ಹರಿದ ಲುಂಗಿ ***** ಅವ್ವ ನನ್ನ ಕಾಚ ಹರಿದು ಚಿಂದಿ ಚಿಂದಿ ತುಂಬ ತುಂಬಾ ಹಳೆಯದು ಅಣ್ಣ ಕೊಟ್ಟೇ ವರುಷಕ್ಕು ಮಿಗಿಲು ಅವನಿಗೆ ಚಿಕ್ಕದೆಂದು ಆಗಲೇ ಅದಕೆ ಅರ್ಧ ಜೀವ ಈಗ ಬಣ್ಣ ಪೂರ್ತಿ ಕಳೆದು ಹುಡುಕಬೇಕು ಹರಿಯದೆ ಉಳಿದ ಜಾಗ! ಇದ್ದರೆ ಕೊಡು ಬೇರೆ ಎಲ್ಲಿ ತರಲಿ ಮಗಾ ಕಾಚ ಚಡ್ಡಿ ಎಲ್ಲ ನಮಗಾ ನಿಜ ಅಲ್ಲ ಎಂದೂ ಅಲ್ಲ! ನಾವು ನೇಯುವುದು ನಮ್ಮ ಹೊಟ್ಟೆಗೆ ಇತರರ ಬಟ್ಟೆಗೆ ಅವರ ಎಲ್ಲ ನಮೂನೆಯ ಉಡುಗೆ ತೊಡುಗೆಗೆ… […]Read More
ಒಂಟಿ ನಾವಿಕನ ಬದುಕಲ್ಲಿ ನಡು ದಾರಿಯಲ್ಲಿ ಬಡಿದ ಹೆದ್ದೆರೆಯಂತವಳು! ಬಡಿದ ರಭಸಕ್ಕೆ ಬದುಕು ಅಲ್ಲೋಲ ಕಲ್ಲೋಲ ನಸುಕಿನ ಬಾನಿನಲ್ಲಿ ಆಕಾಶಕ್ಕೆ ಉಕ್ಕಿದ ಸ್ವರ ಹಿಗ್ಗಿ ತಳ ತಳ ಹೊಳೆದು ಎಳೆದು ತನ್ನೊಳಸೆಳೆದು ನಿಶ್ಚಲ ಮೂರ್ತಿಗೆ ಜೀವ ನಾದವಾದಂತೆ! ಅನುಭಾವಿಯಂತೆ ಮದ್ಯೆ ನೀರವದಿ ಕಾವು ಕೂತು ಕಣ್ಮುಚ್ಚಿ ತೆರೆವ ಹೊಸ ಭಾವದ ರೆಕ್ಕೆ ವಚನಕ್ಕೆ ವಚನ ಕೊಟ್ಟಂತೆ ಕಟ್ಟಿದ ಸೇತು ಬಂಧ ಯಾವ ಚೌಕಟ್ಟಿಗೂ ಸಿಗದ ಆತ್ಮ ಬಂಧವಿವಳು – ಕುಮಾರ್ ಕೆ ಪಿRead More
ಮಿಂಚು ಅಥವಾ ಬೆಳಕಿನ ವೇಗ ಈ ಪದಕ್ಕೆ ತಕ್ಷಣ ನೆನಪಿಗೆ ಬರುವುದು ಶಿವರಾಜಕುಮಾರ್. ಸುಮಾರು 1987 ಇರಬೇಕು ನಾವು 5 ನೇ ಅಥವಾ 4 ನೇ ಕ್ಲಾಸ್ ಓದುತಿದ್ದೆವು ಆಗ ನಮ್ಮ ಶಿವನಗರದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಶಿವಣ್ಣನನ್ನು ಆಹ್ವಾನಿಸಿದ್ದರು, ಆಗಷ್ಟೇ “ಆನಂದ್” ಚಿತ್ರ ಬಿಡುಗಡೆಗೊಂಡು ಆರಂಭಿಕ ಯಶಸ್ಸು ಕಂಡಿತ್ತು. ಶಿವಣ್ಣ ಬಂದಿದ್ದು ಒಂದು ಹಳದಿ ಟಿ ಶರ್ಟ್ ಮತ್ತು ಒಂದು ಬಿಳಿ ಚಡ್ಡಿಯಲ್ಲಿ. ಅರೆ ಏನಿದು ಚಿಕ್ಕ ಹುಡುಗರಾಗಿದ್ದ ನಮಗೆ ಅವರನ್ನು ಆ ಉಡುಗೆಯಲ್ಲಿ ನೋಡಲು ಏನೋ […]Read More
ಕೋಗಿಲೆ ಎಂದ ಕೂಡಲೆ ನಮ್ಮ ಮನಸ್ಸಿಗೆ ಬರುವುದು ಮೂರು. “ವಸಂತಕಾಲ, ಮಧುರ ಕಂಠ ಮತ್ತು ಪರಪುಟ್ಟ”. ಸದ್ಯ ನಾವು ಅದೇ ಕಾಲದಲ್ಲಿಯೇ ಇದ್ದೇವೆ. ಮೊದಲೆರೆಡನ್ನು ಬಿಟ್ಟು ಮೂರನೆಯದನ್ನು ಕುರಿತಾಗಿ ತಿಳಿದುಕೊಳ್ಳೋಣ. ಗಂಡು ಕೋಗಿಲೆ ಹೆಣ್ಣು ಕೋಗಿಲೆ ಮರಿ ಕೋಗಿಲೆ ಕೋಗಿಲೆ ಗೂಡುಕಟ್ಟುವುದಿಲ್ಲ, ಬದಲಿಗೆ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಡುತ್ತದೆ. ಕಾಗೆ ಇದರ ಮೊಟ್ಟೆಗೆ ಕಾವುಕೊಟ್ಟು ಮರಿಮಾಡಿ ಸಾಕುತ್ತದೆ ಎಂಬುದನ್ನು ನಮ್ಮ ಪೂರ್ವೀಕರು ಗಮನವಿಟ್ಟು ನೋಡಿ ತಿಳಿದುಕೊಂಡಿದ್ದರು. ಅದರಿಂದಲೇ ಕೋಗಿಲೆಗೆ ಪರಪುಟ್ಟ ಎಂಬ ಹೆಸರು. ಕೋಗಿಲೆ ಸೋಮಾರಿ ಎಂದಾಯಿತು! ಆದರೆ, […]Read More
ಕಿಮ್ ಪುಕ್ ಎಂಬ ನೇಪಲ್ಮ್ ಹುಡುಗಿ ಸಾವಿರದ ಒಂಬೈನೂರ ಎಪತ್ತರೆಡು (1972) ದಕ್ಷಿಣ ವಿಯೆಟ್ನಾಂ ಹಾಗೂ ಉತ್ತರ ವಿಯೆಟ್ನಾಂ ಮದ್ಯೆ ಯುದ್ಧ ಹತ್ತಿ ಉರಿಯುತ್ತಿದ್ದ ಕಾಲ. ಕಮ್ಯುನಿಸ್ಟ್ ಒಕ್ಕೊಟದ ಜೊತೆ ಸೇರಿ ಉತ್ತರ ವಿಯೆಟ್ನಾಂ ದಕ್ಷಿಣ ವಿಯೆಟ್ನಾಂ ಮೇಲೆ ಮುಗಿಬಿದ್ದಿತ್ತು. ಉತ್ತರ ವಿಯೆಟ್ನಾಂ ವಿಯೆಟ್-ಕಾಂಗ್ ಎಂಬ ಕಮ್ಯುನಿಸ್ಟ್ ಪಡೆಗಳ ಜೊತೆ ಸೇರಿ ದಕ್ಷಿಣ ವಿಯೆಟ್ನಾಂ ವಶಪಡಿಸಿಕೊಂಡು ಕಮ್ಯುನಿಸ್ಟ್ ರಾಷ್ಟ್ರಗಳ ಆಡಳಿತವನ್ನು ಹೇರುವುದೇ ಗುರಿಯಾಗಿತ್ತು. ಆಗ ಅಮೇರಿಕಾ, ದಕ್ಷಿಣ ವಿಯೆಟ್ನಾಂಗೆ ಬಹಿರಂಗವಾಗಿ ಬೆಂಬಲ ಸೂಚಿಸಿ ತನ್ನ ಅರೆ ಸೇನಾ […]Read More
ಲೇಖನ : ನಮಸ್ಕಾರ ಕಿರಣ್ ರವರೆ ನಿಮ್ಮ ಬಾಲ್ಯ ಹಾಗೂ ಹುಟ್ಟೂರಿನ ಬಗ್ಗೆ ಪರಿಚಯ ಮಾಡಿಕೊಡಿ. ಕಿರಣ್ : ನಾನು ಹುಟ್ಟಿದ್ದು ತಾಳಗುಪ್ಪ ಎಂಬ ಊರಿನಲ್ಲಿ ಬೆಳೆದದ್ದು ಕರಾವಳಿ ಜಿಲ್ಲೆಯ ಹೊನ್ನಾವರದಲ್ಲಿ. ಕರಾವಳಿ ಜಿಲ್ಲೆ ಎಂದರೇ ನದಿ, ಸಮುದ್ರ ಕಾಡುಗಳ ರಮಣೀಯ ತಾಣ. ನನ್ನ ತಂದೆಯವರು ಇಂಡಿಯನ್ ಪ್ಲೈ ವುಡ್ ಎಂಬ ಸಂಸ್ಥೆಯಲ್ಲಿ ಅರಣ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದರು. ಹಾಗಾಗಿ ಓದಿದ್ದು ಹೊನ್ನಾವರದ ಸಂತ ಅಂತೋನಿ ಶಾಲೆಯಲ್ಲಿ. ಈಗ ಆ ಶಾಲೆಯಿಲ್ಲ ಕನ್ನಡ ಮಾಧ್ಯಮದಲ್ಲಿ ಓದುವವರ ಸಂಖ್ಯೆ […]Read More
ಅವನ ಕಾಲಿಗೆ ಕಚ್ಚಿದವರು! ‘ನಾಯಿಗಳಿವೆ ಎಚ್ಚರ’ ಎಂದು ಬೋರ್ಡ್ ಇದ್ದರೆ ಅತ್ತ ಕಡೆ ತಲೆ ಹಾಕುತ್ತಿರಲಿಲ್ಲ. ನಾಯಿಯನ್ನಲ್ಲ ನಾಯಿಯ ಪೋಸ್ಟರ್ ಕಂಡರೂ ಹೆದರಿ ಕಾಲು ಕೀಳುತ್ತಿದ್ದ. ಕಚ್ಚಿಸಿಕೊಂಡರೆ ಏನು ಗತಿ ಎಂಬ ಭಯ. ರಾತ್ರಿ 8ರ ನಂತರ ಹೊರಗೆ ತಲೆ ಹಾಕುತ್ತಿರಲಿಲ್ಲ. ನಾಯಿಗಳು ಊಳಿಟ್ಟರೂ ಚಿಂತೆಯಿಲ್ಲ, ಬೊಗಳಿದರೂ ತೊಂದರೆ ಇಲ್ಲ. ಯಾಕೆಂದರೆ ಬೊಗೊಳೋ ನಾಯಿ ಕಚ್ಚೋದಿಲ್ಲವಂತೆ ಅನ್ನೋ ನಂಬಿಕೆ. ಹೀಗಿದ್ದವನಿಗೆ ಕಡೆಗೂ ಕಾಲಿಗೆ ಕಚ್ಚಿತು. ನಾಯಿ ಅಲ್ಲ. ತಾನೇ ಕೊಂಡು ತಂದ ಚರ್ಮದ ಚಪ್ಪಲಿ! – ಸಂಕೇತದತ್ತ!Read More
ಸುಮಾರು ಎರಡು ವರ್ಷಗಳ ಹಿಂದಿನ ಸಂಗತಿ. ವ್ಯಕ್ತಿತ್ವ ವಿಕಸನ ಕುರಿತಾದ ಬರಹಗಳ, ಪುಸ್ತಕಗಳ ಕುರಿತಾಗಿ ಯೋಚಿಸುತ್ತಿದ್ದೆ. ಇಂತಹ ಬಹುತೇಕ ಎಲ್ಲ ಬರಹಗಳಲ್ಲಿಯೂ ‘ಉಪದೇಶ’ಗಳು ಸಾಮಾನ್ಯ. ಇಂತಹ ಉಪದೇಶಗಳನ್ನು ಹೊರಗಿಟ್ಟು, ವ್ಯಕ್ತಿತ್ವ ವಿಕಸನ ಬರಹವನ್ನು ಬರೆಯಬಹುದೇ ಎನ್ನುವ ಕುತೂಹಲ ಮೂಡಿತು. ಸ್ಫೂರ್ತಿದಾಯಕ ಕತೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಂದೇಶವನ್ನು ನೀಡಬಹುದಲ್ಲವೇ ಎನ್ನಿಸಿತು. ಅಂತಹ ನಾಲ್ಕಾರು ವಿಭಿನ್ನ ಕತೆಗಳನ್ನು ಬರೆದು ಜನಪ್ರಿಯ ಸಾಪ್ತಾಹಿಕ ‘ಮಂಗಳ’ಕ್ಕೆ ಕಳುಹಿಸಿದೆ. ಕೇವಲ ಎರಡೇ ವಾರಗಳಲ್ಲಿ ಸಂಪಾದಕ ಶ್ರೀ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರಿಂದ […]Read More
ಕುರ್ಚಿಯ ಮಹಿಮೆ! ಕುರ್ಚಿಗಾಗಿ ಏನೆಲ್ಲ ತಂತ್ರ-ಕುತಂತ್ರಗಳನ್ನು ನಡೆಸುತ್ತಿದ್ದ ಚಂದ್ರಪ್ಪನಿಗೆ ‘ಛೇರ್‌ಮನ್’ ಅಡ್ಡ ಹೆಸರು ಬಿದ್ದಿತ್ತು. ಎಷ್ಟೇ ಖರ್ಚಾಗಲಿ ಕುರ್ಚಿಯನ್ನು ಮಾತ್ರ ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ. ಹೀಗಿದ್ದವನು ಒಮ್ಮೆಗೆ ತನ್ನ ಸಿದ್ಧಾಂತವನ್ನು ಬದಲಿಸಿಕೊಂಡ. ಕುರ್ಚಿಯ ಮೋಹ ಒಳ್ಳೆಯದಲ್ಲಪ್ಪ ಎನ್ನುತ್ತಾ ಜನ-ಜನಸೇವೆಯೇ ಮುಖ್ಯವೆಂದು ಮನೆ ಮನೆಗೆ ಹೋಗಿ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕೊಡಿಸುತ್ತಿದ್ದ. ಆಫೀಸು, ಕುರ್ಚಿ ಚಂದ್ರಪ್ಪನಿಗಾಗಿ ಕಾದು ಸೋತಿದ್ದವು. ಊರಿನವರಿಗೆಲ್ಲ ಆಶ್ಚರ್ಯವೋ ಆಶ್ಚರ್ಯ! ಯಾವ ಸ್ವಾಮೀಜಿಯ ಸಲಹೆಯೋ ಅರಿಯದಾಗಿತ್ತು. ಈ ದಿಢೀರ್ ಬದಲಾವಣೆಗೆ ಕಾರಣವನ್ನು ಬಿಚ್ಚಿಟ್ಟವರು ಆ […]Read More
ಗತ (ಪುನರ್ಜನ್ಮದ ಪರಿಕಲ್ಪನೆ) “ಮನುಷ್ಯ ಮರಣ ಹೊಂದಿದ ಮೇಲೆ ಪುನಃ ಈ ಭೂಮಿಯ ಮೇಲೆ ಹುಟ್ಟಿ ಬರುತ್ತಾನೆ. ಹುಟ್ಟು ಆರಂಭವು ಅಲ್ಲಾ, ಸಾವು ಅಂತ್ಯವೂ ಅಲ್ಲಾ…’ ಎಂದು ಭಾರತೀಯ ವೇದಾಂತವು, ಹಲವು ಜಾಗತಿಕ ಧರ್ಮಗಳು ಹೇಳುತ್ತವೆ. ವೈಜ್ಞಾನಿಕವಾಗಿ ಈ ಕುರಿತು ಇನ್ನೂ ಅಧ್ಯಯನ ನೆಡೆಯುತ್ತಲೇ ಇದೆ. ಪುನರ್ಜನ್ಮದ ವಿಷಯ ಯಾವತ್ತಿಗೂ ಅತ್ಯಂತ ಕೊತೂಹಲಕಾರಿಯಾದದ್ದು”. ಪ್ರಖ್ಯಾತ ಲೇಖಕರಾದ ಶ್ರೀಯುತ ಎಸ್ ಎಲ್ ಭೈರಪ್ಪನವರ ಮೆಚ್ಚುಗೆ ಪಡೆದ “ಆವರ್ತ” ಕಾದಂಬರಿ ರಚಿಸಿದ ಶ್ರೀಮತಿ ಆಶಾ ರಘು ರವರು ತಮ್ಮ “ಗತ” […]Read More