊಡುವುದು ಹೆಚ್ಚಾಗಿ ನೀರನ್ನು ಕುಡಿಸುವುದು ಜ್ವರ ಇದ್ದರೆ ಸೋಂಕು ಆಗಿದ್ದರೆ ಅದಕ್ಕೆ ಆಂಟಿಬಯೋಟಿಕ್ ಕೊಡುವುದು. ಮಗುವಿಗೆ ಪೂರ್ತಿ ವಿಶ್ರಾಂತಿ ಕೊಟ್ಟು, ಸುಲಭವಾಗಿ ಪಚನವಾಗುವಂತಹ ಆಹಾರ ಪದಾರ್ಥಗಳನ್ನು ಕೊಡುವುದರಿಂದ ಈ ಕಾಯಿಲೆಯನ್ನು ಗುಣಪಡಿಸಬಹುದು.

ಅಸ್ತಮ: ಅಸ್ತಮಾ ರೋಗಿಗಳಲ್ಲಿ ಶ್ವಾಸನಾಳಗಳ ಸೂಕ್ಷ್ಮತೆ ಹೆಚ್ಚುತ್ತದೆ. ಇದನ್ನು ಬ್ರೋಂಕಿಯಲ್ ಹೈಪರ್ ರಿಯಾಕ್ಟಿವಿಟಿ ಎಂದು ಹೇಳಲಾಗುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಲ್ಲಿ ಬದಲಾಗುತ್ತದೆ. ಅಸ್ತಮಾದ ರೋಗ ಲಕ್ಷಣವೆಂದರೆ ಉಸಿರಾಡಲು ತೊಂದರೆ, ಎದೆಯ ಬಿಗಿತ ಹೆಚ್ಚಾಗುವುದು, ಕೆಮ್ಮು ಇತ್ಯಾದಿ. ಅಸ್ತಮಗೆ ಔಷಧಿ ವೈದ್ಯರನ್ನು ಸಂಪರ್ಕಿಸಿ ತೆಗೆದುಕೊಳ್ಳಬೇಕು.

ಕೈ, ಕಾಲು ಮತ್ತು ಬಾಯಿ ರೋಗ (HFMD): ಇದು ಒಂದು ಸಾಂಕ್ರಾಮಿಕ ಸೋಂಕಾಗಿದ್ದು, ಇದು ಎಂಟ್ರೊವೈರಸ್ ಕುಲದ ವೈರಸ್‌ಗಳಿಂದ ಉಂಟಾಗುತ್ತದೆ, ಇದು ಮಗುವಿನ ಲಾಲಾರಸ, ಮಲ ಅಥವಾ ಉಸಿರಾಟದ ಸಂಪರ್ಕದ ಮೂಲಕವೂ ಇದು ಹರಡಬಹುದು. ಸೋಂಕು ತಗುಲಿದ 3 ರಿಂದ 6 ದಿನಗಳ ನಂತರ ರೋಗಲಕ್ಷಣಗಳು ಪ್ರಾರಂಭವಾಗುತ್ತವೆ.ಜ್ವರ, ಬಾಯಿ ನಾಲಿಗೆ ಕೈ ಹಾಗೂ ಕಾಲಿನಲ್ಲಿ ಉರಿ ಗುಳ್ಳೆ ಹಾಗೂ ಹುಣ್ಣು ಆಗುತ್ತದೆ ಇದು ವೈರಸ್ ಇಂದ ಬರುವುದರಿಂದ ತಾನೇ ಒಂದು ವಾರದಲ್ಲಿ ಕಡಿಮೆಯಾಗುತ್ತದೆ ಜ್ವರ ನೋವಿಗೆ ತುರಿಕೆಗೆ ಔಷದ ಕೊಡಬಹುದು, ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸೋಕು ರೋಗ ಆದುದರಿಂದ ಎಚ್ಚರಿಕೆಯಿಂದಿರುವುದು ಒಳ್ಳೆಯದು.

ಮಕ್ಕಳನ್ನು ಶಾಲೆಗೆ ಸೇರಿಸಿದಾಗ ಒಂದು ಮಕ್ಕಳಿಂದ ಇನ್ನೊಬ್ಬರಿಗೆ ಖಾಯಿಲೆಗಳು ಹರಾಡುವುದು ಸಹಜಮಕ್ಕಳಿಗೆ ಅರೋಗ್ಯಕರಣದ ನಡುವಳಿಕೆ ಕಳಿಸಿ ಉತ್ತಮ ಪೋಷಕಶದ ಊಟ ಸರಿಯಾಗಿ ನಿದ್ದೆ ಇವುಗಳನ್ನು ನೋಡಿಕೊಂಡರೆ ಮಕ್ಕಳು ಖಾಯಿಲೆ ಬೀಳುವುದು ಕಮ್ಮಿಯಾಗುತ್ತದೆ.

ಡಾ. ರುಕ್ಮಿಣಿ ವ್ಯಾಸರಾಜ

Related post

Leave a Reply

Your email address will not be published. Required fields are marked *