ಭಾರತದ ಮೊಲಗಳು ನಮ್ಮ ಕಾಡುಗಳಲ್ಲಿ ಕಂಡುಬರುವ ಮೊಲಗಳಿಗೆ ನಾವು ಸಾಮಾನ್ಯವಾಗಿ Rabbits ಎನ್ನುತ್ತೇವೆ, ಆದರೆ ನಿಜ ಸಂಗತಿ ಎಂದರೆ Rabbits ಗಳು ನಮ್ಮ ದೇಶದಲ್ಲಿ ಇಲ್ಲ!!! ನಮ್ಮಲ್ಲಿ ಕಂಡುಬರುವ ಮೊಲಗಳೆಂದರೆ ಹೇರ್ (Hare) ಬ್ಲಾಕ್ ನಾಪ್ಪೆಡ್ ಹೇರ್ ಇದು ನಮ್ಮ ರಾಜ್ಯದಲ್ಲಿ ಕಂಡು ಬರುವ ಮೊಲ. HARE’S ಹಾಗು RABBITS ಗಳು Leporidae ಕುಟುಂಬಕ್ಕೆ ಸೇರಿವೆ. ಇವೆರಡೂ ವಿಪುಲ ಸಂತಾನಿಗಳು. ಹಾಗಾದರೆ HARE’S ಹಾಗು Rabbits ನಡುವಿನ ವ್ಯತ್ಯಾಸಗಳೇನು? ಮೇಲ್ನೋಟಕ್ಕೆ ಇವೆರಡರ ನಡುವೆ ವ್ಯತ್ಯಾಸ ಕಂಡು ಹಿಡಿಯುವುದು […]
Feature post
ಥಾಯ್ ಲ್ಯಾಂಡಿನ ಆನೆ ಏಶಿಯಾ ಮತ್ತು ಆಪ್ರಿಕಾದ ಆನೆಗಳಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ದಂತಗಳು ಹಾಗು ಕಿವಿಗಳು. ಏಶಿಯಾದ ಗಂಡು ಆನೆಗಳಿಗೆ ಮಾತ್ರವೆ ದಂತಗಳಿದ್ದರೆ ಆಪ್ರಿಕಾದ ಗಂಡು ಮತ್ತು ಹೆಣ್ಣು ಆನೆ ಎರಡಕ್ಕೂ ದಂತಗಳಿರುತ್ತವೆ ಹಾಗು ಕಿವಿಗಳು ಬಹಳ ಅಗಲವಾಗಿರುತ್ತವೆ. ಆಪ್ರಿಕಾದ ಆನೆಗಳ ಚರ್ಮಕ್ಕೆ ಹೋಲಿಸಿದಲ್ಲಿ ಏಶಿಯಾ ಆನೆಗಳ ಚರ್ಮ ಮೃದುವಾಗಿರುತ್ತದೆ . ಉದ್ದನೆಯ ದಂತ ಆನೆಗಳಿಗೆ ಹೆಚ್ಚು ಬಾರದ ವಸ್ತುಗಳನ್ನ ಎತ್ತಲು, ಆಹಾರ ಸಂಗ್ರಹಿಸಲು, ಮರದಿಂದ ತೊಗಟೆಗಳನ್ನ ಸೀಳಿ ಸುಲಿದು ತೆಗೆಯಲು ಮತ್ತು ಅತಿಮುಖ್ಯವಾಗಿ ಕಾಳಗದಲ್ಲಿ […]Read More
ಪರಾವಲಂಬಿ ಪಕ್ಷಿಗಳು – Brood Parasitism ಮಕ್ಕಳು ಬೇಕು ಎಂದು ಯಾವ ದಂಪತಿಗಳಿಗೆ ಇಸ್ಟವಿರೋದಿಲ್ಲ ಹೇಳಿ! ಮಕ್ಕಳನ್ನು ಹೆರಬೇಕು, ಬೆಳೆಸಬೇಕು, ವಿದ್ಯೆ ಕಲಿಸಿ ಅವುಗಳನ್ನು ಸಮಾಜದಲ್ಲಿ ಉನ್ನತ ನಾಗರಿಕರನ್ನಾಗಿ ಮಾಡಬೇಕು ಎಂಬುದು ಎಲ್ಲ ಪೋಷಕರ ಮೊದಲ ಆದ್ಯತೆ. ಅದೇ ರೀತಿ ಪಕ್ಷಿಗಳಲ್ಲಿ ಕೂಡ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿಗಳಿಗೆ ಗುಕ್ಕು ಉಣಿಸಿ ಅವು ಬೆಳೆದ ಮೇಲೆ ಸ್ವತಂತ್ರವಾಗಿ ಹಾರಲು ಕಲಿಸುವುದನ್ನು ಎಲ್ಲಾ ಪಕ್ಷಿಗಳು ಮನುಷ್ಯನ ರೀತಿ ಪಾಲಿಸುತ್ತವೆ ಆದರೆ ಕೆಲ ಜಾತಿಯ ಪಕ್ಷಿಗಳು […]Read More
ಆಮೇಜಾನ್ ಕಾಡಿನ ಜಾಗ್ವಾರ್ ಅಘ್ರ ಪರಭಕ್ಷಕ ವನ್ಯಜೀವಿಗಳಲ್ಲಿ ಧೈಹಿಕ ಶಕ್ತಿ ಸಾಮರ್ಥ್ಯ, ಭೇಟೆಯಾಡುವ ಕುಶಲತೆ ಮತ್ತು ಯಾವ ಪ್ರದೇಶದಲ್ಲಿ ಭೇಟೆಯಾಡುತ್ತಿದೆಯೋ ಆ ಪ್ರದೇಶಕ್ಕೆ ತಕ್ಕಂತೆ ಹೊಂದಿಕೊಂಡು ಭೇಟೆಯಾಡಲು ಸಹಕರಿಸುವ ಅವುಗಳ ದೇಹದ ಗುಣಲಕ್ಷಣಗಳು ಸಹ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಬೆಕ್ಕಿನ ಕುಲದ ( Cat family) ಅಘ್ರಪರಭಕ್ಷಕ ಪಟ್ಟಿಗೆ ಬಂದಾಗ ಹುಲಿ ಸಿಂಹಗಳು ನಿಸ್ಸಂದೇಹವಾಗಿ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತವೆ ಎನ್ನುವುದು ನಿಜ. ಈ ಕ್ಯಾಟ್ ಪ್ಯಾಮಿಲಿಯ ಹೆಚ್ಚಿನವು ನೀರಿನಲ್ಲಿ ಆರಾಮವಾಗಿ ಈಜಬಲ್ಲವಾದರೂ ಹೆಚ್ಚಾಗಿ ನೀರಿನಿಂದ ದೂರವೇ […]Read More
ಆರ್ಕಿಡ್ ಮಿಡತೆ ಹೆಣ್ಣನ್ನ ಹೂವಿಗೆ ಹೋಲಿಸಿ ಸಂಪಿಗೆಯ ನಾಸಿಕದವಳೇ ,ಮಲ್ಲಿಗೆಯ ಮೈಯವಳೇ ,ಹೂವಂತ ಮನಸ್ಸಿನವಳೇ ಅಂತೆಲ್ಲಾ ಅಗಾಧ ರಸಿಕತೆಯಿಂದ ಬರೆಯವ ಪೇಸ್ಬುಕ್ ಕವಿಗಳ ಕವನಗಳನ್ನ ಓದುವಾಗ , ಒಂದೊಂದ್ಸಲಾ ನನಗೂ ಆ ತರ ಬರೆಯಲಿಕ್ಕೆ ಬರುವುದಿಲ್ಲವಲ್ಲ ಅಂತ ಮತ್ಸರವಾಗುತ್ತೆ. ನಾನೂ ಒಂದಿನ ನಿಮ್ಮನೆಲ್ಲಾ ಮೀರಿಸೋವಂತ ಒಂದು ಕವನದ ಗ್ರಂಥವನ್ನೇ ಬರೆದುಬಿಡ್ತೇನೆ .ಹ್ಞಾಂ ಇರಲಿ… ಅಂದಂಗೆ ಭಾರತೀಯ ಉಪಖಂಡಕ್ಕೆ ಹೊಂದಿಕೊಂಡಿರುವ ಆಗ್ನೇಯ ಏಷ್ಯಾದ ಬರ್ಮಾ, ಬ್ರೂನಿ, ಕಾಂಬೋಡಿಯಾ, ಇಂಡೋನೇಶಿಯಾ, ಲಾವೋಸ್,ಮಲೇಷಿಯಾ, ಫಿಲಿಪೀನ್ಸ್, ಸಿಂಗಾಪುರ್, ವಿಯೆಟ್ನಾಂ ದೇಶಗಳ ನಿತ್ಯಹರಿದ್ವರ್ಣದ ಮಳೆಕಾಡುಗಳಲ್ಲಿ […]Read More
ಆಪ್ರಿಕಾದ ಸೌಮ್ಯದೈತ್ಯರು ಉಗಾಂಡಾ ಹಲವಾರು ಬುಡಕಟ್ಟು ಜನಾಂಗಗಳನ್ನ ಹೊಂದಿದ ಆಫ್ರಿಕಾದ ಒಂದು ಬಡರಾಷ್ಟ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ರಾಜಕೀಯ ಅಸ್ಪಷ್ಟತೆ ಅಸ್ಥಿರತೆಯಿಂದ, ಬುಡಕಟ್ಟು ಜನಾಂಗದ ನಡುವಿನ ಕಲಹ ಅಂತರ್ಯುದ್ಧದ ಹಿಂಸೆಯಿಂದ ನರಳಿದೆ . ಅಧಿಕೃತವಾಗಿ ಇಂಗ್ಲಿಷ್ ಮತ್ತು ಸ್ವಹೀಲಿ ( Swahili) ಮಾತನಾಡುವ ಈ ದೇಶದ ಜನಸಂಖ್ಯೆ ನಾಲ್ಕುವರೆ ಕೋಟಿಗಿಂತಲೂ ಅಧಿಕ. ಒಂದು ಕಾಲಕ್ಕೆ ಆಫ್ರಿಕಾದ ಮುತ್ತು ಎಂದೇ ಪರಿಗಣಿಸಲಾಗುತ್ತಿದ್ದ ಈ ದೇಶ ನೈಸರ್ಗೀಕ ಸಂಪನ್ಮೂಲ, ದಟ್ಟಾರಣ್ಯ ಹುಲ್ಲುಗಾವಲುಗಳಿಂದ ಭರ್ತಿಯಾಗಿತ್ತು. 1970 ರಲ್ಲಿ ಈದಿ ಅಮೀನ್ […]Read More
ಮರಕುಟಿಕ – Woodpecker ಮರಕುಟಿಕಗಳಲ್ಲಿ ಸುಮಾರು 200 ಪ್ರಭೇದಗಳಿದ್ದು ಉಷ್ಣವಲಯದ ಕಾಡುಗಳಿಂದ ಹಿಡಿದು ಸಮಶೀತೋಷ್ಣ ವಲಯದ ಕಾಡುಗಳ ಸಮೇತ ಪ್ರಪಂಚದ ಹಲವಾರು ಪ್ರದೇಶಗಳಲ್ಲಿ ಕಂಡುಬರುತ್ತವೆ. ಆಸ್ಟ್ರೇಲಿಯಾ, ನ್ಯೂಗಿನಿಯಾ, ನ್ಯೂಜಿಲ್ಯಾಂಡ್, ಮಡಗಾಸ್ಕರ್, ಮತ್ತು ತೀವ್ರ ಧ್ರುವ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ. ಮರಗಳ ಕಾಂಡ, ರೆಂಬೆಗಳನ್ನು ಕುಟ್ಟಿ ತೊಗಟೆಗಳ ಒಳಗಿರುವ ಕ್ರಿಮಿಕೀಟಗಳನ್ನು ಭಕ್ಷಿಸಲು ಇವುಗಳ ಅಂಗರಚನೆಯೂ ಇದಕ್ಕೆ ಅನುಗುಣವಾಗಿದೆ. ಉದ್ದನೆಯ ಗಟ್ಟಿಮುಟ್ಟಾದ ಕೊಕ್ಕು, ಹರಿತವಾದ ಉಗುರುಗಳುಳ್ಳ ಕಾಲುಗಳು, ಮರವನ್ನ ನಿಮಿಷಕ್ಕೆ 120 ಬಾರಿಗಿಂತಲೂ ಹೆಚ್ಚು ಬಾರಿ ಕುಟ್ಟುವಂತೆ ರಚಿತವಾದ ತಲೆಬುರುಡೆಗಳನ್ನು […]Read More
ಮೈನಾ ಓ ಮೈನಾ ಪಾರಿವಾಳ, ಗಿಳಿ, ಬಾತುಕೋಳಿ ಇನ್ನೂ ಮುಂತಾದ ಪಕ್ಷಿಗಳು ಮನುಷ್ಯನ ಸ್ನೇಹಜೀವಿಗಳು. ಮನುಷ್ಯನ ಕಂಡರೆ ಭೀತಿ ಇಲ್ಲದೆ, ಆಸುಪಾಸು ಓಡಾಡಿ, ಹಾರಡಿ, ಅವ ಇಡಿದು ಪಳಗಿಸಿ ಪಂಜರದಲ್ಲಿಟ್ಟರೆ, ಸಾಕು ಪಕ್ಷಿಗಳಾಗಿ ಕೆಲವೊಮ್ಮೆ ಅವನ ಹೊಟ್ಟೆಗೆ ಆಹಾರವಾಗಿ ತನ್ನ ಜೀವಿತಾವದಿಯನ್ನು ಕಳೆಯುವುದುಂಟು. “ಮೈನಾ” ಹಕ್ಕಿ ಕೂಡ ಈ ಸ್ನೇಹಜೀವಿ ಪಕ್ಷಿಗಳ ಸಾಲಿನಲ್ಲಿ ಸೇರುತ್ತದೆ. ಹಿಲ್ಲ್ ಮೈನಾ, ಕಾಮನ್ ಮೈನಾ ಮತ್ತು ಬಾಲಿ ಮೈನಾ ಎಂದು ಮೈನಾ ಹಕ್ಕಿಗಳನ್ನು ಪ್ರಮುಖವಾದ ಮೂರು ವಿಧದಲ್ಲಿ ವಿಂಗಡಿಸಲಾಗಿದೆ . ಹಿಲ್ಲ್ […]Read More
ಪ್ಲ್ಯಾಟಿಪಸ್ ಮತ್ತು ಎಕಿಡ್ನಾ ಮರಿಗಳಿಗೆ ಜನ್ಮನೀಡಿ ಮೊಲೆಯುಣಿಸುವುದು ಸಾಮಾನ್ಯವಾಗಿ ಸಸ್ತಿನಿಗಳ ಪ್ರಮುಖ ಲಕ್ಷಣ, ಇದು ಎಲ್ಲರಿಗೂ ತಿಳಿದಿರುವ ಸಂಗತಿ, ಆದರೆ ಕೆಲವೊಂದು ಸಸ್ತಿನಿಗಳು ಪಕ್ಷಿ ಮತ್ತು ಸರೀಸೃಪಗಳಂತೆ ಮೊಟ್ಟೆಯಿಟ್ಟು ಪಕ್ಷಿಗಳಂತೆ ಕಾವುಕೊಟ್ಟಾದ ಮೇಲೆ ಹೊರಬರುವ ಮರಿಗಳಿಗೆ ಹಾಲುಣಿಸುತ್ತವೆ. ಈ ವಿಭಾಗದಲ್ಲಿ ಬರುವ ಸಸ್ತಿನಿಗಳನ್ನ ಓವಿಪರಸ್ (Oviparous) ಸಸ್ತಿನಿಗಳು ಎಂದು ಕರೆಯುತ್ತಾರೆ. ಪ್ಲ್ಯಾಟಿಪಸ್ ಮತ್ತು ಎಕಿಡ್ನಾ ಈ ಗುಂಪಿನಲ್ಲಿ ಬರುವ ಪ್ರಮುಖ ಸಸ್ತಿನಿಗಳು. ಪ್ಲ್ಯಾಟಿಪಸ್ ಪ್ಲಾಟಿಪಸ್ ಗ್ರೀಕ್ ಮೂಲದ ಪದ. ಮೊನೊಟ್ರೀಮ್ (Monotreme) ವಿಭಾಗದಲ್ಲಿ ಬರುವ ಪ್ರಾಣಿಗಳಲ್ಲಿ ಪ್ಲಾಟಿಪಸ್ […]Read More
ಓರ್ಕಾ – ಕೊಲೆಗಾರ ತಿಮಿಂಗಿಲ ಡಾಲ್ಫಿನ್ ಜಾತಿಗೆ ಸೇರಿದ ಸಮುದ್ರದಲ್ಲಿನ ಪರಭಕ್ಷಕಗಳ ಪೈಕಿ ಓರ್ಕಾ ತಿಮಿಂಗಿಲಗಳು ಅಗ್ರಪರಭಕ್ಷಕಗಳು ( ಅಪೆಕ್ಸ್ ಪ್ರಿಡೇಟರ್ ). ಕಿಲ್ಲರ್ ವೇಲ್ಸ್ ಎಂದು ಕರೆಯುವ ಈ ತಿಮಿಂಗಿಲಗಳು 6 ರಿಂದ 8 mt ಉದ್ದ , 3500 ಯಿಂದ 5500 ಸಾವಿರ ಕೇಜಿ ತೂಗುತ್ತವೆ. ಇವು ಡಾಲ್ಫಿನ್ ಗಳು. ಎಲ್ಲಾ ಡಾಲ್ಫಿನ್ ಗಳು ತಿಮಿಂಗಿಲಗಳೆ, ಎಲ್ಲಾ ತಿಮಿಂಗಿಲಗಳು ಡಾಲ್ಫಿನ್ ಗಳಲ್ಲ. ತಿಮಿಂಗಿಲಗಳನ್ನ (Cetacea) ಅನೇಕ ಕುಟುಂಬಗಳಲ್ಲಿ ವಿಭಾಗಿಸಿದ್ದಾರೆ. ಅವುಗಳಲ್ಲಿ Delphinidae ಎನ್ನುವುದು ಡಾಲ್ಫಿನ್ […]Read More