ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಶಿವ ಕೊಟ್ಟ ಜೋಳಿಗೆಯ ಗೂಟಕ್ಕೆ ತಗುಲಿಸಿರೆಶಿವ ಬಂದು ಉಣಲಿಕ್ಕಿ ತಣಿಸುವನೆ ಹೇಳುಶಿವ ನಾಮ ಧ್ಯಾನದಲಿ ಊರೂರು ತಿರಿದು ಬರೆಶಿವನು ಕರುಣಿಪನೂಟ- || ಪ್ರತ್ಯಗಾತ್ಮ || ಮೃಗರಾಜ ತಾನೆಂದು ಗುಹೆಯೊಳಗೆ ಮಲಗಿರಲುಮೃಗಗಳೇ ತಾ ಬಂದು ಬಾಯ್ಗೆ ಬೀಳುವುವೆ?ಮೃಗರಾಜನಾದರೇಂ ಬೇಟೆಯಾಡಲೆ ಬೇಕುಜಗದೊಳಗೆ ಶ್ರಮಕೆ ಬೆಲೆ- || ಪ್ರತ್ಯಗಾತ್ಮ || ಬೇಸಿಗೆಯ ಬೇಗೆಯನು ತಾಳಲಾರದೆ ಬರಿದೆಘಾಸಿ ಪಟ್ಟರೆ ಗಾಳಿ ಬೀಸುವುದೆ? ಹೇಳುಬೀಸಣಿಗೆಯನು ಹಿಡಿದು ಬೀಸಿಕೊಂಡರೆ ಮಾತ್ರಬೀಸುವುದು ಗಾಳಿಯದು- || ಪ್ರತ್ಯಗಾತ್ಮ || ದಿನದಿನವು ಇನಿತಿನಿತು ಅಭ್ಯಾಸ ಮಾಡುತಿರೆಕೊನೆಗೆ ದಡ್ಡನು ಕೂಡ ವಿದ್ವಾಂಸನಹನುದಿನ […]