ಸಮಯದ ಮಹತ್ವ ಕ್ರಾಂತಿಕಾರಿಗಳ ಸಾಲಿನಲ್ಲಿ ಚಾಪೆಕರ್ ಸಹೋದರರ ಹೆಸರು ಅಜರಾಮರವಾಗಿದೆ. ಈ ಮೂರು ಮಂದಿ ಚಾಪೆಕರ್ ಸಹೋದರರು ದೇಶಕ್ಕಾಗಿ ನಗುನಗುತ್ತಲೇ ನೇಣುಗಂಬಕ್ಕೆ ಏರಿದ್ದರು. ಇದೇ ರೀತಿ ಅದೊಂದು ದಿನ ದಾಮೋದರ ಚಾಪೆಕರ್ ಅವರನ್ನು ಸರವರಾ ಜೈಲಿನಲ್ಲಿ ನೇಣಿಗೇರಿಸಲು ಬ್ರಿಟೀಷರು ಕರೆದುಕೊಂಡು ಬಂದಿದ್ದರು. ದಾಮೋದರ ಚಾಪೆಕರರು ಮಾತ್ರ ಆ ದಿನ ನಗು ಮುಖದಿಂದ ಮತ್ತು ಆನಂದದಿಂದಿದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ತಕವಿದ್ದು, ಅವರು ಭಗವದ್ಗೀತೆಯನ್ನು ಓದುತ್ತಲೇ ನೇಣಿನ ಶಿಕ್ಷೆಗಾಗಿ ಸಿದ್ಧರಾಗಿದ್ದರು. ನೇಣುಗಂಬಕ್ಕೆ ಏರುವ ಸಮಯವಾದರೂ ಬ್ರಿಟೀಷ್ ಅಧಿಕಾರಿಗಳು ಅವರನ್ನು […]Read More
ನನ್ನಪ್ಪ ಹರಿವ ನದಿಯಂತೆಓಡುತ್ತಾ ಕಡಲ ಸೇರಿದ ನನ್ನಪ್ಪಅಲೆಯ ರೂಪದಲಿತೀರಕ್ಕೆ ಬಂದುಮತ್ತೆ ಕಡಲೊಡಲ ಸೇರುವ ಅಪ್ಪಇಂದಿಗೂ ನಗುತ್ತಲೇ ಇದ್ದಾನೆ ತಂಗಾಳಿ ಹೊತ್ತು ತರುವಹಸಿರು ತುಂಬಿ ಉಸಿರು ಕೊಡುವಬೆಟ್ಟದಂತ ಮರ ಉಯ್ಯಾಲೆ ಆಡುವಂತೆಹೆಗಲ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡುಮಹಾರಾಜನಂತೆ ಮಹಾನಗರ ಸುತ್ತಿಸಿದ್ದ ನನ್ನಪ್ಪಇಂದಿಗೂ ನನ್ನ ಮಹಾನಾಯಕ ಭಾರವಾಗದ ಮೋಡದಲ್ಲಿಬಹುದೊಡ್ಡ ಬಂಡೆಯಂತೆ ತೇಲುವನೀಲಾಕಾಶದ ನೀಲಿ ಕಡಲಲ್ಲಿ ನೆರಳಿಲ್ಲದೆನೆತ್ತಿಯ ಮೇಲಿನ ಸುಡು ಬಿಸಿಲಿಗೆತಂಪೆರೆಯಲು ಮಳೆಯಾಗಿಮುಗಿಲಿಂದ ಇಳಿದು ಬರುವ ನನ್ನಪ್ಪಇಂದಿಗೂ ಮೋಡದಲ್ಲಿಯೇ ಕುಳಿತುನನ್ನೆಡೆಗೆ ನೋಡುವ ದೂರ ದೃಷ್ಟಿಯ ಕನಸುಗಾರ ಕಬ್ಬಿನಂತೆ ಗಟ್ಟಿಯಾಗಿಕಚ್ಚಿದರೆ ನೋಯದೆ,ನೋಯಿಸದೆನಮ್ಮನ್ನೆಲ್ಲ ಸಿಹಿ ಸಾಗರದಲ್ಲಿ ಮುಳುಗಿಸಿತೇಲಿಸಿ […]Read More
ಅವಳಿ – ಜವಳಿ ಸಮೀರ್ ನಿಗೆ ಒಂದು ವಾಟ್ಸ್ ಆಪ್ ಮೇಸಜ್ ನಲ್ಲಿ ತಂಗಿ ಸುಮಯ್ಯ ಒಂದು ಹುಡುಗಿಯ ಫೋಟೋ ಕಳಿಸುತ್ತಾಳೆ. ಓಪನ್ ಮಾಡಿ ನೋಡಿದ ಸಮೀರ್ ನಿಗೆ ಸನಾ ಒಂದೇ ನೋಟಕ್ಕೆ ಇಷ್ಟವಾದಳು ಫೋನ್ ಮಾಡಿ ಸುಮಯ್ಯ ಳಿಗೆ ನನಗೆ ಹುಡುಗಿ ಒಪ್ಪಿಗೆ ಬರುವ ವಾರವೇ ಊರಿಗೆ ಬರುತ್ತಿದ್ದೇನೆ ಒಂದು ತಿಂಗಳು ರಜೆ ಇದೆ ಮದುವೆ ಆಗಿಯೇ ಬರುತ್ತೇನೆ ಎಂದು ಫೋನ್ ಕಟ್ ಮಾಡಿದ. ಸನಾ ತುಸು ಉತ್ಸಾಹ ದಿಂದಲೇ ಕನ್ನಡಿಯ ಮುಂದೆ ನಿಂತು ಅಲಂಕಾರ […]Read More
ನೀನೆ ಹೇಳು ಹೂವಂತ ಕಣ್ಗಳಲಿಮುಳ್ಳಮೊನೆಹೊಕ್ಕಿರಲು ಹೇಗೆನಗುವುದು ಕಣ್ಣುನೀನೆ ಹೇಳು; ಕನ್ನಡಿಯಂತಿದ್ದನನ್ನ ಮನವಿಂದೀಗಚೂರುಚೂರಾಗಿರಲುಪ್ರತಿಬಿಂಬವೆಲ್ಲಿಹುದುನೀನೆ ಹೇಳು ; ನಂದಗೋಕುಲದಾನಂದಾದೀಪವದುನಂದುತಿರೆ ಮನೆ-ಮನದಿ ಬೆಳಕೆಲ್ಲಿನೀನೆ ಹೇಳು ; ಅಡಿಗಡಿಗೆ ನನ್ನಲ್ಲಿಬೇವಿನಂತಹ ನುಡಿಯಆಡಿ ಮನ ಕೆಡಿಸುತಿರೆ,ಸವಿ ಭಾವಕೆಡೆಯೆಲ್ಲಿನೀನೆ ಹೇಳು ; ನನಗರಿವಾಗದೆಯೆನನ್ನ ಮನಃ ಸಂತೋಷನೀ ಕಸಿದುಕೊಳ್ಳುತಿರೆನಾ ನಗುತಲಿರುವುದುಹೇಗೆ ಹೇಳು !! ಶ್ರೀವಲ್ಲಿ ಮಂಜುನಾಥRead More
ಗರ್ಭಕಂಠದ ಕ್ಯಾನ್ಸರ್ ( Cervical Cancer ) ಗರ್ಭಕಂಠದ ದ್ವಾರ ಅಥವಾ ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆ ಆಗುವುದನ್ನು ಗರ್ಭ ಕಂಠದ ಕ್ಯಾನ್ಸರ್ ಎನ್ನುತ್ತಾರೆ. ಇದು ಗರ್ಭಕೋಶದ ಕ್ಯಾನ್ಸರ್ ಅಲ್ಲ ಗರ್ಭಕೋಶದಿಂದ ಮುಂದೆ ಅದರ ಕಂಠ ಇರುತ್ತದೆ ಅದನ್ನು ಸರ್ವಿಕ್ಸ ಎಂದು ಕರೆಯುತ್ತಾರೆ. ರೋಗ ಲಕ್ಷಣಗಳು ಗರ್ಭಕಂಠದ ಕ್ಯಾನ್ಸರ್‌ನ ಆರಂಭಿಕ ಹಂತಗಳು 1-ಸಂಪೂರ್ಣ ಲಕ್ಷಣ ರಹಿತವಾಗಿರಬಹುದು2-ಸಾಧಾರಣ ಯೋನಿ ಸ್ರಾವ,3-ಸಂಪರ್ಕದಿಂದ ಉಂಟಾಗುವ ರಕ್ತಸ್ರಾವ ಅಥವಾ4-ಯೋನಿಯ ದುರ್ಮಾಂಸದ (ಅಪರೂಪಕ್ಕೊಮ್ಮೆ) ಬೆಳವಣಿಗೆಯಿಂದ ಗುರುತಿಸಬಹುದಾಗಿದೆ.5-ಲೈಂಗಿಕ ಸಂಭೋಗ ಕ್ರಿಯೆಯಲ್ಲಿ ತೊಡಗಿದಾಗ ಅಲ್ಪ ಪ್ರಮಾಣದ ನೋವು […]Read More
ಸೈಕಲ್ ಸೈಕಲ್ ಚಿಕ್ಕವರಿದ್ದಾಗ ಸೈಕಲ್ ಸಿಕ್ಕಿತೆಂದರೆಖುಷಿಯೋ ಖುಷಿ ಹೀರೋ ಆಗಲಿಅಟ್ಲಾಸ್ ಆಗಲಿ ಸಿಕ್ಕ ಸೈಕಲ್ ಸಿಂಹಾಸನವೇರಿತಾಸಿನ ಬಾಡಿಗೆಗೆ ಹದಿನಾರಾಣೆಒಮ್ಮೊಮ್ಮೆ ಎಂಟಾಣೆಗೆ ಅರ್ಧ ತಾಸು ಹೆಸರಿಗೆ ಬರೆಯಿಸಿಪಡೆದದ್ದು ಸಿಹಿ ತಿನಿಸು ತಿಂದಷ್ಟು ಹಿಗ್ಗು ಚಡ್ಡಿ ದೋಸ್ತ ಏರಿದ ಸೈಕಲ್ ಹಿಂದೆನಗು ನಗುತ್ತಾ ಇಳಿಯುತ್ತಿದ್ದ ಚಡ್ಡಿ ಏರಿಸುತ್ತಾಓಡಿ ಹೋಗುತ್ತಿದ್ದುದು ಎಷ್ಟೊಂದು ಖುಷಿ ಇತ್ತುಏರು ದಿಬ್ಬದಲ್ಲಿ ತಿಣುಕಾಡುತ್ತಿದ್ದ ಸೈಕಲ್ ಜೋರಾಗಿ ತಳ್ಳಿಇಳುವಿಗೆ ಸುಯ್ಯೆನ್ನುವಾಗ ನಾನೇ ಹೊಡೆದಷ್ಟು ಸಂಭ್ರಮಪಟ್ಟುಸಾವಿರ ಸಾರಿ ನಕ್ಕದ್ದು ಇಂದಿಗೂ ಗಟ್ಟಿಯಾದ ಹಲ್ಲಿಗೆ ಜೀವಂತ ಪೈಪೋಟಿಯಿಂದ ಹೋಗುತ್ತಿದ್ದದಿನದ ಸಾಲಿಗೆ ಚಕ್ಕರ್ […]Read More
ಕಾಗೆಯ ಗುಣಾವಲೋಕನ ಕಾಗೆಯ ಕೆಲವು ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸನ್ನು ಗಳಿಸಬಹುದು. ಜಗತ್ತಿನಲ್ಲಿ ಹಲವು ವಿಧದ, ಬಣ್ಣದ, ರೂಪದ, ಗಾತ್ರದ ಪಕ್ಷಿಗಳಿದ್ದು, ಅವೆಲ್ಲದರ ಪೈಕಿ ಅತ್ಯಂತ ಹೆಚ್ಚು ಅನಾದರಕ್ಕೆ ಒಳಗಾದ ಪಕ್ಷಿಯೆಂದರೆ ಕಾಗೆ. ಬಣ್ಣದಲ್ಲಿ ಕಪ್ಪು, ಕೂಗಿನಲ್ಲಿ ಕರ್ಕಶ ಇವೆಲ್ಲಾ ಕಾರಣಗಳಿಂದ ಮನುಷ್ಯನಿಗೆ ಕಾಗೆಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಜೀವವಿಜ್ಞಾನಿಗಳು ಮತ್ತು ಮಹಾನ್ ಆಡಳಿತಗಾರನಾದ ಚಾಣಕ್ಯ ಹೇಳುವಂತೆ ಮನುಷ್ಯನು ಕಾಗೆಯನ್ನು ನೋಡಿಕೊಂಡು ಅದರಿಂದ ಕಲಿಯಬೇಕಾಗಿರುವುದು ಬಹಳಷ್ಟು ವಿಚಾರಗಳಿವೆ. ಅದರಲ್ಲೂ ಮುಖ್ಯವಾಗಿ ಕಾಗೆಯಲ್ಲಿ ಇರುವ ಯಶಸ್ಸಿನ ಗುಣಗಳನ್ನು ಎಲ್ಲರೂ ಕಲಿಯಲೇಬೇಕು. ಕಾಗೆಯಿಂದ […]Read More
ಅವನ ನೆನಪು ಅವ ಬಂದಿದ್ದಹುಣ್ಣಿಮೆಯ ಚಂದ ಕನಸಿನಂತೆವಿರಹದಿ ಬೆಂದ ರಾಧೆಗೆಕೃಷ್ಣ ಕಂಡಂತೆಬಸವಳಿದ ಗೋಪಿಯಬರಸೆಳೆದು ಅಪ್ಪಿದಗೋಪಿಲೋಲನಂತೆ ಬಂದಿದ್ದ ಅವಬೇಸಿಗೆಯಲಿ ತಂಪನೂಡುವಮಳೆಯಂತೆಚಳಿಗಾಲದಮಧ್ಯಾಹ್ನದ ಹೊಂಬಿಸಿಲಂತೆ ಬಂದಿದ್ದ ಅವಕಡುಬಡವನೆದುರುಕೊಪ್ಪರಿಗೆ ಐಶ್ವರ್ಯಬಂದು ಬಿದ್ದಂತೆತಾಯಿಯೊಡಲಿಂದ ಅಗಲಿದಮಗುವು ಮತ್ತೆಅಮ್ಮನ ತೊಡೆಯೇರಿದಂತೆ ಅವ ಬಂದಿದ್ದಜನ್ಮಜನ್ಮಗಳ ಪಾಪತೊಳೆದಂತೆಪುಣ್ಯ ಫಲವೆಲ್ಲವೂಸಂಚಯವಾಗಿಮಾನವರೂಪ ಪಡೆದಂತೆಮನದಾನಂದದಂತೆನಿಂತಿದ್ದ ಎದೆಬಡಿತಮತ್ತೆ ಶುರುವಾದಂತೆ ಹೀಗೆ ಬಂದು ಹಾಗೆ ದೇವರಂತೆಮಾಯವಾದವನ ಕಾಣಲುಮತ್ತೆಷ್ಟು ತಪಗೈಯಬೇಕೋಇನ್ನೆಷ್ಟು ಕಾಯಬೇಕೋತಿಳಿದಿಲ್ಲವಾದರೂಅವ ಕೊಟ್ಟ ನೆನಪುಗಳಭದ್ರವಾಗಿಟ್ಟುಕೊಳ್ಳುವಎದೆಗೂಡಂತೂ ಗಟ್ಟಿಯಿದೆಮನದೊಳಗವನ ಭಿತ್ತಿಚಿತ್ರವಿದೆ. ಸೌಜನ್ಯ ದತ್ತರಾಜRead More
ಪ್ಲ್ಯಾಟಿಪಸ್ ಮತ್ತು ಎಕಿಡ್ನಾ ಮರಿಗಳಿಗೆ ಜನ್ಮನೀಡಿ ಮೊಲೆಯುಣಿಸುವುದು ಸಾಮಾನ್ಯವಾಗಿ ಸಸ್ತಿನಿಗಳ ಪ್ರಮುಖ ಲಕ್ಷಣ, ಇದು ಎಲ್ಲರಿಗೂ ತಿಳಿದಿರುವ ಸಂಗತಿ, ಆದರೆ ಕೆಲವೊಂದು ಸಸ್ತಿನಿಗಳು ಪಕ್ಷಿ ಮತ್ತು ಸರೀಸೃಪಗಳಂತೆ ಮೊಟ್ಟೆಯಿಟ್ಟು ಪಕ್ಷಿಗಳಂತೆ ಕಾವುಕೊಟ್ಟಾದ ಮೇಲೆ ಹೊರಬರುವ ಮರಿಗಳಿಗೆ ಹಾಲುಣಿಸುತ್ತವೆ. ಈ ವಿಭಾಗದಲ್ಲಿ ಬರುವ ಸಸ್ತಿನಿಗಳನ್ನ ಓವಿಪರಸ್ (Oviparous) ಸಸ್ತಿನಿಗಳು ಎಂದು ಕರೆಯುತ್ತಾರೆ. ಪ್ಲ್ಯಾಟಿಪಸ್ ಮತ್ತು ಎಕಿಡ್ನಾ ಈ ಗುಂಪಿನಲ್ಲಿ ಬರುವ ಪ್ರಮುಖ ಸಸ್ತಿನಿಗಳು. ಪ್ಲ್ಯಾಟಿಪಸ್ ಪ್ಲಾಟಿಪಸ್ ಗ್ರೀಕ್ ಮೂಲದ ಪದ. ಮೊನೊಟ್ರೀಮ್ (Monotreme) ವಿಭಾಗದಲ್ಲಿ ಬರುವ ಪ್ರಾಣಿಗಳಲ್ಲಿ ಪ್ಲಾಟಿಪಸ್ […]Read More