ಮೇಘಸ್ಪೋಟ ಈ ಮೇಘಸ್ಪೋಟ ಹೆಚ್ಚಾಗಿ ಸಮುದ್ರ ಮಟ್ಟದಿಂದ ಮೇಲೇ ಇರುವ ಪರ್ವತ ಪ್ರದೇಶಗಳಲ್ಲಿ ಅದರಲ್ಲೂ ದಟ್ಟ ಕಾಡುಮೇಡಿನಿಂದ ಆವೃತವಾದ ನಾಲ್ಕೈದು ಬೆಟ್ಟದ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಇಂಗ್ಲಿಷಿನಲ್ಲಿ ಇದನ್ನ “Cloudburst” ಅಂತ ಕರೀತಾರೆ. ಒಂದು ಬೆಟ್ಟದ ಬದಿಯಿಂದ ದಟ್ಟವಾಗಿ ತೂರಿ ಬರುವ ಮೋಡಗಳಿಗೆ ಅಡ್ಡಲಾಗಿ ನಿಂತ ಮುಂದಿನ ಬೆಟ್ಟ ಪ್ರದೇಶವನ್ನ ತೂರಿ ಹೋಗಲಾಗದೇ ಮಧ್ಯದಲ್ಲಿ ಸಿಕ್ಕಿಬಿದ್ದಾಗ ವಿಪರೀತ ವಾಯುಭಾರ ಕುಸಿತ ಉಂಟಾಗುತ್ತದೆ. ಅದೇ ಸಮಯದಲ್ಲಿ ಕಾಡಿನಿಂದ ಆವೃತವಾದ ಬೆಟ್ಟ ಪ್ರದೇಶವು ಮೋಡಗಳನ್ನ ತಕ್ಷಣವೇ ನೀರಾಗಿ ಪರಿವರ್ತಿಸಲು ಪ್ರಚೋದಿಸುತ್ತವೆ. ಮೋಡಗಳುನೀರಾಗಿ […]
ನಮ್ಮಮ್ಮ ಕಾವೇರಿ ಕಾವೇರಿ !! ಅಂದರೆ ಅವಳು ಬರೀ ನೀರಿನ ಹನಿಯಲ್ಲ ಸಿಹಿಯಾದ ಜೇನು. ಕನ್ನಡಿಗರ ಹೆಮ್ಮೆಯ ಮನೆ ಮಗಳು. ಇನ್ನೂ ಕೆಲ ಕವಿಗಳು ಅವಳಿಗೆ ಪೂಜ್ಯ ಸ್ಥಾನ ಕೊಟ್ಟು ತೀರ್ಥವೆಂದೆನ್ನುತ್ತಾರೆ. ಅವಳ ವರ್ಣನೆ ಮಾಡದ ಕವಿಗಳಿಲ್ಲ. ಅವಳಿಗೂ ಕವಿಗಳಿಗೂ ಅಗಾಧ ಅನುಬಂಧವಾದರೂ, ಅವಳ ಅಂದ ವರ್ಣನೆಗೂ ಮೀರಿದ್ದು. ಅವಳಿಂದಲೇ ಭೂತಾಯಿ ಮಡಿಲು ಹಚ್ಚ ಹಸಿರು, ಈ ಇಳೆಗೆ ಬೆಳೆ, ಕಳೆ ಎಲ್ಲವೂ. ನಿತ್ಯವೂ ನೋಡುಗರಿಗೆ ನೂತನ, ಚೇತನ ಮನೋಹರವಾಗಿದ್ದಾಳೆ ಈ ಕಾವೇರಿ. ವಿಷ್ಣುವರ್ಧನ್ ಅಭಿನಯದ ‘ಜೀವನದಿ’ […]Read More
ಓಜೋನ್ ಪದರ ಇದು ಭೂತಾಯಿಯ ಉದರ ಓಜೋನ್ ಅಂದರೆ ಮೂರು ಆಮ್ಲಜನಕದ ಸಣ್ಣ ಸಣ್ಣ ಕಣಗಳಿಂದ ಆದ ಪದರ. ಇದು ವಾಯುಮಂಡಲದ ಅತಿ ಕೆಳಗಿನ ಪದರಗಳಾದ ಟ್ರೋಪೊಸ್ಪಿಯರ್ ಹಾಗೂ ಸ್ಟ್ರಾಟೋಸ್ಪಿಯರ್ ನಲ್ಲಿರುತ್ತದೆ. ಟ್ರೋಪೊಸ್ಪಿಯರ್ ಭೂಮಿಯಿಂದ 12 ಕಿಮೀ ವರೆಗೂ ಪಸರಿಸಿದ್ದರೆ, ಸ್ಟ್ರಾಟೋಸ್ಪಿಯರ್ ಐವತ್ತು ಕಿಮೀವರೆಗೂ ಹಬ್ಬಿದೆ, ಅದರೆ ಶೇಕಡಾ 90ರಷ್ಟು ಓಜೋನ್ ಕಣಗಳು ವಾಯುಮಂಡಲದ ಸ್ಟ್ರಾಟೋಸ್ಪಿಯರ್ನಲ್ಲಿ ಹರಡಿಕೊಂಡಿರುತ್ತದೆ. ನೈಸರ್ಗಿಕವಾಗಿ ಸೂರ್ಯಕಿರಣಗಳು ಆಮ್ಲಜನಕದ ಕಣಗಳೊಡನೆ ನಡೆಸುವ ಕ್ರಿಯೆಯಿಂದ ಈ ಓಜೋನ್ ಪದರ ನಿರ್ಮಾಣವಾಗುತ್ತದೆ. ಸ್ಟ್ರಾಟೋಸ್ಪಿಯರ್ ನಲ್ಲಿ ಸೂರ್ಯಕಿರಣಗಳ ಪ್ರಭಾವದಿಂದ […]Read More
ಸಹ್ಯಾದ್ರಿ ವನ ಉಳಿಸಿಕೊಳ್ಳಲು ಅಭಿಯಾನ ಬೆಂಗಳೂರು ಜ್ಞಾನ ಭಾರತಿ ಪುಣ್ಯಧಾಮವಾಗಿರುವುದು ನಮ್ಮೆಲ್ಲರ ಸುಕ್ರುತ. ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದ ಬಯೋ ಪಾರ್ಕ್ ಆಮ್ಲಜನಕದ ಕಣಜವಾಗಿ, ಇಂಗಾಲ ಹೀರಿಕೊಳ್ಳುವ ಕೆಲಸ ಮಾಡುತ್ತಿದೆ. ನೀರಿನ ಆಸರೆಯೂ ಹಾಗೂ ಅಂತರ್ಜಲ ಮರುಪೂರಣ ಕೇಂದ್ರವೂ ಆಗಿದ್ದು ಬೆಂಗಳೂರಿಗರ ಸೌಭಾಗ್ಯ. ಹೈಕೋರ್ಟ್ ನಿರೀಕ್ಷೆಯಂತೆ ಇಕೋತೆರಪಿ ಕಾರ್ಯಕ್ರಮ ಡಾ.ಯಲ್ಲಪ್ಪ ರೆಡ್ಡಿಯವರಿಂದ ನಡೆಯುತ್ತಾ ವಿಶೇಷ ಚೇತನ ಮಕ್ಕಳ ಆಶಾದೀಪವಾಗಿದೆ. ಜ್ಞಾನ ಭಾರತಿಯಲ್ಲಿ ಲಕ್ಷಾಂತರ ಮರಗಳನ್ನು ಬೆಳೆಸಲು ಸ್ವಾಟ್, ಗ್ರೀನ್ಸ್ ಆರ್ಮಿ ಫೋರ್ಸ್, ಮಿಡಿತ ಫೌಂಡೇಶನ್, ಜೀವನ್ಮುಕ್ತಿ, ಅದಮ್ಯ […]Read More
ವಟವೃಕ್ಷ – ಆಲದ ಮರ ಆಲದ ಮರವು ಹಲಸಿನ ಕುಟುಂಬಕ್ಕೆ ಸೇರಿದ (ಮೋರೇಸೀ ಕುಟುಂಬ), ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಪರಾವಲಂಬಿ ಸಸ್ಯವಾಗಿ (ಎಪಿಫೈಟಿಕ್ ಅಂದರೆ ಇತರ ಮರಗಳನ್ನು ಆಶ್ರಯಿಸಿಕೊಂಡು ಬೆಳೆದು ನಂತರ ತಾನು ಸ್ವತಂತ್ರವಾಗಿ ಬೆಳೆಯುವ ಜಾತಿಯ ಸಸ್ಯ) ಜನ್ಮ ತಾಳುತ್ತದೆ. ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ಭಾರತ ದೇಶದ ರಾಷ್ಟ್ರೀಯ ವೃಕ್ಷವೂ ಆಗಿದೆ. ಹಿಂದೂ ಧರ್ಮದಲ್ಲಿ ಪೂಜ್ಯನೀಯವಾಗಿರುವ ಅಶ್ವತ್ಥ ವೃಕ್ಷವೂ(ಅರಳೀ […]Read More
ಅಮೇಜಾನ್ ಮತ್ತು ಸಹಾರಾ ಪ್ರಕೃತಿಯಲ್ಲಿ ವಾಯುವನ್ನ ನೇರವಾಗಿ ನೋಡಲಾಗದಿದ್ದರೂ ಅದರ ಅರೂಡಾವಸ್ತೆಯಲ್ಲಿ ಅನುಭವಿಸುತ್ತೇವೆ. ಸರೂಪಗಳ ಮೇಲೆ ಗಾಳಿ ತನ್ನ ವಿವಿಧ ಸ್ತಿತಿಗಳಲ್ಲಿ ಉಂಟುಮಾಡುವ ಪರಿಣಾಮದ ಚಿತ್ರಗಳಲ್ಲಿ ಅದು ಗೋಚರವಾಗುತ್ತದೆ;ತನ್ನ ಗರಿಗಳನ್ನೆಲ್ಲ ಒಕ್ಕಡೆಗೆ ಚಾಚಿ, ಬಾಗಿ,ತೂಗಾಡುತ್ತಿರುವ ತೆಂಗಿನ ಮರದ ಚಿತ್ರದಲ್ಲಿ, ಬರ್ರನೇ ಬೋರ್ಗರೆಯುತ್ತಾ ತೀರವನ್ನಪ್ಪಳಿಸುತ್ತಿರುವ ಕಡಲಿನ ತೆರೆಗಳಲ್ಲಿ,ಆಕಾಶದಲ್ಲಿ ರಿಂಗಣಗುಣಿಯುತ್ತಿರುವ ಹುಲ್ಲಿನ ಚಿಂದಿಗಳಲ್ಲಿ, ಬಾನಂಗಳದಲ್ಲಿ ಚಲಿಸುವ ಕಾರ್ಮೋಡಗಳಲ್ಲಿ, ಒಯ್ಯೇಂದು ತಲೆದೂಗುವ ಹೂಮರ ಲತೆಬಳ್ಳಿಗಳಲ್ಲಿ ..ಇಂತಹ ನೂರಾರು ಚಿತ್ರಗಳಲ್ಲಿ , ಬಲ್ಗಾಳಿಯಾಗಿ, ಕಾರ಼್ಗಾಳಿಯಾಗಿ, ಬಿರುಗಾಳಿಯಾಗಿ, ತಿರಿಗಾಳಿಯಾಗಿ, ತಂಗಾಳಿಯಾಗಿ, ಮೇಲ್ಗಾಳಿಯಾಗಿ ಅನೇಕಾವಸ್ಥೆಯಲ್ಲಿ ವಾಯು […]Read More
ಪಶ್ಚಿಮ ಘಟ್ಟದಲ್ಲೊಂದು ಇಣುಕು ಗಂಗೆ ಹುಳು ಕುರಿಂಜಾಲು ಬೆಟ್ಟದ ಚಾರಣ ಹೋಗುವಾಗ ಅಲ್ಲಲ್ಲಿ ಬಿದ್ದಿದ್ದ ಉಂಡೆ ರೂಪದ ಹುಳು ಗಮನಿಸಿದ್ದೆ.ಚಾರಣ ಮುಗಿಸಿ ಇಳಿಯುತ್ತಾ ಇದ್ದಾಗ ಅದೇ ಹುಳು ಚಲಿಸುತ್ತಿತ್ತು. ಹಿಂದಿನ ಅನೇಕ ಚಾರಣಗಳಲ್ಲಿ ವಿವಿಧ ಬಣ್ಣಗಳ ಈ ಹುಳುಗಳನ್ನು ಗಮನಿಸಿದ್ದೆ. ಸುಮಾರು ನಾಲ್ಕು ಇಂಚು ಉದ್ದದ ಹುಳ. ಎರಡು ಆಂಟೆನಾಗಳನ್ನು ಬಳಸಿಕೊಂಡು ದಾರಿ ಮಾಡಿಕೊಂಡು ಹೆಜ್ಜೆ ಹಾಕುತ್ತಿತ್ತು. ಅದನ್ನು ಮುಟ್ಟಿದ್ದೇ ತಡ ಚೆಂಡಿನಾಕಾರ ತಾಳಿ ತಟಸ್ಥವಾಯಿತು. ಈ ಹುಳುವಿಗೆ ಗಂಗೆ ಹುಳು. ಉಂಡೆ ಹುಳ, ಗೋಲಿ ಹುಳ […]Read More
ಮಲಬಾರ್ ಟ್ರೋಗನ್ – ಕಾಡುಕುರಿ ಪಶ್ಚಿಮ ಘಟ್ಟ ಅಳಿನಂಚಿನಲ್ಲಿರುವ ಹಲವಾರು ಜೀವ ಸಂಕುಲಗಳ ಆವಾಸಸ್ಥಾನವಾಗಿದೆ.ಭಗವತಿ ಪ್ರಕೃತಿಯ ಮಡಿಲಲ್ಲಿ ನಾ ಕಂಡ ಈ ಪಕ್ಷಿ ಗಮನ ಸೆಳೆದಿತ್ತು. ಪಶ್ಚಿಮ ಘಟ್ಟಗಳಲ್ಲಿ, ಮಧ್ಯ ಭಾರತದ ಬೆಟ್ಟ-ಗುಡ್ಡಗಳಲ್ಲಿ, ಪೂರ್ವ ಘಟ್ಟದ ಎತ್ತರದ ಪ್ರದೇಶಗಳಲ್ಲಿ ಕಂಡು ಬರುವ ಸುಂದರ ಪಕ್ಷಿ ಮಲಬಾರ್ ಟ್ರೋಗನ್’ ಗಾಢ ಬಣ್ಣದ ರೆಕ್ಕೆ ಹೊಂದಿರುವ ಎತ್ತರದ ಕಾಡುಗಳಲ್ಲಿ, ಮರ-ಗಿಡಗಳಲ್ಲಿ ಗೂಡು ಕಟ್ಟಿಕೊಂಡು ಜೀವಿಸುವ ವಲಸೆ ಜೀವಿ ಮಲಬಾರ್ ಟ್ರೋಗನ್.ಇದರ ವೈಜ್ಞಾನಿಕ ಹೆಸರು harpactes fasciatus. ನಮ್ಮ ದೇಶದ ಪಶ್ಚಿಮಘಟ್ಟ, […]Read More
ನಮ್ಮ ಚಾರಣದಲ್ಲಿ ಹುಲ್ಲುಗಾವಲು ಪ್ರದೇಶ ಕಂಡಾಗ ಅಲ್ಲಲ್ಲಿ ಬಿದ್ದಿದ್ದ ಸೆಗಣಿಯನ್ನು ತೋರಿಸಿದ ನಮ್ಮ ಚಾರಣದ ಮಾರ್ಗದರ್ಶಿ ರಂಜಿತ್ ಈ ಸೆಗಣಿ “ಇಂಡಿಯನ್ ಬೈಸನ್” ದು ಎಂದು ಹೇಳಿ ಅದರ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತಿದ್ದ, ಹಾಗೆಯೇ ಅದು ನಾಚಿಕೆ ಸ್ವಭಾವದ ಪ್ರಾಣಿ ನಮ್ಮನ್ನು ಕಂಡರೆ ಓಡಿಹೋಗುತ್ತದೆ ಆದರೆ ಅಪಾಯ ಕಂಡುಬಂದರೆ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದ. ಹಾಗೆಯೇ ಎದುರು ಬೆಟ್ಟದ ಕಡೆಗೆ ಬೆಟ್ಟುಮಾಡಿ ತೋರಿಸಿ ಸೂಕ್ಷ್ಮವಾಗಿ ಗಮನಿಸಲು ಹೇಳಿದಾಗ ನಾನು ಮತ್ತು ನನ್ನ ಗೆಳೆಯ […]Read More
ಪಶ್ಚಿಮ ಘಟ್ಟದಲ್ಲೊಂದು ಇಣುಕು – 4 ನಾವು ಭಗವತಿ ಪ್ರಕೃತಿ ಶಿಬಿರದಿಂದ ಹೊರಟು ಕುರಿಂಜಾಲು ಬೆಟ್ಟದ ಕಡೆಗೆ ಚಾರಣ ಹೊರಟಿದ್ದೆವಷ್ಟೇ…ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ನಮ್ಮ ಗೈಡ್ ರಂಜಿತ್ ಒಂದು ಪ್ರಾಣಿಯ ಮಲ ತೋರಿಸಿ ಕೆಲವು ನಿಮಿಷಗಳ ಹಿಂದಷ್ಟೇ ಈ ಪ್ರಾಣಿ ಬಂದು ಹೋಗಿದೆ ಎಂದ. ನನ್ನ ಕುತೂಹಲ ಹೆಚ್ಚಾಗಿ ಅದರ ವಿವರ ಕೇಳಿದಾಗ ಅವನು ಹೇಳಿದ್ದು ಕಾಡುನಾಯಿ ಬಗ್ಗೆ..Wild dog ಎಂದು ಕರೆಯಲಾಗುವ ಇದು ಸಂಘಜೀವಿ. ಸೀಳುನಾಯಿ ಕೆನ್ನಾಯಿ ಎಂದೂ ಕರೆಯುತ್ತಾರೆ. ಕೃಪಾಕರ-ಸೇನಾನಿ ಅವರ The pack […]Read More