ಶ್ರೀವಾಣಿ ಕಲ್ಯಾಣಿ ಅಜನ ಪಟ್ಟದ ರಾಣಿಭಾವನಾ ಪ್ರಕಟಣೆಗೆ ಚೋದಿಸೈ ಮನವ |ಆವ ವಾಙ್ಮಂತ್ರದಿಂ ರಸಋಷಿಗಳಾದರೋಆವಾಹಿಸುವೆನದನೆ- || ಪ್ರತ್ಯಗಾತ್ಮ || ಸರ್ವಭಾಷಾಮಯೀ ವಿಶ್ವಭಾರತಿ ತಾನುಗೀರ್ವಾಣಿ ಕಲ್ಯಾಣಿ ಅಮೃತ ರೂಪಿಣಿಯು |ಸರ್ವಮಂಗಳೆ ವರದೆ ವಾಕ್ ಶುದ್ಧಿ ವಾಕ್ ಸಿದ್ಧಿಸರ್ವದಾ ದಯೆಗೆಯ್ಗೆ- ಪ್ರತ್ಯಗಾತ್ಮ || ಪೂರ್ಣವನು ಪೂರ್ಣದಿಂ ಕೂಡಿ ಕಳೆದರೂ ಕೂಡಪೂರ್ಣವೇ ಉಳಿಯುವುದು ಕಡೆಗೆ ಎಂದೆಂದೂ |ಪೂರ್ಣವಿದು ಪೂರ್ಣವದು ಪೂರ್ಣದಿಂದಲೆ ಎಲ್ಲಪೂರ್ಣತೆಗೆ ಶರಣೆನ್ನು- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ ವಾಚನ – ಗೌರಿ ದತ್ತ ಏನ್ ಜಿ
admin_sahithi
July 24, 2021
ಶ್ರೀ ಗೌರಿ -ಮುಖಕಮಲ-ದಿನಕರನೆ ಗಣಪತಿಯೆಶ್ರೀ ಗಜಾನನ ಆಖು ವಾಹನನೆ ಶರಣು|ಶ್ರೀ ಗುರುಕೃಪಾದೃಷ್ಟಿ ಎನ್ನ ಮೇಲಿರುವಂತೆ |ಆಗುಮಾಡಿಸೊ ಬೆನಕ ಶರಣು ಶರಣು- || ಪ್ರತ್ಯಗಾತ್ಮ || ಅಮ್ಮ ಶಾರದೆ ವರದೆ ಶೃಂಗಗಿರಿ ಪುರವಾಸಿಬೊಮ್ಮನರಸಿಯೆ ಸಕಲ ವಿಬುಧ-ಜನ-ವಂದ್ಯೆನಮ್ಮ ಗುರುಕಾರ್ಯಕ್ಕೆ ಅಭಯ ಹಸ್ತವ ನೀಡುದಮ್ಮಯ್ಯ ಶರಣೆಂದೆ ಶ್ರೀ ಪಾದಕೆ- || ಪ್ರತ್ಯಗಾತ್ಮ|| ಪೊಡವಿಯೊಳಗಾವುದಿದೆ ನಿನಗಸಾಧ್ಯವು ಹನುಮಹಿಡಿದ ಕೆಲಸವ ಬಿಡದೆ ಸಾಧಿಸುವೆ ನೀನುದೃಢ ಭಕ್ತ ಶ್ರೀರಾಮದೂತ ಕರುಣಾಸಿಂಧುಬಿಡದೆನ್ನ ಕಾರ್ಯವನು ಪೂರ್ಣಗೊಳಿಸು- || ಪ್ರತ್ಯಗಾತ್ಮ|| ಅಂಜನಾ ಗರ್ಭದಲಿ ಜನಿಸಿದ ಮಹಾಮಹಿಮಸುಗ್ರೀವ ಸಚಿವರಲಿ ಉತ್ತಮೋತ್ತಮನೆರಾಮಪ್ರಿಯ ನಿನಗಿದೊ […]Read More