ದ್ವೀಪದ ಹಕ್ಕಿಗಳ ಕಣ್ಮರೆ – 2 ಹಿಂದಿನ ಸರಣಿಯ ಮುಂದಿನ ಭಾಗ…… ದ್ವೀಪದ ಹಕ್ಕಿಗಳ ಕಣ್ಮರೆ –1 – https://bit.ly/3PkGZXy ಓ’ಆಹೂ ಅಕಿಯಲೋ – ಜೇನು ಬಳ್ಳಿಗ “ಓ’ಆಹೂ ಅಕಿಯಲೋ” ಎಂಬ ವಿಚಿತ್ರ ಹೆಸರಿರುವ ಈ ಪಕ್ಷಿಯು ಪೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದಲ್ಲಿನ ಪ್ರಮುಖ ಆಕರ್ಷಕ ಪಕ್ಷಿಗಳಲೊಂದಾಗಿತ್ತು. ಜೇನು ಬಳ್ಳಿಗ (ಹನಿ ಕ್ರೀಪರ್) ಎಂದು ಕೂಡ ಕರೆಯುವ ಈ ಹಕ್ಕಿಯು ತನ್ನ ಆಕರ್ಷಕವಾದ ಬಾಗುಕತ್ತಿಯಂತಹ ಕೊಕ್ಕಿನಿಂದ ಮರಗಳಿಗೆ ಮಾರಕವಾದ ಮರದ ತೊಗಟೆಗಳಲ್ಲಿ ಸಿಗುವ ಜೇಡ, ಮತ್ತಿತರ ಕೀಟಗಳನ್ನು […]
Feature post
ದ್ವೀಪದ ಹಕ್ಕಿಗಳ ಕಣ್ಮರೆ ಹಿಂದಿನ ಸರಣಿಯಲ್ಲಿ ಡೋಡೋ ಪಕ್ಷಿಗಳ ಅವನತಿಯ ಮರುಪರಿಚಯ ಮಾಡಿದ್ದೆ. ಅದರಾನಂತರ ಇನ್ನೂ ಕೆಲವು ಪಕ್ಷಿಗಳು ಅವನತಿ ಹೊಂದಿ ಇತಿಹಾಸ ಪುಟಗಳನ್ನೂ ಸೇರಿದ್ದು ಅವುಗಳ ಕಿರು ಪರಿಚಯ ಇಲ್ಲಿದೆ. ವಿಚಿತ್ರವೆಂದರೆ ಕಣ್ಮರೆಯಾದ ಈ ಎಲ್ಲಾ ಹಕ್ಕಿಗಳು ದ್ವೀಪಗಳನ್ನೇ ತಮ್ಮ ಮೂಲನೆಲೆಯಾಗಿಸಿಕೊಂಡಂತವು. ಮಿಸ್ಟೀರಿಯಸ್ ಸ್ಟಾರ್ಲಿಂಗ್ “ಮಿಸ್ಟೀರಿಯಸ್ ಸ್ಟಾರ್ಲಿಂಗ್” ಅಥವಾ “ಅಪ್ಲೋನಿಸ್ ಮಾವೊರ್ನಾಟ” ಎಂಬ ಈ ಪಕ್ಷಿ “ಸ್ಟಾರ್ಲಿಂಗ್” ಎಂಬ ಪಕ್ಷಿ ಜಾತಿಗೆ ಸೇರಿದ್ದು. ಸ್ಟಾರ್ಲಿಂಗ್ ಎಂದರೆ ಚಿಕ್ಕದರಿಂದ ಮಧ್ಯಮ ಗಾತ್ರದ “ಸ್ಟುರ್ನೀಡೆ” ಎಂಬ ಕುಟುಂಬಕ್ಕೆ ಸೇರಿದ […]Read More
ಬರ್ಕ – (ಬರಿಂಕ) Mouse Deer ನಮ್ಮೂರಿನ ಜಾತ್ರೆಯನ್ನು ಮುಗಿಸಿ ಕಾಡು ಗುಡ್ಡದ ಹಾದಿಯಲ್ಲಿ ರಾತ್ರಿ ಹನ್ನೆರಡರ ವೇಳೆಗೆ ನಾನೂ ನನ್ನ ಸಹೋದರ ಇಬ್ಬರೂ ಟಾರ್ಚ್ ಲೈಟಿನ ಬೆಳಕನ್ನು ಹಾಯಿಸಿಕೊಂಡು ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದೆವು. ರಾತ್ರಿಯ ಪಯಣವೆಂದರೆ ನನಗೆ ಅದೇನೋ ಒಂದು ರೀತಿ ರೋಮಾಂಚನವನ್ನು ನೀಡುತ್ತಿದ್ದರೂ ಒಳಗೊಳಗೇ ಏನೋ ಭಯ. ಆದರೂ ಧೈರ್ಯ ಮಾಡಿ ನೆರೆಮನೆಯವರನ್ನು ಜಾತ್ರೆಯಲ್ಲೇ ಬಿಟ್ಟು ಇಬ್ಬರೇ ಮನೆಯ ಕಡೆಗಿನ ಕಾಡು ಹಾದಿಯನ್ನು ದಾಟಿ ತಲುಪಿದ ಇತಿಹಾಸವನ್ನು ಸೃಷ್ಟಿಸುವ ತವಕ ನಮಗಿಬ್ಬರಿಗೂ. ಹೊರಟು ಸ್ವಲ್ಪ […]Read More
ಡೋಡೋ ಪಕ್ಷಿ ಹಾಗು ಪೋರ್ಚುಗೀಸರು ಮಾನವ ಜನ್ಮ ಶ್ರೇಷ್ಠವಂತೆ! ಏಕೆಂದರೆ ತನ್ನ ಮೆದುಳಿನ ವಿಕಾಸದಿಂದ ಇಡೀ ಭೂಮಂಡಲದಲ್ಲಿ ಪ್ರಕೃತಿಯನ್ನೊಂದು ಬಿಟ್ಟು ಇನ್ನೆಲದರ ಮೇಲು ತನ್ನ ಅಧಿಪತ್ಯ ಸಾದಿಸಿದ್ದಾನೆ. ಇಲ್ಲಿ ಅವನು ಸೃಷ್ಟಿಸಿರುವುದು ಏನಿಲ್ಲ, ಇದದ್ದನ್ನೇ ಕಂಡದ್ದನ್ನೇ ಹೊಸ ಹೊಸದಾಗಿ ಕಂಡು ಹಿಡಿಯುತ್ತಾ ಹೋಗಿದ್ದಾನೆ ಅಷ್ಟೇ. ಹೊಸದನ್ನು ಕಟ್ಟುತ್ತಾನೆ ಕಟ್ಟುವುದಕ್ಕೂ ಮೊದಲು ಹಳೆಯದನ್ನು ಹೊಡೆಯುತ್ತಾನೆ, ಅವನು ಕಟ್ಟಿದ್ದನ್ನು, ತಯಾರಿಸಿದ್ದನ್ನು, ಬೆಳೆಸಿದ್ದನ್ನು ಹೊಡೆಯುತ್ತ ಕಟ್ಟುತ್ತಾ ಬೆಳೆಸುತ್ತಾ ಬಂದಿದ್ದಾನೆ ಆದರೆ ಹಿಂದಿನ ಸೃಷ್ಟಿಯನ್ನು ನಾಶ ಮಾಡುತ್ತಾ ಬಂದಿರುವುದು ಬರುತ್ತಿರುವುದು ಎಷ್ಟು ಸರಿ? […]Read More
ಅಳಿವಿನಂಚಿನ ಪಕ್ಷಿ – ಓಸೆಲೇಟೆಡ್ ಟರ್ಕಿ ಓಸೆಲೇಟೆಡ್ ಟರ್ಕಿ (ಮೆಲಿಯಾಗ್ರಿಸ್ ಒಸೆಲ್ಲಾಟಾ) ಟರ್ಕಿ ಕೋಳಿ ಜಾತಿಯ ತಳಿಯಾಗಿದ್ದು, ಇವುಗಳು ಮುಖ್ಯವಾಗಿ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಇವುಗಳು ಕಾಡು ಟರ್ಕಿಯ (ಮೆಲಿಯಾಗ್ರಿಸ್ ಗ್ಯಾಲೋಪಾವೊ) ಪ್ರಬೇಧಕ್ಕೆ ಸೇರಿದ್ದು, ಅಗ್ರಿಯೊಚಾರಿಸ್ ಜಾತಿಗೆ ಸೇರಿದ್ದೆಂದೂ ಹೇಳಲಾಗುತ್ತದೆ. ಇದು ವಿಶಿಷ್ಟವಾದ ಹಾಗೂ ದೈಹಿಕವಾಗಿ ದೊಡ್ಡ ಗಾತ್ರದ ಹಕ್ಕಿಯಾಗಿದೆ. ಈ ಹಕ್ಕಿಗಳು ಸರಾಸರಿ 70 ರಿಂದ 122 ಸೆಂ.ಮೀ ಉದ್ದ, ಹೆಣ್ಣು ಹಕ್ಕಿಯು ಸರಾಸರಿ 3 ಕೆ.ಜಿ ಮತ್ತು ಗಂಡು ಹಕ್ಕಿಗಳು […]Read More
ಮುಂಗುಸಿಗಳು ಮುಂಗುಸಿಗಳು ಮೊನಚಾದ ಮೂಗುಗಳುಳ್ಳ, ಸಣ್ಣ ಕಿವಿಗಳು ಮತ್ತು ಉದ್ದವಾದ ತುಪ್ಪುಳದಂತಿರುವ ಬಾಲವನ್ನು ಹೊಂದಿರುವ ಪ್ರಾಣಿ. ಮುಂಗುಸಿಗಳನ್ನು ಮೊದಲು (Civet) ಸಿವೆಟ್ ಗಳ ವಿವಿರಿಡೀ ಕುಟುಂಬಕ್ಕೆ ಸೇರಿಸಲಾಗಿತ್ತು. ಆದರೆ ಅವುಗಳ ವಿಭಿನ್ನ ಅಂಗರಚನೆ ಮತ್ತು ಇನ್ನುಳಿದ ಲಕ್ಷಣಗಳಿಂದ ಹರ್ಪೆಸ್ಟಿಡೆ – Herpestidae ಕುಟುಂಬಕ್ಕೆ ಸೇರಿಸಲಾಗಿದೆ. ಅರ್ಧ ವರ್ತುಳದ ಚಿಕ್ಕ ಕಿವಿಗಳು, ಉದ್ದವಾದ ಬೆರಳು ಹಾಗು ಉಗುರುಗಳಿರುವ ಗಿಡ್ಡ ಕಾಲು ಮೊನಚು ಮುಸುಡಿ ಇವುಗಳ ಲಕ್ಷಣಗಳಾಗಿವೆ. ಮಾಂಸಹಾರಿಗಳಾದರೂ ಕೆಲವು ಸಲ ಹಣ್ಣು ಹಂಪಲನ್ನು ತಿನ್ನುತ್ತವೆ. ಹೆಚ್ಚಿನವರು ಮುಂಗುಸಿಗಳು ಮರ […]Read More
ವಿಶ್ವದ ಅತ್ಯಂತ ಅಪರೂಪದ ಮೂರು ಕಣ್ಣಿನ ಹಾವು ಪ್ರಕೃತಿಯಲ್ಲಿ ಮತ್ತು ಜೀವರಾಶಿಯ ಸೃಷ್ಟಿಯಲ್ಲಿ ಆಗಿಂದಾಗ್ಗೆ ಹಲವಾರು ವೈಚಿತ್ರ್ಯಗಳು ಸಂಭವಿಸುತ್ತಲೇ ಇರುತ್ತವೆ. ಸಯಾಮಿ ಮನುಷ್ಯ, ಎರಡು ತಲೆಯ ಹಸು, ಮೂರು ಕಿವಿಯ ಪ್ರಾಣಿಗಳು ಇತ್ಯಾದಿ ವಿಚಿತ್ರ ಜನನಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ವಿಚಿತ್ರವಾದ ಸೃಷ್ಟಿಯು ಉರಗ ಜಾತಿಯಲ್ಲೂ ಕಂಡುಬಂದಿದ್ದು, ಈ ಹಾವು ಮೂರು ಕಣ್ಣನ್ನು ಹೊಂದಿತ್ತು. ಬಹುಶಃ ಈ ಹಾವು ಏನಾದರೂ ನಮ್ಮಲ್ಲಿದ್ದಿದ್ದರೆ ಇದನ್ನು ಈಶ್ವರನ ಪ್ರತಿರೂಪವೆಂದು ಎಲ್ಲರೂ ಭಕ್ತಿಯಿಂದ ಪೂಜಿಸುತ್ತಿದ್ದೆವು. ಆದರೆ ಈ ವಿಶಿಷ್ಟ ಮೂರು ಕಣ್ಣಿನ […]Read More
ಬಿಹಾರದ ಪೊಲೀಸರು ಹಾಗು ಅರಣ್ಯ ರಕ್ಷಕ ಪಡೆಗಳು ತಮ್ಮ ಜಂಟಿ ಕಾರ್ಯಾಚರಣೆಯಲ್ಲಿ ನರಭಕ್ಷಕನಾಗಿದ್ದ “T – 104” ಎಂಬ 3 ವರ್ಷದ ಗಂಡು ಹುಲಿಯನ್ನು ಕಳೆದ ಶನಿವಾರ 8 ರಂದು ಹೊಡೆದು ಹಾಕಿದ್ದಾರೆ. ಸ್ಥಳೀಯ ಗ್ರಾಮದ ಜನರು, ಎರಡು ಆನೆಗಳು, 8 ನುರಿತ ಶಾರ್ಪ್ ಶೂಟರ್ಗಳು ಹಾಗು ಅರಣ್ಯ ರಕ್ಷಕ ಪಡೆಗಳು, ಒಟ್ಟು ಸುಮಾರು 200 ಮಂದಿ ಇದರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಮೂರು ವರ್ಷ ತುಂಬಿದ್ದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಚಂಪಾರಣ್ ನ ಈ ಗಂಡು […]Read More
ಕರ್ನಾಟಕದ ಚಿಕ್ಕ ಕಾಡು ಬೆಕ್ಕುಗಳು ನಮ್ಮ ದೇಶದಲ್ಲಿ ಸುಮಾರು 15 ಬೆಕ್ಕಿನ ಕುಟುಂಬದ ಪ್ರಾಣಿಗಳಿವೆ. ಇದರಲ್ಲಿ ಹುಲಿ ಸಿಂಹಗಳಂತಹ ದೊಡ್ಡ ಬೆಕ್ಕುಗಳಿಂದ ಹಿಡಿದು ಕೇವಲ ಒಂದೂಕಾಲು ಕಿಲೋ ತೂಗುವ ಚಿಕ್ಕ ಬೆಕ್ಕಿನ ಜಾತಿಗಳು ಸಹ ಇವೆ. ನಮ್ಮ ರಾಜ್ಯದಲ್ಲಿ ಹುಲಿ ಚಿರತೆ ಬಿಟ್ಟರೆ ಚಿಕ್ಕ ಚಿಕ್ಕ ಕಾಡು ಬೆಕ್ಕುಗಳು ಸಹ ಇವೆ, ನಮ್ಮಲ್ಲಿ ಅನೇಕರು ಚಿರತೆ ಬಿಟ್ಟರೆ ಅದನ್ನೇ ಹೋಲುವ ಚಿರತೆಗಿಂತ ಸ್ವಲ್ಪ ಚಿಕ್ಕದಾದ ‘ಕುರ್ಕ’ ಎಂಬ ಕಾಡು ಬೆಕ್ಕಿದೆ, ಅದು ದನ ಕರುಗಳನ್ನು ಬೇಟೆಯಾಡಬಲ್ಲದು ಎಂದು […]Read More
ಕೊಮಾಡೋ ಡ್ರ್ಯಾಗನ್ಸ್ “ಕೊಮಾಡೋ ಡ್ರ್ಯಾಗನ್” ಎನ್ನುವ ಈ ಮೊಸಳೆ ಗಾತ್ರದ ಹಲ್ಲಿಗಳು ಇಂಡೋನೇಷ್ಯಾದ “ಸುಂದಾ”ದ್ವೀಪಗಳಲ್ಲಿ ಕಂಡುಬರುತ್ತವೆ . ಲಕ್ಷಾಂತರ ವರ್ಷಗಳಿಂದ ಸುಂದಾ ದ್ವೀಪ ಸಮೂಚ್ಚಯಗಳಲ್ಲಿ ವಿಕಸನ ಹೊಂದಿರುವ ಈ ಹಲ್ಲಿಗಳು ಮಾಂಸಾಹಾರಿಗಳು . “ಸುಂದಾ” ದ್ವೀಪ ಸಮುಚ್ಚಯಯದ ಜೊತೆಗೆ ಇನ್ನೂ ಕೆಲವು ನಡುಗಡ್ಡೆಗಳಲ್ಲಿಯೂ ಕಂಡುಬರುತ್ತವೆ . ಇವು ಪ್ರಾಣಿಗಳ ಹಿಂದೆ ಬೆನ್ನು ಹತ್ತಿ ಓಡಿಹೋಗಿ ಭೇಟೆಯಾಡುವುದಿಲ್ಲ . ಬದಲಾಗಿ ಭೇಟೆ ಪ್ರಾಣಿಗಳು ಇವುಗಳ ಸಮೀಪಕ್ಕೆ ಸುಳಿದಾಗ ತಟಕ್ಕನೇ ಅವುಗಳ ಕಾಲು, ತೊಡೆ ಅಥವಾ ಹೊಟ್ಟೆಯ ಭಾಗಕ್ಕೆ ತಮ್ಮ […]Read More