ಪರಸ್ಪರ ರಕ್ಷಣೆಯ ರಕ್ಷಾ ಬಂಧನ ರಕ್ಷಾ ಬಂಧನವನ್ನು ಸಹೋದರ ಮತ್ತು ಸಹೋದರಿಯ ಬಾಂಧವ್ಯದ ಸಂಕೇತವಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಭ್ರಾತೃತ್ವದ ನಡುವಿನ ಪ್ರೀತಿಯ ಸಂಕೇತ ಮತ್ತು ಪರಸ್ಪರರನ್ನು ರಕ್ಷಣೆ ಮಾಡುವ ಮತ್ತು ಪರಸ್ಪರ ಮನಸ್ತಾಪವನ್ನು ಮರೆಯುವ ಸಂಕಲ್ಪವನ್ನು ಮಾಡುವ ಉದ್ದೇಶದಿಂದ ಆಚರಿಸಲಾಗುತ್ತದೆ. ಇದು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬವಾಗಿದ್ದು, ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಕ್ಷಾ ಬಂಧನವನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ […]