ಸಂಕ್ರಾಂತಿಯ ಸಡಗರ ಮಕರ ಸಂಕ್ರಾಂತಿಯ ಸಡಗರ ಸಂಭ್ರಮವುಓಂಕಾರವಾಯಿತು ವರ್ಷದ ಮೊದಲ ಹಬ್ಬವುಮರೆತು ಹೋಗಲಿ ನೋವು ದುಃಖವುಸೂರ್ಯನ ಕಿರಣಗಳಂತೆ ನಿತ್ಯ ಬರಲಿ ಸಂತಸವು ಹರ್ಷವ ಹೊತ್ತು ಸಂಕ್ರಾಂತಿಯು ಬಂದಿತುಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಿತುರೈತರ ಮೊಗದಲಿ ನಗುವಿನ ಗೆರೆ ಮೂಡಿತುಪುಣ್ಯ ನದಿಯ ಸ್ನಾನ ಬದುಕು ಪಾವನಗೊಳಿಸಿತು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನಸೂರ್ಯನ ಉತ್ತರ ದಿಕ್ಕಿನ ಪಯಣದ ಆರಂಭದ ದಿನಎಳ್ಳು ಬೆಲ್ಲವನ್ನು ಹಂಚುವ ಖುಷಿಯ ದಿನಹಣ್ಣು, ಸಕ್ಕರೆ, ಕಬ್ಬಿನ ರಸವ ಸವಿಯುವ ದಿನ ಸುಗ್ಗಿಯ ಹಬ್ಬ ಕರುನಾಡ ರೈತರಿಗೆ ಗಾಳಿಪಟವ […]
ದೀಪಾವಳಿ – ಕತ್ತಲಿನಿಂದ ಬೆಳಕಿನೆಡೆಗೆ… ದೀಪಾವಳಿ ಪ್ರಮುಖ ಹಬ್ಬಗಳಲ್ಲಿ ಒಂದು. ಹಿಂದೂ, ಸಿಖ್, ಜೈನ, ಬೌದ್ಧ ಧರ್ಮದವರೂ ಮತಭೇದವಿಲ್ಲದೆ ಆಚರಿಸುವ ದೊಡ್ಡ ಹಬ್ಬ. ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಎಂದರೆ, ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದು ಎಂದರ್ಥ. ದೀಪ ಎಂದರೆ ಸೊಡರು. ಆವಳಿ ಎಂದರೆ ಸಮೂಹ. ದೀಪಾವಳಿ ಎಂದರೆ ದೀಪಗಳ ಸಮೂಹ ಅಂದರೆ ಬೆಳಕಿನ ಪ್ರತೀಕ. ಅಜ್ಞಾನದ ತಮಸ್ಸನ್ನು ಕಳೆದುಕೊಂಡು ಜ್ಞಾನದ ಜ್ಯೋತಿಯೆಡೆಗೆ ನಡೆಯುತ್ತಾ ಅರ್ಥಪೂರ್ಣ ಬದುಕನ್ನು ಕಂಡುಕೊಳ್ಳುವುದು. ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ […]Read More
ಶಮೀ ಶಮಯತೆ ಪಾಪಂ… ಬ್ರಹ್ಮಾಂಡದ ಪ್ರತೀ ಅಣುವಿನಲ್ಲೂ ದೈವತ್ವ ಕಾಣುವ, ಬ್ರಹ್ಮಾಂಡದಲ್ಲಿರುವ ಪ್ರತೀ ಪದಾರ್ಥದಲ್ಲೂ ಇರುವುದು ಒಂದೇ ಶಕ್ತಿ ಎಂದು ನಂಬುವ ಧರ್ಮ ಹಿಂದೂ ಧರ್ಮ. ಆ ಶಕ್ತಿಯನ್ನು ಕಂಡುಕೊಳ್ಳಲು ಮತ್ತು ಆರಾಧಿಸಲು ವಿವಿಧ ಮಾರ್ಗಗಳು ಇಲ್ಲಿವೆ. ಅವುಗಳಲ್ಲಿ ಅನೇಕ ರೀತಿಯ ಹಬ್ಬಗಳ ಮೂಲಕ ದೈವಾಚರಣೆ ಮತ್ತು ಆರಾಧನೆ ಪ್ರಮುಖ. ಧಾರ್ಮಿಕ ಆಚರಣೆ ಮತ್ತು ಶ್ರೇಷ್ಠ ಸುಂದರ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬವು ವಿಶಿಷ್ಟ. ಇದು ಕರ್ನಾಟಕದ ನಾಡ ಹಬ್ಬ. ಭಾರತ ದೇಶದ ವಿವಿಧೆಡೆ ಈ ಹಬ್ಬವನ್ನು […]Read More
ಪಿತೃಪಕ್ಷ ಎಂಬ ಕೃತಜ್ಞತಾ ವಿಧಿ…. ನಮ್ಮ ದೇಶದ ಸನಾತನ ಸಂಸ್ಕೃತಿಯಲ್ಲಿ ಸಾಕಷ್ಟು ವಿಧಗಳು ಮತ್ತು ವೈವಿಧ್ಯತೆಗಳು ಇವೆ. ಪ್ರತಿಯೊಂದು ಆಚರಣೆಗಳೂ ಕೂಡ ಅರ್ಥಪೂರ್ಣ ಕಾರಣಗಳು ಮತ್ತು ವಿಭಿನ್ನತೆಯನ್ನು ಒಳಗೊಂಡಿವೆ. ಅಂತಹ ಆಚರಣೆಗಳಲ್ಲಿ ಒಂದಾದ ಶ್ರಾದ್ಧ ಅಥವಾ ಪಿತೃಪಕ್ಷ ಪೂಜೆಯು ತನ್ನದೇ ಆದ ಮಹತ್ವ ಹೊಂದಿದೆ. ಪಿತೃಗಳು ಎಂದರೆ ನಮ್ಮ ಪೂರ್ವಜರು. ನಮ್ಮ ಜನ್ಮಕ್ಕೆ ಕಾರಣಕರ್ತರಾದ ಅಥವಾ ಈ ಭೂಮಿಯಲ್ಲಿ ನಮ್ಮ ಹುಟ್ಟಿಗೆ ಆಸರೆಯಾದ ಕುಟುಂಬದವರು, ತಂದೆ ತಾಯಿಗಳು ಮತ್ತು ಅವರ ಹಿಂದಿನ ತಲೆಮಾರು. ಹುಟ್ಟಿದ ಪ್ರತಿಯೊಂದು ಜೀವಿಗೂ […]Read More
ನಾಗಾರಾಧನೆಯ ನಾಗರ ಪಂಚಮಿ ನಾಗರ ಪಂಚಮಿ ಹಬ್ಬವನ್ನು ಕರ್ನಾಟಕ ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನವನ್ನು (ಪಂಚಮಿ) ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ. ಈ ದಿನ ನಾಗನಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿ ಆಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ (ಆದಿಶೇಷ) ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸೆಂದು […]Read More
ನವ ಯುಗದ ಆದಿ ಈ ಯುಗಾದಿ..! ಯುಗಾದಿ ಎಂದರೆ ಮೊದಲು ನೆನಪಾಗುವುದು ಬೇವುಬೆಲ್ಲದ ಮಿಶ್ರಣ, ಜೊತೆಗೆ ವಸಂತಮಾಸದ ಚಿಗುರು. ಯುಗಾದಿ ಹಲವು ಆರಂಭಗಳಿಗೆ ಮುನ್ನುಡಿ. ಚೈತ್ರ ಶುದ್ಧ ಪಾಡ್ಯಮಿಯ ದಿನವೆ ಯುಗಾದಿ. ಋತುಗಳ ರಾಜ ವಸಂತಕಾಲ ಆರಂಭವಾಗುವ ಈ ದಿನದಿಂದ ಸೂರ್ಯ ಕೊಂಚ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಕಾಲ. ಅಧಿಕೃತವಾಗಿ ಬೇಸಿಗೆಕಾಲ ಆರಂಭವಾಗುವ ದಿನ. ಹಿಂದೂ ಪಂಚಾಂಗದ ಪ್ರಕಾರ 60 ಸಂವತ್ಸರಗಳಿವೆ. ಪ್ರತೀವರ್ಷದ ಯುಗಾದಿಗೂ ಹಳತರ ಅಂತ್ಯ ಮತ್ತು ಹೊಸ ಸಂವತ್ಸರದ ಆರಂಭವಾಗುತ್ತದೆ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ […]Read More
ತಿ. ನರಸೀಪುರದ ಕುಂಭಮೇಳ – 2025 ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿ ಪುಣ್ಯ ಸ್ನಾನ ಮಾಡುವ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ. ಇದೊಂದು ಸನಾತನ ಧರ್ಮದ ಅತಿ ದೊಡ್ಡ ಸಾಮೂಹಿಕ ತೀರ್ಥಯಾತ್ರೆ ಎಂದರೆ ತಪ್ಪಾಗಲಾರದು. ಇಲ್ಲಿನ ಪುಣ್ಯ ಸ್ನಾನದಿಂದ ಜೀವನದ ಪಾಪ ಕಳೆದು, ಮುಕ್ತಿ ಸಿಗುವುದೆಂದು ಭಕ್ತರ ನಂಬಿಕೆ. ಅದಕ್ಕೆಂದೇ ವಿಶ್ವದಲ್ಲಿನ ಎಲ್ಲಾ ಭಕ್ತರು ಒಂದೆಡೆ ಸೇರುವುದು. ಆದರೆ ಅಲ್ಲಿಗೆ ಹೋಗಲಾರದೇ ನಿರಾಸೆಗೊಂಡಿದ್ದರೆ ನಮ್ಮ ಮೈಸೂರು ಜಿಲ್ಲೆಯ ತಿ. ನರಸೀಪುರ ದಲ್ಲಿ ಫೆಬ್ರುವರಿ 10 ರಿಂದ […]Read More
ಸಂಕ್ರಮಣ ಕಾಲ… ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಹಬ್ಬ. ರೈತರ ಪಾಲಿಗೆ ಈ ಹಬ್ಬ ವಿಶೇಷ. ಬೆಳಿದಿರುವ ಬೆಳೆ ಕೊಯ್ಲಿಗೆ ಬಂದು, ಸುಗ್ಗಿ ಮಾಡುವ ಕಾಲ. ಬೆಳೆದ ಧಾನ್ಯ ರಾಶಿ ಹಾಕಿ, ಪೂಜೆ ಮಾಡಿ, ಭೂದೇವಿಗೆ ಕೃತಜ್ಞತೆ ಅರ್ಪಿಸುವ ಸಂಪ್ರದಾಯವು ಇದೆ. ಪೂಜೆಯ ಪ್ರಸದಾರ್ಥವಾಗಿ, ನೆನೆಸಿಟ್ಟ ಅಕ್ಕಿಗೆ, ಬೆಲ್ಲ ಮತ್ತು ಕಾಯಿತುರಿ ಸೇರಿಸಿ ನೈವೇದ್ಯ ಮಾಡಿ ತಿನ್ನಲು ಕೊಡುತ್ತಾರೆ. ಇದರ ಹಿಂದೆಯೂ ವೈಜ್ಞಾನಿಕ ಕಾರಣ ಇವೆ..! ನಮ್ಮ ದೇಶದ ಆಚಾರ, […]Read More
ಮನೆ ಮನಗಳ ಬೆಳಕು – ದೀಪಾವಳಿ ದೀಪಾವಳಿ ಎಂದರೆ ಮೊದಲು ನೆನಪಾಗುವುದೇ ಮನೆಯ ಮತ್ತು ಮನದ ಕತ್ತಲು ಓಡಿಸುವ ಬೆಳಕಿನ ಹಬ್ಬ. ಕರುಣಾಳು ಬಾ ಬೆಳಕೇಮುಸುಕಿದೀ ಮಬ್ಬಿನಲಿಕೈ ಹಿಡಿದು ನಡೆಸೆನ್ನನು ಬಿ. ಎಂ. ಶ್ರೀಕಂಠಯ್ಯ ಬಿ.ಎಮ್.ಶ್ರೀ ಅವರ ಮೇಲಿನ ಪ್ರಸಿದ್ಧ ಸಾಲುಗಳು ಇಲ್ಲಿ ನೆನಪಾಗುತ್ತದೆ. ಇದೊಂದು ಹಬ್ಬವಷ್ಟೇ ಅಲ್ಲದೆ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ಒಂದು ಧನಾತ್ಮಕತೆಯ ಭಾವ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಹಿನ್ನೆಲೆ ಇದೆ ಹಾಗೇ ಆಚರಿಸುವ ವಿಧಾನಗಳಿವೆ. ಆಚರಣೆಗಳು ಹೇಗೆ ಇದ್ದರೂ ಉದ್ದೇಶಗಳು ಮಾತ್ರ ಒಂದೇ. […]Read More
ಪಿತೃಪಕ್ಷ – ಮಹಾಲಯ ಅಮಾವಾಸ್ಯೆ ಭಾದ್ರಪದ ಮಾಸದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ 15 ದಿನಗಳನ್ನು ಪಿತೃಪಕ್ಷ ಅಥವಾ ಪಕ್ಷಮಾಸವೆನ್ನುತ್ತಾರೆ. ಈ ಸಮಯದಲ್ಲಿ ಪಿತೃಗಳು ತಮ್ಮ ಮಕ್ಕಳಿಂದ ಪಿಂಡ, ತಿಲೋದಕಗಳನ್ನು ಎದುರು ನೋಡುತ್ತಿರುತ್ತಾರೆ. ಈ ಹದಿನೈದು ದಿನಗಳಲ್ಲಿ ಯಾರು ಶ್ರಾದ್ಧವನ್ನು ಮಾಡುತ್ತಾರೋ ಅವರನ್ನು ಸಂತೃಪ್ತರಾದ ಪಿತೃಗಳು ಉತ್ತರೋತ್ತರ ಅಭಿವೃದ್ದಿಯಾಗಲೆಂದು ಆಶೀರ್ವಾದ ಮಾಡುತ್ತಾರೆ. ಪಿತೃಗಳ ಆಶೀರ್ವಾದವಿದ್ದರೆ ಮಕ್ಕಳು ಮೊಮ್ಮಕ್ಕಳು ಆಯುರಾರೋಗ್ಯ ಆಯುಷ್ಯಗಳನ್ನು ಪಡೆದು ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ನಮಗೆ ಜನ್ಮನೀಡಿ ನಾವು ಈಗಿರುವ ಪರಿಸ್ಥಿತಿಗೆ ನಮ್ಮ ಪಿತೃಗಳ ಕೊಡುಗೆ ಬಹಳಷ್ಟಿರುತ್ತದೆ, […]Read More