ಕೂಸು ತಿನ್ನಲು ತಂದ ರೊಟ್ಟಿ ಕಾಗೆಯ ಪಾಲುಕಾಸಿಟ್ಟ ಹಾಲನ್ನು ಬೆಕ್ಕು ಕುಡಿದಿತ್ತು,ಲೇಸಾಯ್ತು ಆ ವಸ್ತು ನಿನ್ನದಲ್ಲವು ತಿಳಿಯೊಬೇಸರವು ಅದಕೇಕೆ- || ಪ್ರತ್ಯಗಾತ್ಮ || ಕಳೆ ಕಿತ್ತು ಹೊಲದ ಬೆಳೆ ಕಾಪಿಡುವ ರೈತನೋಲ್ಇಳೆಯ ಪಾಲಿಪ ರಾಜನಿರಬೇಕು ಜಗದಿ,ಕೊಲೆ ಸುಲಿಗೆ ಕಳ್ಳತನ ಮಾಳ್ಪವರ ಶಿಕ್ಷಿಸುತಸಲಹಿ ಕಾಪಿಡಬೇಕು- || ಪ್ರತ್ಯಗಾತ್ಮ || ಗುಡಿಸಿ ಸಾರಿಸಿ ಮತ್ತೆ ರಂಗವಲ್ಲಿಯನಿಟ್ಟುಸಡಗರದಿ ಬಾಗಿಲಿಗೆ ಕುಂಕುಮವನಿಟ್ಟುಮಡಿಯುಟ್ಟು ಶ್ರೀಮಾತೆ ತುಳಸಿ ಪೂಜೆಯ ಗೈವಮಡದಿಯೇ ಸದ್ಗೃಹಿಣಿ- || ಪ್ರತ್ಯಗಾತ್ಮ || ಇಂದೇನೊ ಮುಂದೇನೊ ಕಾಂಬರಾರಿಹರಿಲ್ಲಿ ?ಬಂದುದನು ಸಂತಸದಿ ಉಣ್ಣುತಿರಬೇಕು,ಮಂದಹಾಸವ ಬೀರಿ […]
ಪರಿತಪಿಸುವರು ಕೆಲರು ಹಲ್ಲು ಮಸೆವರು ಕೆಲರುಪರಿಪರಿಯುಪಾಯಗಳ ಚಿಂತಿಪರು ಕೆಲರುಸೆರೆಯವಧಿ ಮುಗಿದಂದು ಸೇಡು ತೀರಿಸಿಕೊಳುವಸೆರೆಯಾಳುಗಳು ಎನಿತೊ! || ಪ್ರತ್ಯಗಾತ್ಮ || ಉಂಡುಂಡು ತೇಗಿದರೆ ದಿಂಡುರುಳಿ ಮಲಗಿದರೆಉಂಡಾಡಿಯಂತಿರಲು ಬಂದ ಫಲವೇನು?ಭಂಡತನದಿಂ ಬಾಳ ನೂಕಿದರೆ ಬಂತೇನು?ದಂಡಿಸೆಲೊ ಕಾಯವನು- || ಪ್ರತ್ಯಗಾತ್ಮ || ಸಂಜೆ ಮುಂಜಾನೆಯೊಳು ನಿದ್ರಿಸುವ ಮನೆಗಳಲಿಗಂಜಿಗುಂ ಗತಿಯಿಲ್ಲದಾಗುವುದು ಸಹಜ,ಕಂಜದಳ ನೇತ್ರೆಯಾ ಲಕುಮಿ ನೆಲೆಸಳು ಅಲ್ಲಿಅಂಜಿ ಬಾಳಲೊ ನೀನು- || ಪ್ರತ್ಯಗಾತ್ಮ || ಅನ್ನದಗುಳಿನ ಮೇಲೆ ತಿನ್ನುವರ ಹೆಸರಿಹುದುಭಿನ್ನ ಭಾವನೆ ಬಿಟ್ಟು ಬಂದವಗೆ ಉಣಿಸು,ನಿನ್ನ ಭಾಗದ ತಿನಿಸು ಬೇರೊಬ್ಬನುಣ್ಣುವುದುನಿನ್ನ ನೆನಪಿಗೆ ಬರದೆ?- […]Read More
ಕರುಣಾಳು ನೀನಾಗು ಪರಿವಾರದವರಲ್ಲಿಪರಿಹಾರ ಕಂಡು ಹಿಡಿ ತೊಡಕುಗಳು ಬರಲು,ಅರಿಯು ಎದುರಾಗಿರಲು ಕರವಾಳ ನೀನಾಗುಅರಿ ಭಯಂಕರನಾಗು- || ಪ್ರತ್ಯಗಾತ್ಮ || ಹೊಟ್ಟಿರದ ಬೀಜವನು ಬಿತ್ತಿದರೆ ಮೊಳೆಯುವುದೆ?ಹೊಟ್ಟು ನಿಃಸತ್ವವೆಂಬ ನುಡಿ ಸಲ್ಲ,ಸೃಷ್ಟಿಯೊಳಗಾವುದೂ ನಿಷ್ಪ್ರಯೋಜಕವಲ್ಲಹೊಟ್ಟು ರಕ್ಷಾ ಕವಚ- || ಪ್ರತ್ಯಗಾತ್ಮ || ಓದು ಬೇಕೇ ಬೇಕು ವಿಷಯ ಸಂಗ್ರಹಣಕ್ಕೆಓದು ಮುಗಿವುದು ಎಂದು? ಅದಕೆ ಕೊನೆಯುಂಟೆ?ಓದು, ಓದಿನ ಮೇಲೆ ಓದು, ಹೀಗಾಗಿರಲುಓದು ಬರಹಕೆ ಶತ್ರು- || ಪ್ರತ್ಯಗಾತ್ಮ || ಕತ್ತೆ ಎರಡರ ನಡುವೆ, ಹುತ್ತವೆರಡರ ನಡುವೆಮತ್ತೆ ಹೊಡೆದಾಡುವರ ನಡುವೆ ಹೋಗದಿರು,ಕತ್ತು ಬಗ್ಗಿಸಿಕೊಂಡು ಮುಂದೆ […]Read More
ಉದ್ಯೋಗಶೀಲನ ಪುರುಷಸಿಂಹನ ಬಳಿಗೆಆದ್ಯಾದಿ ಲಕ್ಷ್ಮೀಯರು ತಾವಾಗಿ ಬಹರು,ಸಾಧ್ಯವಾಗಿಸು ಸಿದ್ಧಿ ಪುರುಷ ಪ್ರಯತ್ನದಲಿಸದ್ಯಫಲವದರಿಂದೆ- || ಪ್ರತ್ಯಗಾತ್ಮ || ಭೂಪತಿ ಭಗೀರಥನು ಘೋರ ತಪವಾಚರಿಸಿಆ ಪಿತರ ಸದ್ಗತಿಗೆ ಗಂಗೆಯನು ತಂದ,ಪಾಪ ! ಪಿತೃಋಣ ನೀಗಿ ಲೋಕ ಹಿತವನು ಗೈದಭೂಪ ಪ್ರಜೆಗುಪಕಾರಿ! – || ಪ್ರತ್ಯಗಾತ್ಮ || ಅತ್ಯುಗ್ರ ಸಂಶಯವು ನಿನ್ನ ತಲೆ ಕೆಡಿಸಿರಲುಪ್ರತ್ಯುಪಾಯವ ಹುಡುಕು; ಒಡನೆ ದುಡುಕದಿರುಪ್ರತ್ಯಕ್ಷವಾದರೂ ನೆರೆ ವಿಚಾರಿಸಿದಾಗಸತ್ಯ ಸಾಕ್ಷಾತ್ಕಾರ- || ಪ್ರತ್ಯಗಾತ್ಮ || ರಮಣೀಯಕ ವಸ್ತು ಎಲ್ಲಿದ್ದರೇನಂತೆಭೂಮಿಯೊಳೊ ವ್ಯೋಮದೊಳೊ ಫಲ ಪುಷ್ಪದೊಳಗೊಭೂಮಾನುಭೂತಿಯಿಂ ಸೃಷ್ಠಿ ಸೊಬಗನು ಕಾಣುಸಾಮಾನ್ಯವೆನ್ನದಿರು- || […]Read More
ಅರಿಗಳನು ವೈರಿಯೆಂದೆಂದಿಗೂ ಜರೆಯದಿರುಗುರುವಾಗಬಹುದವರೆ ನಿನ್ನ ಏಳಿಗೆಗೆಗುರು ವಸಿಷ್ಠರ ಎದುರು ಬ್ರಹ್ಮರ್ಷಿಯಾದನಲ !ಅರಸು ವಿಶ್ವಾಮಿತ್ರ- || ಪ್ರತ್ಯಗಾತ್ಮ || ಛಲವ ಬಲ್ವಿಡಿವಿಡಿದ ಕೌರವಗೆ ಕೇಡಾಯ್ತು,ಛಲವನುದಾತ್ತೀಕರಿಸಿ ಕುಶಿಕ ಋಷಿಯಾದ,ಛಲವಿರಲಿ ಹಠವಿರಲಿ ಅದನುದಾತ್ತೀಕರಿಸುಗೆಲುವು ನಿನಗಾದೀತು- || ಪ್ರತ್ಯಗಾತ್ಮ || ತಪವಗೈದವರೆಲ್ಲ ಸತ್ಪುರುಷರೇನಲ್ಲತಪಗೈದು ವರ ಪಡೆದ ದುರ್ಜನರೆ ಹೆಚ್ಚುಜಪತಪಾದಿಗಳೆಲ್ಲ ಸ್ವಾರ್ಥ ಸಾಧನೆಗಲ್ಲ.ಉಪಕೃತಿಗೆ ಮೀಸಲಿಡು- || ಪ್ರತ್ಯಗಾತ್ಮ || ಹರನ-ಬ್ರಹ್ಮನ ಕುರಿತು ಘೋರ ತಪವಾಚರಿಸಿಪರಪೀಡನೆಗೆ ವರವ ಪಡೆದ ರಾವಣನುಹರಸಾಹಸವ ಮಾಡಿ ಮಣ್ಣು ಮುಕ್ಕಿದ ಕಡೆಗೆಪರಕಿಲ್ಲ ಇಹಕಿಲ್ಲ- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ […]Read More
ಚಿಟಿಕೆ ಹೊಡೆವಷ್ಟರಲಿ ಹೇಳಿ ಮುಗಿಸುವ ಕವನಪಠಿಸಿದರೆ ಸಾಕೊಮ್ಮೆ ನೆನಪಿಗೂ ಸುಲಭ.ಜಟಿಲತೆಯ ತೊಡಕಿಲ್ಲ; ಸುಲಿದ ಬಾಳೆಯ ಹಣ್ಣುಚುಟುಕ ಹೃದಯಂಗಮವು- || ಪ್ರತ್ಯಗಾತ್ಮ || ಹೂವಿಂದ ಹೂವಿಂಗೆ ಹಾರುತ್ತ ತಂದಿರುವೆಹೂವೊಡಲೊಳಿದ್ದಂಥ ಮಕರಂದವನ್ನುನೀವಿದನು ಸವಿನೋಡಿ ಮೆಚ್ಚಿದರೆ ಬಂಡುಣಿಗೆಆವುದಿದೆ ಬೇರೆ ಸುಖ?- || ಪ್ರತ್ಯಗಾತ್ಮ || ಈ ಜಗದಿ ದುಃಸಾಧ್ಯವೆಂಬುದಾವುದೂ ಇಲ್ಲಸಜ್ಜನ ಮಹಾಮಹಿಮ ಪುರುಷ ಸಿಂಹನಿಗೆ,ಆಂಜನೇಯನು ತಾನು ಶರಧಿಯನೆ ದಾಟಿದನುಸೋಜಿಗವದೇನಲ್ಲ- || ಪ್ರತ್ಯಗಾತ್ಮ || ಯಾವುದೇ ವಿಷಯದಲಿ ಸಂಶಯವು ಮೂಡಿರಲುಯಾವ ವ್ಯಕ್ತಿಯ ಕಡೆಗೂ ಹೋಗದಿರು ಒಡನೆ,ಸಾವದಾನದಿ ಕುಳಿತು ಆತ್ಮಚಿಂತನೆ ಮಾಡುಕಾವುದೈ ನಿನ್ನರಿವು- || […]Read More
ದೈವದತ್ತವು ಪ್ರತಿಭೆ; ಪ್ರಕೃತಿ ಕೊಡುಗೆಯು ಭಾವ,ದೇವಿ ತಾಯಿಯ ಭಾಷೆ; ಲಿಪಿಯು ಗುರು ಕೊಡುಗೆ,ಪೂರ್ವಜರ ಛಂದಸ್ಸು ನನ್ನದೇನಿಹುದಿಲ್ಲಿ?ಕವಿಪಟ್ಟವೆನಗೇಕೆ?- || ಪ್ರತ್ಯಗಾತ್ಮ || ನಾನು ಪಂಡಿತನಲ್ಲ; ಪಾಂಡಿತ್ಯವೆನಗಿಲ್ಲ,ನಾನಂತು ಸುಜ್ಞಾನಿ ಅಲ್ಲವೇ ಅಲ್ಲನಾನೊಬ್ಬ ನಾಡಾಡಿ ನಾಡುನುಡಿಯಭಿಮಾನಿನಾನೊಬ್ಬ ಕನ್ನಡಿಗ- || ಪ್ರತ್ಯಗಾತ್ಮ || ಬಾಳಿನಲಿ ಕಂಡುಂಡ ಅನುಭವದ ಸಾರವನುನಾಳೆ ಬಹಳ ಮಕ್ಕಳಿಗೆ ನೆರವಾಗಲೆಂದುಹಾಳೆಯಲಿ ಬರೆದಿಹೆನು ಚುಟುಕರೂಪದಿ ಅದನೆಬೀಳುಗಳೆಯಲು ಬೇಡ- || ಪ್ರತ್ಯಗಾತ್ಮ || ಚುಟುಕವೆಂಬುದು ಒಂದು ಪದ್ಯ ಜಾತಿ ವಿಶೇಷಜಟಪಟನೆ ಹೊರಬರುವ ಕಿರು ಆಶು ಕವಿತೆ,ಘಟದೊಳಗೆ ಸಾಗರವ ತುಂಬಿಟ್ಟ ಪರಿಯಂತೆಚುಟುಕವನೆ ಕೋದಿಹೆನು- || […]Read More
ಭಾವದೇವಿಯು ತಾನೆ ಒಲಿದ ಪುಣ್ಯಾತ್ಮರಿಗೆಕಾವ್ಯರಚನೆಯು ಸಾಧ್ಯ; ಬಲ್ಲವನೆ ಬಲ್ಲ,ಭಾವದೇವಿಯ ಕರುಣೆ ಪ್ರಾಪ್ತವಾಗುವವರೆಗೆ ಸಾವರಿಸಬೇಕಯ್ಯ- || ಪ್ರತ್ಯಗಾತ್ಮ || ದಿನ-ವಾರ-ತಿಂಗಳುಗಳಲ್ಲ, ವರುಷಗಳುರುಳೆತಿಣುಕಿದರೂ ಪದವೊಂದ ಬರೆಯದಿರಬಹುದು.ದಿನವೊಂದರೊಳೆ ಲೆಕ್ಕವಿರದಷ್ಟು ಚರಣಗಳಕನಿಕರಿಸಬಹುದವಳು – || ಪ್ರತ್ಯಗಾತ್ಮ || ಅವಳ ಬಗೆಯೇ ಬೇರೆ; ರೀತಿ ನೀತಿಯೇ ಬೇರೆಅವಳಿಚ್ಛೆಯನ್ನರಿಯಲೆಮ್ಮಅಳವಲ್ಲ,ಅವಳು ಕೊಟ್ಟರೆ ಉಂಟು; ಕೊಡದಿರಲು ಬರಿಯ ಕೈ,ಕವಿ ಅವಳ ಕೈಗೊಂಬೆ- || ಪ್ರತ್ಯಗಾತ್ಮ || ನಾನು ನನ್ನದು ಎಂಬ ಅಹಮಿಕೆಯು ನನಗಿಲ್ಲನಾನು ಬರೆದಿಹ ಕವಿತೆ ಎಂಬುದೂ ಇಲ್ಲನಾನೊಬ್ಬ ಲಿಪಿಕಾರ; ಒಳಗೆ ಕಬ್ಬಿಗನಿಹನುನಾನು ಪರತಂತ್ರದವ- || ಪ್ರತ್ಯಗಾತ್ಮ || […]Read More
ಮೂಡಿ ಬಹ ದಿನಮಣಿಯ ಬ್ರಹ್ಮ ರೂಪನು ಕಾಣನಡುನೆತ್ತಿ ಮೇಲಿರುವ ಸೂರ್ಯ ಶಿವ ತಾನು,ಪಡುವಣದ ಕಡೆಗಿಳಿವ ಸೂರ್ಯ ಸಾಕ್ಷಾತ್ ವಿಷ್ಣುನೋಡಿವನೆ ತ್ರೈಮೂರ್ತಿ- || ಪ್ರತ್ಯಗಾತ್ಮ || ವಿಶ್ವದೇವನ ವರ್ಣಮಾಲೆಯನು ಕಂಡಾಗಹ್ರಸ್ವನಾನಾಗುವೆನು ದೀರ್ಘ ಚಿಂತನದೆ|ವಿಶ್ವ ಪ್ರಕೃತಿಯ ಭಾವ ಎಂದೆಂದು ಅವ್ಯಯವುವಿಶ್ವಾತ್ಮನಿಗೆ ಶರಣು – || ಪ್ರತ್ಯಗಾತ್ಮ || ಋಷಿಯಲ್ಲದವರಾರೂ ಕವಿಯಾಗಲಾರರೈಋಷಿಯ ಅಂಶವು ಬೇಕು ಕಾವ್ಯಕರ್ಮಕ್ಕೆಋಷಿಯ ತಪಸ್ ಸಾಧನೆಯು, ಸಿದ್ಧಿ ಮೇಣ್ ದರ್ಶನವುರಸಋಷಿಗಿದತಿಮುಖ್ಯ- || ಪ್ರತ್ಯಗಾತ್ಮ || ಯಾವಾಗ ಬರುವಳೋ ಯಾವಾಗ ಹೋಗುವಳೋಭಾವದೇವಿಯು ತಾನು ನಾ ಹೇಳಲಾರೆ,ಆವ ಸಮಯದಿ ಎನ್ನ ಕೈಯಿಂದ […]Read More
ಸೂರ್ಯದೇವನಿಗಿಂತ ಇನ್ನು ದೇವರು ಇಲ್ಲಸೂರ್ಯನೇ ಈ ಜಗದ ಆಧಾರ ಭೂತ |ಸೂರ್ಯನಿಂದಲೆ ಸಕಲ ಜೀವಿಗಳ ಉತ್ಪತ್ತಿಸೂರ್ಯನಿಗೆ ಶರಣೆನ್ನು – || ಪ್ರತ್ಯಗಾತ್ಮ || ಸೃಷ್ಟಿ ಮೇಣ್ ಸ್ಥಿತಿ, ಲಯಕೆ ಸೂರ್ಯ ಕಾರಣಸೃಷ್ಟಿಕರ್ತನು ಇವನೆ; ಸಸ್ಯಗಳ ಪ್ರಾಣ |ದೃಷ್ಟಿಗೋಚರವಪ್ಪ ಭಗವಂತನಿವನೆ ದಿಟಇಷ್ಟಾರ್ಥದಾಯಕನು- || ಪ್ರತ್ಯಗಾತ್ಮ || ನವಗ್ರಹಗಳೆಲ್ಲವು ಇನವ ಅಂಕೆಗೊಳಪಟ್ಟಿಹವುಮಹನೀಯನಿವನೊಬ್ಬ ವಿಶ್ವಕ್ಕೆ ಒಡೆಯ |ಇಹಪರದ ಸೌಖ್ಯಕ್ಕೆ ಇವನ ಬಿಟ್ಟರೆ ಇಲ್ಲವಿಹಿತದಲಿ ಶರಣಾಗು- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ವಾಚನ – ಗೌರಿ ದತ್ತ ಏನ್ ಜಿRead More