ಒಂದೆ ತಳಿಗೆಯೊಳುಂಡು, ಒಂದೆ ಹಾಸಿನೊಳರಗಿಒಂದೆ ಮನೆಯಂಗಳದಲಿ ಆಡಿ ನಲಿದವರಬಂಧನವು ಕಡಿಯುವುದೆ ಬೇರೆ ಮನೆ ಹೆಣ್ಣೊಂದುಬಂದ ಕೂಡಲೆ ಹೇಳು- || ಪ್ರತ್ಯಗಾತ್ಮ || ತಾಯ್ ತಂದೆಗಳ ಕಂಡು ಮಗು ಅಮ್ಮ, ‘ಅಪ್ಪ’ ಎನೆಬಾಯ್ ತುಂಬ ಅಣ್ಣ ‘ಮೇಣ್ಅಕ್ಕ’ ಎಂದನೆಲುಬಾಯಿನುಡಿ ಅಲ್ಲ, ಅವು ಕನ್ನಡ ನುಡಿ ಹಿರಿಮೆತಾಯ್ ನುಡಿ ಅಕಾರದಿ- || ಪ್ರತ್ಯಗಾತ್ಮ || ನಿನ್ನ ಹೊಟ್ಟೆಯು ಮುಖವು ಬೆಂಕಿಗೆದುರಾಗಿರಲಿಬೆನ್ನು ತೋರಿಸಬೇಡ ಬೆಂಕಿಗೆಂದೆಂದೂನಿನ್ನ ಮುಖವನು ರವಿಯ ಬಿಸಿಲಿಗೊಡ್ಡಲು ಬೇಡಬೆನ್ನು ಕೊಡು ಸೂರ್ಯನಿಗೆ- || ಪ್ರತ್ಯಗಾತ್ಮ || ತರವೆ ಮಸಣದ ಬೆಂಕಿ […]
ಹಿರಿಯ ಆರಕ್ಷಕರು ಕೆಳಗಿನವರನು ಬಯ್ಯೆಕಿರಿಯ ಪೇದೆಯ ಬಯ್ಯೆ ಆ ಕೆಳಗಿನವರುಪಿರಿದು ಕೋಪದಿ ಪೇದೆ ಹಾದಿ ನಾಯಿಯ ಒದೆದಪರದೇಶಿಗೇ ಶಿಕ್ಷೆ- || ಪ್ರತ್ಯಗಾತ್ಮ || ಉಂಡು ತೆಪ್ಪಗೆ ಕುಳಿತ ಗಂಡನನು ರಂಜಿಸಲುಉಂಡ ಬಾಯಿಗೆ ಇನಿತು ಒಗ್ಗರಣೆ ಎಂದುಮಂಡಕ್ಕಿ ಪುರಿ ಕೊಡಲು ಮೊದಲು ಮುಕ್ಕಿಗೆ ಕಲ್ಲು!ಗಂಡ ಕೆಂಡವೆ ಆದ! – || ಪ್ರತ್ಯಗಾತ್ಮ || ಮಡದಿ ತಾನೊಲವಿನಲಿ ಎದೆಯ ನೋವಿನ ಪತಿಗೆಸಡಗರದಿ ಗಸಗಸೆಯ ಪಾಯಸವ ಕೊಡಲು,ಕುಡಿದು ನಾಲಗೆ ಸುಟ್ಟು `ಬಿಸಿ’ ಎಂದು ಬೊಬ್ಬೆ ಇಡೆಬಿಡದೆ ಹೆಚ್ಚಿತು ನೋವು- || ಪ್ರತ್ಯಗಾತ್ಮ […]Read More
ಇರುಳಿನಲಿ ಮೊಸರನ್ನ ಉಣ್ಣದಿರು ಎಂದೆಂದೂಇರುವ ಆಯುಃ ಕ್ಷೀಣ; ಆರೋಗ್ಯವಲ್ಲ.ಕ್ಷೀರಾನ್ನ ಭುಂಜಿಸಲು ದೀರ್ಘಾಯುವಾಗಿರುವೆಆರೋಗ್ಯಕಿದು ಪಥ್ಯ- || ಪ್ರತ್ಯಗಾತ್ಮ || ‘ನಶ್ಯವದು ವಶ್ಯಕರ’ ಎಂಬುದೆಲ್ಲಾ ಬೊಗಳೆನಶ್ಯ ತುಂಬಿದ ಮೂಗು ಕೊಳೆನೀರ ಜಿನಗುನಶ್ಯ ಒರೆಸಿದ ಬಟ್ಟೆ ಚಿಮಣಿ ಒರೆಸಿದ ಬಟ್ಟೆವಶ್ಯಕರವಿನ್ನಲ್ಲಿ ?- || ಪ್ರತ್ಯಗಾತ್ಮ || ಆಫೀಸಿನಿಂ ಬಂದ ಪತಿಯು ಪತ್ನಿಯ ಗದರೆಕೋಪದಿಂ ಹೆಂಡತಿಯು ಮಗುವ ಚಚ್ಚಿದಳುಪಾಪ ! ಮಗು ಬೊಂಬೆಯನು ಎತ್ತಿ ಕುಕ್ಕಿತು ನೋಡ !ಕೋಪವಲ್ಲಿಗೆ ಶಾಂತ- || ಪ್ರತ್ಯಗಾತ್ಮ || ಕ್ಷುಲ್ಲಕದ ಕಾರಣಕೆ ಕೆಂಡ ಕಾರಿದಳತ್ತೆಬಲ್ಲಿದಳೆ ಅತ್ತೆಯನು ದಂಡಿಸಲು […]Read More
ಹೊಟ್ಟಗಿಲ್ಲದವಂಗೆ ರೊಟ್ಟಿ ಸಿಕ್ಕರೆ ಸಾಕುಹೊಟ್ಟೆ ತುಂಬಿದವಂಗೆ ಬಾಯಿ ರುಚಿ ಬೇಕುಮೊಟ್ಟೆ ಮಾಂಸಾಹಾರ ಬೇಕು ಬೇರೊಬ್ಬನಿಗೆಎಷ್ಟೊಂದು ವೈಚಿತ್ರ್ಯ! – || ಪ್ರತ್ಯಗಾತ್ಮ || ಬಟ್ಟೆಯೇ ಇರದವಗೆ ಮಾನ ಮುಚ್ಚುವ ಆಸೆಬಟ್ಟೆ ಇದ್ದವಗಿನ್ನು ಎರಡು ಜೊತೆ ಆಸೆಪಟ್ಟೆ ಪೀತಾಂಬರವು ಮದುವೆ ಮನೆಗೆಂಬಾಸೆಇಷ್ಟಿದ್ದರಷ್ಟಾಸೆ- || ಪ್ರತ್ಯಗಾತ್ಮ || ಹಸಿದ ಹೊಟ್ಟೆಗೆ ಹಲಸು, ಉಂಡ ಬಾಯಿಗೆ ಮಾವು,ಹಸಿರು ದಾಕ್ಷಿಯು ಬಾಯಿ ಚಪ್ಪರಿಸಲಷ್ಟೆಹಸನಾದ ಮೋಸಂಬಿ – ಸೇಬು ಕಿತ್ತಲೆ ಹಣ್ಣುಹಸಿದ ರೋಗಿಗೆ ಉಣಿಸು- || ಪ್ರತ್ಯಗಾತ್ಮ || ಬಲಿಯಾಗದಿರು ನೀನು ಯಾವುದೇ ದುಶ್ಚಟಕೆಬಲೆ ಬೀಸಿ […]Read More
ನಾಯಿಯೊಂದಕೆ ದಿನವೂ ಅನ್ನ ಹಾಕುತಲಿದ್ದೆತಾಯಿ-ಮರಿ ಜೊತೆಯಾಗಿ ತಿನ್ನುತ್ತಲಿತ್ತುತಾಯಿ ತಿನ್ನದೆ ಕಡೆಗೆ ಮರಿಗಾಗಿ ಬಿಡುತಿತ್ತು,ನಾಯಿಯಾದರೂ ತಾಯಿ- || ಪ್ರತ್ಯಗಾತ್ಮ || ಗೊರಕೆ ಎಂಬುದು ಸುಖದ ನಿದ್ದೆ ಇರಬಹುದೇನೊ!ಗೊರಕೆ ಹೊಡೆಯುವರಿಂದ ಇತರರಿಗೆ ಕಷ್ಟಎರಡು ಸಲ ಎಬ್ಬಿಸುತ ಹೊರಳಿ ಮಲಗಲು ಹೇಳುಹರಿದೋಡುವುದು ಗೊರಕೆ- || ಪ್ರತ್ಯಗಾತ್ಮ || ಆಗಲೇ ಸುಲಿದಿರುವ ಅವರೆ ಕಾಳಿನ ಸೊಗಡುಮಗಮಗಿಪ ವಾಸನೆಯ ಸಪ್ಪೆಸರ ಸಾರುಆಗ ತೊಳಸಿದ ಬಿಸಿಯ ರಾಗಿಮುದ್ದೆಯದಿರಲುಆಗ ನೋಡದರ ರುಚಿ ! || ಪ್ರತ್ಯಗಾತ್ಮ || ಎಮ್ಮೆ ಮೊಸರಿನ ಜೊತೆಗೆ ಕೇಸಕ್ಕಿ ಅನ್ನವನುಘಮ್ಮೆನುವ ಹೇರಿಳೆಯ ಉಪ್ಪಿನಕಾಯಿಸುಮ್ಮಾನದಲಿ […]Read More
ಒಬ್ಬ ಹರೆಯದ ಹುಡುಗ ಹಾದಿ ಕಲ್ಲನು ಒದೆದುಉಬ್ಬಿ ಕುಣಿದಾಡಿದನು `ಕಲ್ಲೊಳಗೆ ರಕುತ !’ಅಬ್ಬೆ ಮನೆಯಲಿ ಕೇಳೆ ಆಗ ಗಾಯದ ಅರಿವು !ಅಬ್ಬ! ಪ್ರಾಯದ ಮದವೆ – || ಪ್ರತ್ಯಗಾತ್ಮ || ಮೀಸೆ ಮೊಲೆ ಬಂದವರು ದೇಶ ನೆಲ ಕಾಣರಲ !ಆಸೆ ಮಹಲಲಿ ವಾಸ; ಹಗಲಿನಲಿ ಕನಸು !ದೇಶವೆಲ್ಲವು ರಂಗುರಂಗಾಗಿ ಕಾಣುವುದುಲೇಸು ಬೆದೆಗಾಲವದು- || ಪ್ರತ್ಯಗಾತ್ಮ || ಜರೆಯುವರು ಗರ್ವದಲಿ ದೇವರನು ಕಲ್ಲೆಂದುಹಿರಿಯರನು ಮುದಿಗೊರಡು ಎಂದು ನೂಕುವರುಪರಿಪರಿಯ ಹಿತನುಡಿಗೆ ಎಳ್ಳಿನಿತು ಕಿವಿಗೊಡರುಹರೆಯದಲ್ಲದು ಸಹಜ_ || ಪ್ರತ್ಯಗಾತ್ಮ || ಸೋಲು […]Read More
ರಾಜ್ಯ ಶಾಸನ ಸಭೆಗೆ ಆಯ್ಕೆಯಾಗಿಹ ಜನರುವ್ಯಾಜ್ಯವಾಡಲು ತೋಳು ಮಡಿಸಿ ನಿಲ್ಲವರುವ್ಯಾಜ್ಯದಲಿ ದಿನವೆಲ್ಲ ಹಾಳು ಮಾಡುವರಯ್ಯರಾಜ್ಯ ಬೊಕ್ಕಸ ಖಾಲಿ- || ಪ್ರತ್ಯಗಾತ್ಮ || ಕಚ್ಚಾಟ ಕಿತ್ತಾಟ ನೂಕು ನುಗ್ಗಲಿನಾಟಹುಚ್ಚಾಟ ತಿಕ್ಕಾಟ ಗೋಳು ನರಳಾಟಪೆಚ್ಚಾದ ಜನ ಜಾತ್ರೆ ರಾಜಕೀಯದ ಆಟಕಿಚ್ಚಿಟ್ಟ ಮನೆಯಂತೆ- || ಪ್ರತ್ಯಗಾತ್ಮ || ಜೂಜಾಡಿ ಸಿರಿವಂತರಾದವರು ಇಹರೇನು?ಮೋಜಿನಲಿ ಜೂಜಾಡಿ ಸೋತವರೆ ಎಲ್ಲಜೂಜಾಟ ಒಂದು ಚಟ, ಅದು ಮತಿಯ ಕೆಡಿಸುವುದುಜೂಜಾಟ ಬಂಡಾಟ- || ಪ್ರತ್ಯಗಾತ್ಮ || ಜೂಜಿನಿಂದಲೆ ದ್ವೇಷ, ಜೂಜಿನಿಂದಲೆ ಕ್ರೋಧಜೂಜಿನಿಂದಲೆ ಕೊಲೆಯು, ವಂಚನೆಯು, ಮೋಸಜೂಜಿನಿಂದಲೆ ಸಕಲ ಸಂಸಾರಗಳ […]Read More
ಶಾಂತಿ ದೂತರ ತೆರದಿ ಶಾಂತಿ ಮಾತಾಡುವರುಮಂತಣದಿ ಹಠಮಾರಿತನವ ತೋರುವರುಎಂತಾದರೂ ಇವರ ಹಠವೆ ವಿಶ್ವಕೆ ಕುತ್ತುಎಂತಪ್ಪುದೈ ಶಾಂತಿ_ || ಪ್ರತ್ಯಗಾತ್ಮ || ಗೆದ್ದ ಎತ್ತಿನ ಬಾಲ ಹಿಡಿದ ಜನರೇ ಹೆಚ್ಚುಗೆದ್ದ ಮಂದಿಗೆ ಹಾರ; ಸೋತವಗೆ ಕಲ್ಲುಬಿದ್ದವನೆ ಮತ್ತೊಮ್ಮೆ ಗೆದ್ದು ಬರಬಹುದೇನೊ !ಗುದ್ದಾಟವೇಕಯ್ಯ? – || ಪ್ರತ್ಯಗಾತ್ಮ || ಸದ್ದುಗದ್ದಲ ಮಾಡಿ ಗುದ್ದಾಡಿ ಬಡಿದಾಡಿಉದ್ದನೆಯ ಜುಬ್ಬಗಳ ಹರಿದು ಹಾಕಿದರೆಉದ್ದುದ್ದ ಭಾಷಣವ ಮಾಡಿದರೆ ಈ ದೇಶಉದ್ಧಾರವಾಗುವುದೇ ?- || ಪ್ರತ್ಯಗಾತ್ಮ || ಧ್ವನಿವರ್ಧಕವ ಕಿತ್ತು ಬೀಸಿ ಹೊಡೆವವನೊಬ್ಬಮುನಿದು ಕುರ್ಚಿಯ ಮುರಿದು ಬಡಿವನಿನ್ನೊಬ್ಬಕನಿಕರವ […]Read More
ಇನ್ನಾವ ಗ್ರಹದೊಳಗೆ ಜೀವರಾಶಿಗಳಿವೆಯೊಇನ್ನವರ ಮೆಮಗಂತು ತಿಳಿದು ಬಂದಿಲ್ಲಔನ್ನತ್ಯಕೇರಿರುವ ನಾಗರಿಕ ಭೂಮಿಯಿದುಸೊನ್ನೆಯಾಗುವುದೇನೊ !- || ಪ್ರತ್ಯಗಾತ್ಮ || ಉರಿವ ಹಣತೆಯ ದೀಪವನು ಗಾಳಿ ನಂದಿಪುದುಉರಿಯುತಿರೆ ಹುಲು ಬಣವೆ ಬೆನ್ನು ತಟ್ಟುವುದುಪಿರಿದು ಬಲಶಾಲಿಗಳ ಎಲ್ಲ ಬೆಂಬಲಿಸುವರುದುರುಬಲತೆಯೇ ಶಾಪ- || ಪ್ರತ್ಯಗಾತ್ಮ || ನೀತಿವಂತನ ಕಂಡು ಭ್ರಷ್ಟ ಕಿಡಿ ಕಾರುವನುಮಾತಿನಲಗಲಿ ಚುಚ್ಚಿ ಮನವ ನೋಯಿಪನುಧೂರ್ತ ಕಾಗೆಯು ಪುಟ್ಟ ಕೋಗಿಲೆಯ ಮರಿಯನ್ನುಘಾತಿಸುತ್ತಿದೆ ನೋಡು- || ಪ್ರತ್ಯಗಾತ್ಮ || ಕಟ್ಟುಕಟ್ಟಳೆ ಎಂಬುದುಂಟೇನು ನಾಡಿನಲಿ?ಪುಟ್ಟ ಮಕ್ಕಳ ಶಾಲೆ ಕುಸಿದು ಬೀಳುತಿದೆಗಟ್ಟಿ ಸೇತುವೆ ಇಲ್ಲ; ಗಟ್ಟಿ ಅಣೆಕಟ್ಟಿಲ್ಲಭ್ರಷ್ಟತೆಯೆ […]Read More
ಪ್ರತಿಭೆಯುಳ್ಳೊಡೆ ಕೆಲವು ಉದ್ಗ್ರಂಥಗಳ ರಚಿಸುಜತನದಿ ನಿರಕ್ಷರಿಗೆ ಅಕ್ಷರವ ಕಲಿಸುಶತ ಸಂಖ್ಯೆಯಲಿ ಅರ್ಧವಾದರೂ ಮರ ಬೆಳೆಸುಕೃತ ಕೃತ್ಯನೀನಪ್ಪೆ- || ಪ್ರತ್ಯಗಾತ್ಮ || ದೀಪವಿಡಿದಿರುಳಿನಲಿ ನಡೆವ ಕುರುಡನ ಕಂಡು‘ದೀಪವೇತಕೊ ಕುರುಡ?’ ಎನಲೊಬ್ಬ ಕುಹಕಿ,‘ಅಪ್ಪ! ಇದು ಕಣ್ಣುಳ್ಳ ಕುರುಡರಿಗೆ’ ಎಂದೆನಲುತೆಪ್ಪಗಾದನು ಕುಹಕಿ- || ಪ್ರತ್ಯಗಾತ್ಮ || ಮಾರಕಾಸ್ತ್ರಗಳೆಲ್ಲ ಮಾರಿಗೌತಣವಲ್ತೆ ?ಯಾರ ಸಂತೋಷಕ್ಕೆ ಇನಿತು ಕಗ್ಗೊಲೆಯು ?ಮಾರುವೋಗಿಹರೇಕೆ ತರವಲ್ಲದೀ ಚಟಕೆಮಾರಾರಿಯೇ ಬಲ್ಲ- || ಪ್ರತ್ಯಗಾತ್ಮ || ವಿಜ್ಞಾನಿ ಎಂಬುವನು ಮನುಜ ಕುಲಕುಪಕಾರಿಅಜ್ಞಾನಿ ಏಕಾದ ಅಸ್ತ್ರಗಳ ಸೃಜಿಸಿ?ಆಜ್ಞೆಗಾಗಿಯೆ ಕಾದು ಸಜ್ಜಾಗಿ ನಿಂತಿಹವುಆಗ್ನೇಯ ಅಸ್ತ್ರಗಳು !- […]Read More