C/O ಚಾರ್ಮಾಡಿ – ಪ್ರೇಮ ಪ್ರಕೃತಿಯ ಪಯಣ

C/O ಚಾರ್ಮಾಡಿ – ಪ್ರೇಮ ಪ್ರಕೃತಿಯ ಪಯಣ

ಪುಸ್ತಕ : C/O ಚಾರ್ಮಾಡಿ
ಲೇಖಕರು : ಸಚಿನ್ ತೀರ್ಥಹಳ್ಳಿ
ಪ್ರಕಾರ : ಕಾದಂಬರಿ
ಪ್ರಕಾಶಕರು : ಸ್ವಪ್ನ ಬುಕ್ ಹೌಸ್

ಇದನ್ನ ನೀವು ಓದೋಕೆ ಶುರು ಮಾಡಿದಿರಿ ಅಂದರೆ ಪೂರ್ತಿ ಓದೋವರೆಗು ಸ್ವೈಪ್ ಮಾಡೋ ಆಗಿಲ್ಲ. ಇಲ್ಲ ಪೂರ್ತಿ ಓದೋಕೆ ಆಗಲ್ಲ ,ಟೈಂ ಇಲ್ಲ, ಅಂದ್ರೆ ಇವಾಗ್ಲೇ ಸ್ಕಿಪ್ ಮಾಡಿ ಧನ್ಯವಾದ. ಈ ಚಳೀಲಿ ಬೆಳಗ್ಬೆಳಿಗ್ಗೆ ಐದ್ ಗಂಟೆಗೆ ಎದ್ದು ವರ್ಷ ಪೂರ್ತಿ ನೋಡದೆ ಇರೋ ಬುಕ್ಸ್ ಎಲ್ಲಾ ಹುಡುಕಿ ಮೀಟಿಂಗ್ ಗೆ ಪ್ರಿಪೇರ್ ಆಗಿ ಸಂಜೆವರೆಗೂ ಎಲ್ಲಾ ತರ ಎಲ್ಲರ ಹತ್ತಿರ ಕ್ಲಾಸ್ ಅಟೆಂಡ್ ಮಾಡಿ ಕಮೀಟ್ಮೆಂಟು ಟಾರ್ಗೆಟು,ಅಚೀವ್ಮೆಂಟು, ಅದು, ಇದು,ಹಾಳುಮೂಳು ಅಂತ ಉಗುಸ್ಕೊಂಡು ಮಾನಸಿಕವಾಗಿ ನೊಂದು, ಟ್ರಾಫಿಕ್ ಅಲ್ಲಿ ಹಿಂಸೆ ಪಟ್ಕೊಂಡು ಗಾಡಿ ಓಡುಸ್ಕೊಂಡು ಮನೆ ಸೇರಿ ದೈಹಿಕವಾಗಿ ನೋವು ತಿಂದಿದ್ರು , ಸಾಕಪ್ಪ ಈ ದಿನ ಕಣ್ಮುಚ್ಚಿ ಮಲಗಿದ್ರೆ ಸಾಕು ಅನ್ಕೊಂಡು ಇದ್ದವನಿಗೆ ನನ್ನ ಮೊದಲನೆ ಕಥಾಸಂಕಲನ ಪೆನ್ನು ಪೇಪರ್ ನಾ ವಿಜಯನಗರದ ಅಮೂಲ್ಯ ಪುಸ್ತಕ ಮಳಿಗೆಗೆ ಕೊಡಲು ಹೋಗಿದ್ದೆ. ಅಲ್ಲಿ ಕಣ್ಣಿಗೆ ಬಿತ್ತು C/O ಚಾರ್ಮಾಡಿ ಬರೆದಿರೋದ್ ಯಾರು ಸಚಿನ್ ತೀರ್ಥಹಳ್ಳಿ.

ಓದದೆ ಸುಮ್ಮನೆ ಬಿಡೋಕೆ ಆಗುತ್ತಾ, ಅಂದ್ರೆ ನಾನ್ ಮೊದ್ಲೇ ಕೇಳಿದ್ದೆ ಈ ಬುಕ್ ನಾ ಆದ್ರೆ ಇವತ್ತೇ ಬಂದಿತ್ತು. ನನಗು ಟೈಂ ಇರಲಿಲ್ಲ. ಅದರಲ್ಲಿ ಮಳೆ ಬೇರೆ. ಸುಮ್ಮನೆ ನಿಜ ಹೇಳ್ತೀನಿ,,, ಸುಮ್ಮನೆ ಏನಿದೆ ಒಂದೆರಡು ಪೇಜ್ ಓದೋಣ ಅಂತ ಓಪನ್ ಮಾಡಿದ್ದು ಅಷ್ಟೇ ಪ್ರಾಮಿಸ್ ಸುಮ್ಮನೆ ಎರಡು ಪೇಜ್ ಓದೋಣ ಅಂತ ಅಷ್ಟೇ ನಿಂತಕಾಲಲ್ಲೆ ಪೂರ್ತಿ ಓದಿ ಮುಗಿಸಿದ್ದೆ ಎರಡೂವರೆ ಗಂಟೆ ಅಷ್ಟೇ ಒಂದ್ ಫಿಲಂ ನೋಡಿದಷ್ಟು ಟೈಮ್ ಬುಕ್ ಮುಗಿದಿತ್ತು.
ನಾನ್ ಇವತ್ತೇ ಹೇಳ್ಬೇಕು ಈ ವಿಷಯನಾ, ಮತ್ತೆ ಇದು ನಮ್ಮಲ್ಲೆ ಮೊದಲು ಎಕ್ಸ್ ಕ್ಲೂಸಿವ್ ಅನ್ಕೊಳಿ, ಪ್ರತಿಗಳ ಸಂಖ್ಯೆ 500 ಇದೆ. ಈ 500 ಇದ್ಯಲ್ಲ ಇದು ಮುಂದೆ 5000 ಆಗುತ್ತೆ‌. ನನಗೆ ಈ ಲವ್ ಸ್ಟೋರಿ ಇಷ್ಟ ಆಗಲ್ಲ. ಆಗೋದೆ ಇಲ್ಲ. ಇದೇನಾದ್ರು ಫಿಲಂ ಆಗಿ ನನ್ನೆದುರಿಗೆ ಬಂದಿದ್ರೆ ಇಷ್ಟ ಪಡ್ತಿದ್ನೋ ಇಲ್ವೋ ಗೊತ್ತಿಲ್ಲ.

ಒಂದತ್ತು ಪೇಜ್ ಆದ್ಮೇಲೆ ಅಲೇಕಾನ್ ಕೃಷ್ಣಪ್ಪನ ಮಗಳು ಬಂದ್ಲು ವಾವ್ ಏನಪ್ಪ ಇದು ಮಾರ್ವೆಲ್ ,ವಿಕ್ರಮ್, ಫಿಲಂ ತರ ಇವರದ್ದೇ ಯೂನಿವರ್ಸ್ ಇರ್ಬೇಕು ಇದು ಅನ್ಕೊಂಡೆ ಸ್ಟಾಪ್ ……ಇದು ಪಕ್ಕಾ ಸ್ಪಾಯ್ಲರ್ ಬುಕ್ ಓದಿಲ್ಲ ಅಂದ್ರೆ ಇಲ್ಲಿಗೆ ನಿಲ್ಲಿಸ್ಬಿಡಿ ಪರ್ವಾಗಿಲ್ಲ ಬೇಜಾರೇನಿಲ್ಲ. ನವಿಲು ಕೊಂದ ಹುಡುಗ ಕಥಾಸಂಕಲನದಲ್ಲಿ ಒಂದು ಅಪ್ರಸ್ತುತ ಪ್ರಸಂಗ ಕಥೆಯಲ್ಲಿ ಬರೋ ಅಲೇಕಾನ್ ಹೊರಟ್ಟಿ ಇಂದ ಶುರುವಾಗುತ್ತೆ ಈ ಕಾದಂಬರಿ ಅದಕ್ಕು ಮೊದಲು ಅಂಕಲ್ ಅಂತ ಕರೆಯೋ ಕೊಳಲು ಇಷ್ಟ ಆಗ್ತಾಳೆ, ಎದೆ ಮೇಲಿರೋ ಚಪ್ಪಡಿ ಕಲ್ಲಿನ ತರ ಫಿಲ್ ಆಗ್ತಾ ಇದ್ದ ಲಾಸ್ಯ ಇಷ್ಟ ಆಗ್ತಾಳೆ ಯಾಕಂದ್ರೆ ಲೆಟ್ಸ್ ಎಂಡ್ ಇಟ್ ಇಯರ್ ಅಂದ್ರೆ ಲೈಟಾಗಿ ತಗೊಂಡು ಬ್ಲಾಕ್ ಮಾಡ್ಬೇಡ ನಾನೇನ್ ಪ್ರಾಬ್ಲಂ ಕೊಡಲ್ಲ ನೀನ್ ನನಗೆ ಒಳ್ಳೆ ಫ್ರೆಂಡ್ ಅಂತ ಹೇಳಿ ಬ್ರೇಕಪ್ ಮಾಡ್ಕೊಂಡು ಹೋಗ್ಬೇಕಾದ್ರೆ ಅಬ್ಬಾ ಸಮಾಧಾನ ಆಯ್ತು ಅಂತ ನಮ್ಗೆ ಒಂದ್ ಕಾಫಿ ಕುಡಿದು ಬ್ರೇಕ್ ಸಿಕ್ಕಷ್ಟೇ ನೆಮ್ಮದಿ. ಆಮೇಲೆ ಕಥೆ ಪ್ರಕಟ ಆದ ಬೆಳಿಗ್ಗೆ ವನ್ಶಿಕಾ ತಂದುಕೊಡೊ ಚಿಕನ್ ಪಲಾವ್ ಇಷ್ಟ ಆಗುತ್ತೆ.ಇಷ್ಟೆಲ್ಲಾ ಓದಿ ಅರ್ಥ ಆಗೋದು ನಾಯಕ ಒಂದು ಎಪಿಕ್ ಲವ್ ಗೆ ವೆಯ್ಟ್ ಮಾಡ್ತಾ ಇದ್ದಾನೆ ಅಂತ. ಆಮೇಲೆ ಇವರೇ ಬರೆದ ಕಥೆ ನಾ ಸಿನಿಮಾ ಮಾಡ್ಬೇಕು ಅಂತ ಲಿಂಗದೇವರು ನಿರ್ಧರಿಸಿ ಲೊಕೇಶನ್ ನೋಡೋಕೆ ಅಂತ ಜೋಗಿ ಸರ್ , ರಾಜೇಶ್ ಶೆಟ್ಟಿ, ವಿನಯ್ ಮಾಧವ್ ಲಿಂಗದೇವರು ಎಲ್ಲರು ಚಾರ್ಮಾಡಿ ಕಡೆ ಹೋಗ್ತಾರೆ. ಅಲ್ಲಿ ಬರೋ ಕೇಶವ ಮೂರ್ತಿ, ಮಿಸ್ಟರ್ ಎಕ್ಸ್ ತರ ನಿಗೂಢ ನಂದೀಶ್,ಶಕೀಲ್,…. ಫಾಲ್ಸ್ ನೋಡೋಕೆ ಹೋಗಿ ನಡೆಯೋಕಾಗ್ದೆ ಅಲ್ಲೆ ಒಂದ್ ಕಡೆ ಹಕ್ಕೆ ಮನೇಲಿ ಮಲ್ಕೋತಾನೆ ನಮ್ಮ ನಾಯಕ ಇಲ್ಲಿಂದಾನೆ ಶುರು ಆಗೋದು ಇಂಟ್ರೆಸ್ಟು ,, ಕ್ಯೂರಿಯಾಸಿಟಿ ಮುಂದೆ ಮುಂದೆ ಅಂತ ಓದಿಸಿಕೊಂಡು ಹೋಗೊ ಎಪಿಕ್ ಲವ್.

ನಾಯಕನ ಒಳಗಾಗೋ ತಳಮಳ ಸಂಕಟ ನೋವಲ್ಲೊಂದು ಖುಷಿ ಓದುವ ನಮ್ಮೊಳಗು ಆಗ್ತಾ ಇರುತ್ತೆ.ನಾಯಕನಿಗೆ ಹೆಣ್ಣುಮಕ್ಕಳ ಹೆಸರಿನ ಅರ್ಥ ಕೇಳೋ ಅಭ್ಯಾಸ ವನ್ಶಿಕಾ ಅಂದ್ರೆ ಕೊಳಲು ವೆನ್ನೆಲಾ ಅಂದ್ರೆ ತೆಲುಗಿನಲ್ಲಿ ಬೆಳದಿಂಗಳು. ಇದರ ಮಧ್ಯೆ ಬುಕ್ ರಿಲೀಸ್ ಆಗಿ ಒಬ್ಬಳು ರಿವ್ಯೂ ಮೆಸೇಜ್ ಕೂಡಾ ಮಾಡಿರ್ತಾಳೆ ನೆನಪಿರಲಿ ಅವಳೇನು ಗಿಫ್ಟ್ ಕೊಡ್ತಾ ಇರಲ್ಲ ಅಷ್ಟೇ.ಅವಳಿಗೆ ಥ್ಯಾಂಕ್ಸ್ ಅಂತ ಹೇಳಿ ಸುಮ್ಮನೆ ಆಗಿರುತ್ತಾನೆ. ನನಗೆ ಈ ತರ ಕುತೂಹಲ ಇದ್ದಿದ್ದು ಬೆಳದಿಂಗಳ ಬಾಲೆ ಫಿಲಂ ನೋಡೊವಾಗ ಮತ್ತೆ ಆ ಫೀಲ್ ಸಿಕ್ಕಿದ್ದು ಇಲ್ಲೇ, ನಾನು ಮೊದಲೆ ಹೇಳಿದ್ದೆ ನನಗೆ ಲವ್ ಸ್ಟೋರಿ ಇಷ್ಟ ಆಗಲ್ಲ ಅಂತ ಏನಪ್ಪಾ ಇದು ಇದೇ ತರ ಹೋಗ್ತಾ ಇದ್ಯಲ್ಲ ಅಂತ ಅನ್ನಿಸೋಕೆ ಶುರುವಾಗಿ ಐದು ಲೈನ್ ಮುಂದೆ ಓದಿದ್ದು ಅಷ್ಟೇ ಆದಾಗ್ಲೇ 80 ಪೇಜ್ ಮುಗಿದಿತ್ತು. ಯಪ್ಪಾ ಅಂತ ಬಾಯ್ಮೇಲೆ ಬೆರಳಿಟ್ಟುಕೊಳ್ಳೋ ತರ ಒಂದ್ ಟ್ವಿಸ್ಟು ವಾವ್ … ನೀವೇನಾದ್ರು ಓದಿ ಇದು ತುಂಬಾ ನೋಡಿದಿನಿ ಅಂದ್ರೆ ಅದು ನಿಮ್ಮ ತಪ್ಪು ಈ ಪ್ಲೇಸ್ ಅಲ್ಲಿ ನಾನು ಅದನ್ನ ನಿರೀಕ್ಷಿಸಿರಲಿಲ್ಲ. ವಾವ್ ಅನ್ನಿಸ್ತು ಸೂಪರ್ ಎಂತಾ ಟ್ವಿಸ್ಟು ಇದು ಪ್ರೀಕ್ಲೈಮ್ಯಾಕ್ಸ್ ಅಷ್ಟೇ ಕ್ಲೈಮ್ಯಾಕ್ಸ್ ಇನ್ನು ಇದೆ. ಇರೋದು ಅಪಾರ್ಟ್ಮೆಂಟ್,, ಮೊದಲೇ ಒಂದುಡುಗಿ ಮೆಸೇಜ್ ಮಾಡಿದ್ಲು ಇವರು ಥ್ಯಾಂಕ್ಸ್ ಅಂತ ಹಾಕಿದ್ರು ಆಮೇಲೆ ಆಫೇರ್ ಅನ್ವೋದ್ ಬಂತು ,, ಮಿಸ್ಟರ್ ಎಕ್ಸ್ ಅಲ್ಲಿರೋ ಸ್ಮೋಕಿಂಗ್ ಜೋನ್ ಕಥೆ ನೆನಪಾಯ್ತು.

ಎಲ್ಲಾ ಆಯ್ತು ಮುಗೀತು ಹೌದು ನನಗೆ ಎಲ್ಲೋ ಒಂದು ಕಡೆ ಅಂದುಕೊಂಡೆ ಇವರಿಬ್ಬರ ಭೇಟಿನೇ ಕ್ಲೈಮ್ಯಾಕ್ಸ್ ಆಗುತ್ತೆ ಅಂತ ಆದ್ರೆ ಅದು ಮೊದಲು ಸಿಕ್ಕ ಜಾಗದಲ್ಲೇ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ಆದ್ರಲ್ಲು ಅವನು ಅಂದುಕೊಳ್ಳುತ್ತಾನೆ ಇದು ಕನಸಾಗದೆ ಇರಲಿ ಅಂತ ನನಗೆ ಹೇಗ್ ಫೀಲ್ ಆಯ್ತು ಅಂದ್ರೆ ಮೊಸರನ್ನ ಬಿರಿಯಾನಿ ತಿಂದ್ರೆ ಈ ರೇಂಜಿಗೆ ಕನಸು ಬೀಳುತ್ತಾ ಅಂತ,, ಮತ್ತೆ ನನಗೆ ಇವರೀಗ ಎದ್ದು ಫಾಲ್ಸ್ ಕಡೆ ಹೋಗ್ತಾರ ಇಲ್ಲ,, ನಂದೀಶ ಶಕೀಲ್ ಬಂದು ದಾರಿ ತಪ್ಪಿದ ಇವರನ್ನ ಕರ್ಕೊಂಡು ಹೋಗ್ತಾರ ಅಂತ. ಅವರೊಂದು ಜೋಗಿ ಸರ್ ಗೆ ಲೆಟರ್ ಬರಿತಾರೆ ಅಲ್ಲೊಂದಷ್ಟು ವಿಷಯ ಇಷ್ಟ ಆಯ್ತು. ಕುಂಟಿನಿ ಸರ್ ಇದರ ಬಗ್ಗೆ ಪೋಸ್ಟ್ ಮಾಡಿದ್ರು ಅದು ಇದೇ ಫಿಲಂ (ಕಾದಂಬರಿ) ಅಲ್ಲಿ ಬರೋ ಸ್ನೀಕ್ ಪೀಕ್ ತರ ಸಣ್ಣ ತುಣುಕು ಅಷ್ಟೇ ಅದು ಓದಿ ನೀವು ಏನೇನೋ ಇಮ್ಯಾಜಿನ್ ಮಾಡ್ಕೋಬೇಡಿ ಪಕ್ಕಾ ಯಾಮಾರ್ತೀರಾ . ಮತ್ತೆ ನೆನಪಿರಲಿ ಇವರು ಚೆನ್ನಾಗಿ ಯಾಮಾರಿಸುತ್ತಾರೆ. ಸಚಿನ್ ತೀರ್ಥಹಳ್ಳಿ ಅವರನ್ನ ನಾವೆಲ್ಲಾ ಲವ್ ಮಾಡ್ತೀವಿ ಅದು ಲೆಕ್ಕಕ್ಕಿಲ್ಲ ಆದ್ರೆ ಈ ಕಾದಂಬರಿ ಓದಿ ಲೆಕ್ಕಕ್ಕೆ ಇಟ್ಕೊಳ್ಳೊ ತರ ಅದೆಷ್ಟು ಬೆಳದಿಂಗಳಬಾಲೆಯರು ಲವ್ ಮಾಡ್ತಾರೋ ಗೊತ್ತಿಲ್ಲ. ನಾನು ಇದನ್ನ ಓದಿ ಮುಗಿಸಿದ ಮೇಲೆ ಅವರಿಗೆ ಮೆಸೇಜ್ ಮಾಡ್ದೆ ಆದ್ರೆ ಇದು ಓದಿದ ಮೇಲೆ ಅವರ ಜೊತೆ ಒಂದು ರೀತಿ ಸಲುಗೆ ಬೆಳೆಯುತ್ತೆ. ನೋಡಿ ಟೈಂ ಎರಡಾಗ್ತಾ ಬಂತು ದಿನವಿಡಿ ಇದ್ದ ಫ್ರಸ್ಟ್ರೇಷನ್ ಡಿಪ್ರೆಶನ್, ಇರಿಟೇಷನ್ , ಯಾವ್ದು ಈಗ ಇಲ್ಲ. ನನಗೆ ಬಹಳ ಇಷ್ಟ ಆಗಿದ್ದು ಮತ್ತಿದು ಇವರ ಸ್ಟ್ರೆಂತ್,ಸ್ಕ್ರೀನ್ ಪ್ಲೇ, ಇವರ ನಿರೂಪಣೆ ಅತ್ಯಮೋಘ . ಭವಿಷ್ಯದ ಭರವಸೆಯ ಬರಹಗಾರ ಸಚಿನ್ ತೀರ್ಥಹಳ್ಳಿ.

ಶಿವಾಗ್

Related post

Leave a Reply

Your email address will not be published. Required fields are marked *