ಆಟಿಕೆಗಳು ಕೇವಲ ಆಟಿಕೆಗಳಲ್ಲ, ಅದರಿಂದ ಮಕ್ಕಳ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಬೆಳವಣಿಗೆಯಾಗುತ್ತದೆ. ಮತ್ತು ಇತರರ ಜತೆ ಬೆರೆಯುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. “ಆಟಿಕೆಗಳಿಂದ ಮನೋರಂಜನೆಯಷ್ಟೇ ಸಿಗುವುದಿಲ್ಲಆಟದ ಜೊತೆಗೆ ಪಠ್ಯ ಕಲಿಯುವುದು ನೂತನ ಶಿಕ್ಷಣ ನೀತಿಯ ಭಾಗವಾಗಲಿದೆ ಎಂದು ಎನ್ಇಪಿ ಹೇಳುತ್ತದೆ”. ಲಡಾಖ್ ಗಡಿ ತಂಟೆ ಬಳಿಕ ‘ಬಾಯ್ಕಾಟ್ ಚೀನಾ’ ಆಂದೋಲನ ತೀವ್ರಗೊಳಿಸಿದ ಕೇಂದ್ರ ಸರಕಾರ, ಚೀನಾ ಆಟಿಕೆಗಳ ಅಬ್ಬರಕ್ಕೆ ಕಡಿವಾಣ ಹಾಕಿ ಜಾಗತಿಕ ಆಟಿಕೆಗಳ ತಯಾರಿಕಾ ಕ್ಷೇತ್ರದಲ್ಲಿ ಚೀನಾ ಹೊಂದಿರುವ ಪ್ರಾಬಲ್ಯ ಹತ್ತಿಕ್ಕಲು ಆತ್ಮನಿರ್ಭರ ಅಭಿಯಾನ ಕೈಗೊಂಡಿದೆ. […]