ಅ-ಜಾಂತ ಎಂದರೆ ತಿಳಿಯದ್ದು ಎಂದು ಅರ್ಥ. ಹಾಗಾಗಿ ಅಜಂತ ನಾಮಧೇಯವಾಗಿದೆ. ಇದು ಹುಲಿಗಳೇ ವಾಸಿಸುವ ದಟ್ಟ ಅರಣ್ಯದಲ್ಲಿದ್ದು ವಾಘೋರ ಎಂಬ ನದಿಯ ದಡದಲ್ಲಿ ಇದೆ. ನದಿಯು ಕುದುರೆಯ ಲಾಳದ ಆಕಾರದಲ್ಲಿ ಬಾಗಿ ಮುಂದಕ್ಕೆ ಹರಿಯುತ್ತದೆ. ವ್ಯಾಘ್ರಗಳೇ ಹೆಚ್ಚಾಗಿರುವ ಈ ಕಾಡಿನಲ್ಲಿ ಎಲ್ಲ ಹುಲಿಗಳೂ ನೀರು ಕುಡಿಯಲು ಇಲ್ಲಿಗೇ ಬರುವುದರಿಂದ ಈ ನದಿಗೆ ವಾಘೋರ ಎಂಬ ಹಸರು ಬಂದಿದೆ, ಈ ಪರಿಸರದ ಕಲ್ಲುಗಳು ಬಹಳ ಕಠಿಣವಾಗಿರುವುದರಿಂದ ಶಿಲಾನ್ಯಾಸಕ್ಕೆ ಸೂಕ್ತವಾದುದು ಮತ್ತು ಬೇಸಿಗೆಯನ್ನು ಬಿಟ್ಟು ಉಳಿದ ಎಲ್ಲ ಕಾಲಮಾನಗಳೂ ಬಹಳ […]
ಕರ್ನಾಟಕದಲ್ಲಿ ನಾಗಮಂಡಲವು ಸಾಂಸ್ಕೃತಿಕ, ಜಾನಪದೀಯ, ಚಿತ್ರಕಲಾತ್ಮಕ, ಆಚರಣ ಸಿದ್ಧಾಂತಗಳ ದೃಷ್ಠಿಕೋನದಲ್ಲಿ ಬಹಳ ಮುಖ್ಯವಾದ ಆಧ್ಯನಶೀಲ ಅಂಶವಾಗಿದೆ. ರಾಜಸ್ಥಾನದ ನಿಮಾಡ್ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಂಡಣ ಎಂಬ ರಂಗೋಲಿ ಬಿಡಿಸುವ ಪದ್ದತಿ ಇದೆ. ವಿಶೇಷವೆಂದರೆ ನಾವು ಕರ್ನಾಟಕದ ಕರಾವಳಿಯಲ್ಲಿ ಬಳಸುವ ಮಂಡಲ ಮತ್ತು ರಾಜಾಸ್ಥಾನದಲ್ಲಿ ಬಳಸುವ ಮಂಡಣ ಎಂಬ ಪದವು ಅಧ್ಯಯನದ ದೃಷ್ಠಿಯಲ್ಲಿ ಬಹಳ ಪ್ರಮುಖ ಎನಿಸುತ್ತದೆ. ಪದೋಚ್ಛಾರಣೆಯು ಒಂದೇ ರೀತಿಯಾಗಿದ್ದರೂ ಆ ಚಿತ್ತಾರಗಳು ಬಿತ್ತರಿಸಿಕೊಳ್ಳುವ ಗುರಿ ಮಾತ್ರ ಬೇರೆಯಾಗಿರುತ್ತದೆ. ಹಾಗೆಯೇ ಭಾರತದ ವಿವಿಧ ರಾಜ್ಯಗಳಲ್ಲಿ […]Read More
“ಜಿಗಿ ಜಿಗಿ ಬೊಂಬೆಯಾಟ” ಇದು ನಾಟಕಕಾರರಾದ ‘ಎ ಎಸ್ ಮೂರ್ತಿ’ ರವರು ಕಿರುತೆರೆಯಲ್ಲಿ ತಂದ ಪ್ರಸಿದ್ಧ ಧಾರಾವಾಹಿಯ ಹೆಸರು. ಈ ಬೊಂಬೆಯಾಟವು ತೊಗಲು ಬೊಂಬೆಯಾಟ ನಮ್ಮ ಜನಪದಕಲೆಯಾಗಿದ್ದು ಇದರ ಬಗ್ಗೆ ತಿಳಿಯೋಣ. ತೊಗಲು ಬೊಂಬೆಯಾಟವು ಚಿತ್ರಕಲೆ, ಹಾಡು, ನೃತ್ಯ ಮತ್ತು ಬೆಳಕಿನ ಅಂಶಗಳನ್ನು ಮೇಳೈಸಿಕೊಂಡು ಮುನ್ನಡೆಯುವ ಪ್ರದರ್ಶನ ಚಿತ್ರಕಲೆ. ವಿಜ್ಞಾನ, ಪುರಾಣ, ಇತಿಹಾಸ, ಕಾವ್ಯಗಳು ಮತ್ತು ಬದುಕಿನ ತೊಳಲಾಟವನ್ನು ಮೇಳೈಸಿಕೊಂಡ ವಿಶಿಷ್ಠವಾದ ಜನಪದ ಪ್ರಯೋಗ ಕಲೆ. ಈ ಕಲೆ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಕಲೆ […]Read More
ಜನಪದ ಚಿತ್ರಗಳು ಸಾಮಾನ್ಯವಾಗಿ ಕಾಲದಿಂದ ಕಾಲಕ್ಕೆ ತಮ್ಮ ಅಭಿವ್ಯಕ್ತಿಗಳ ಅಸ್ತಿತ್ವವನ್ನು ಬದಲಿಸಿಕೊಳ್ಳುತ್ತಾ ಬರುತ್ತಿವೆ. ಈ ಬದಲಾವಣೆಯನ್ನು ಪರಿವರ್ತನೆ ಅಥವಾ ರೂಪಾಂತರ ಎಂಬ ಹೆಸರಿನಲ್ಲಿ ವಿದ್ವಾಂಸರು ಗುರುತಿಸುತ್ತಾ ಬಂದಿದ್ದಾರೆ. ಅಂದರೆ ಅದರ ಮೂಲ ಸ್ವರೂಪವನ್ನು ಉಳಿಸಿಕೊಂಡು ಹಲವು ವಿಧಿವಿಧಾನಗಳ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಇದು ಸಾಗಿದೆ. ಜನಪದ ಚಿತ್ರಗಳ ಸಾಮಾನ್ಯ ಸ್ವರೂಪವನ್ನು ಜನಪದ ಭಿತ್ತಿಚಿತ್ರಗಳ ಮೂಲ ಹಾಗೂ ಅವುಗಳ ನೇಪಥ್ಯ, ಚಾರಿತ್ರಿಕ, ಭೌಗೋಳಿಕ, ನೈಸರ್ಗಿಕ ಹಿನ್ನೆಲೆಯಲ್ಲಿ ಕನ್ನಡ ಜನಪದ ಚಿತ್ರಕಲೆಯ ಪ್ರಯೋಗ ವಿಧಾನ, ವಿಕಾಸ, ಗ್ರೀಕ್, […]Read More
“ಕಣಿ ಏಳ್ತೀನಮ್ಮ ಕಣಿ” ಅಥವಾ “ಕೊಂಡಮಾಮ-ಕುರ್ರಮಾಮ” ಎಂದು ರಾಗವಾಗಿ ಭವಿಷ್ಯವನ್ನು ಹೇಳುತ್ತಾ ಊರು ಊರು ತಿರುಗುವುವರನ್ನು ನೋಡಿರುತ್ತೀರಿ. ಇವರುಗಳ ಚಟುವಟಿಕೆಗಳು “ನೀಲಿ ಹೊತ್ತಿಗೆ“ಎಂಬ ಜನಪದ ಕಲೆಯ ಭಾಗವಾಗಿದೆ. ಇವರುಗಳು ಹೇಳುವ ಭವಿಷ್ಯ ಹಾಗು ಅವಲಂಬಿಸುವ ಚಿತ್ರಗಳ ಬಗ್ಗೆ ಒಂದು ಅವಲೋಕನ ನೀಲಿ ಹೊತ್ತಿಗೆ: ಜನನ-ಮರಣ, ಹಬ್ಬ-ಹರಿದಿನ, ಜಾತ್ರೆ-ಉತ್ಸವ, ಮದುವೆ- ದಿಬ್ಬಣದಂತದ ಸಂದರ್ಭಗಳಲ್ಲಿ, ಕೂರಿಗೆ ಹೂಡಿ, ಬಿತ್ತನೆ ಮಾಡುವ, ಬೆಳೆ ಕೊಯ್ಯುವ, ಗೂಡು ಹಾಕುವ, ಕಣ ಮಾಡುವ, ಹೀಗೆ ಹಲವು ಹಲವಾರು ಸಂದರ್ಭಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಹೂರ್ತ ನೋಡುವಂತಹ […]Read More
ಕಳೆದ ವಾರ ನಮ್ಮ ಸಂಸ್ಕೃತಿಯ ಹೆಮ್ಮೆಯ ಕಲೆ ಚನ್ನಪಟ್ಟಣದ ಬೊಂಬೆಯ ಬಗ್ಗೆ ಓದಿದ್ದೀರಿ. ಈಗ ಕಲೆ ಸಂಸ್ಕೃತಿಯ ಅಳಿವಿನಂಚಿನಲ್ಲಿದ್ದು ಈಗ ಕೇಂದ್ರ ಸರ್ಕಾರದ ಕೃಪೆ ಯಿಂದ ಮತ್ತೆ ಪುನರ್ಉದಯಿಸುತ್ತಿರುವ ಕಿನ್ನಾಳ ಕಲೆ ಹಾಗು ಅದನ್ನೇ ನೆಚ್ಚಿಕೊಂಡಿರುವ ಕಲಾವಿದರ ಬಗ್ಗೆ ತಿಳಿಯೋಣ. ವಿಜಯನಗರ ಸಾಮ್ರಾಜ್ಯವು ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೇ ಧಾರ್ಮಿಕ ರಕ್ಷಣೆಯನ್ನು ಕೊಟ್ಟ ಕರ್ನಾಟಕದ ರಾಜಮನೆತನ. ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಂತೆ ಕುಸರಿ ಕಲೆಯು ಆ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದಿತ್ತು. ವಿಜಯನಗರ ಮಹಾ ಸಂಸ್ಥಾನದ ಪತನದ ನಂತರ […]Read More
ಆಟಿಕೆಗಳು ಕೇವಲ ಆಟಿಕೆಗಳಲ್ಲ, ಅದರಿಂದ ಮಕ್ಕಳ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಬೆಳವಣಿಗೆಯಾಗುತ್ತದೆ. ಮತ್ತು ಇತರರ ಜತೆ ಬೆರೆಯುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. “ಆಟಿಕೆಗಳಿಂದ ಮನೋರಂಜನೆಯಷ್ಟೇ ಸಿಗುವುದಿಲ್ಲಆಟದ ಜೊತೆಗೆ ಪಠ್ಯ ಕಲಿಯುವುದು ನೂತನ ಶಿಕ್ಷಣ ನೀತಿಯ ಭಾಗವಾಗಲಿದೆ ಎಂದು ಎನ್ಇಪಿ ಹೇಳುತ್ತದೆ”. ಲಡಾಖ್ ಗಡಿ ತಂಟೆ ಬಳಿಕ ‘ಬಾಯ್ಕಾಟ್ ಚೀನಾ’ ಆಂದೋಲನ ತೀವ್ರಗೊಳಿಸಿದ ಕೇಂದ್ರ ಸರಕಾರ, ಚೀನಾ ಆಟಿಕೆಗಳ ಅಬ್ಬರಕ್ಕೆ ಕಡಿವಾಣ ಹಾಕಿ ಜಾಗತಿಕ ಆಟಿಕೆಗಳ ತಯಾರಿಕಾ ಕ್ಷೇತ್ರದಲ್ಲಿ ಚೀನಾ ಹೊಂದಿರುವ ಪ್ರಾಬಲ್ಯ ಹತ್ತಿಕ್ಕಲು ಆತ್ಮನಿರ್ಭರ ಅಭಿಯಾನ ಕೈಗೊಂಡಿದೆ. […]Read More