ಕೆಮ್ಮೀಸೆ ಪಿಕಳಾರ ಮರಿಗಳು ಸಂಜೆಯ ಐದರ ಸಮಯ, ನಮ್ಮ ಮನೆಯ ಮುಂದಿರುವ ಕ್ರಿಸ್ಮಸ್ ಟ್ರೀ ಒಂದರಿಂದ ಎರಡು ಕೆಮ್ಮೀಸೆಯ ಪಿಕಳಾರ (Red Whiskered Bul Bul) ಜೋಡಿ ಹಕ್ಕಿಗಳು ಒಂದೇ ಸಮನೆ ಅರಚಾಟ ನೆಡೆಸುತ್ತಿದ್ದವು. ಏನೆಂದು ಹತ್ತಿರ ಹೋಗಿ ನೋಡಿದರೆ ಅವುಗಳ ಎರಡು ಪುಟ್ಟ ಹಕ್ಕಿ ಮರಿಗಳು ಕೆಳಗೆ ಬಂದು ಕಡಿದ ಕೊಂಬೆಗಳ ಮೇಲೆ ಕುಳಿತುಬಿಟ್ಟಿದ್ದವು. ಬಹುಷಃ ಆ ಮರಿಗಳು ಸ್ವತಂತ್ರವಾಗಿ ಹಾರಲು ಕಲಿಯುತ್ತಿದ್ದವೋ ಏನೋ! ಸುಮಾರು ಅರ್ಧ ಗಂಟೆ ಹಾಗೆ ಅವುಗಳನ್ನು ಗಮನಿಸುತಿದ್ದೆ. ತಾಯಿಯೋ ತಂದೆ […]
Feature post
ಇವತ್ತು ವಿಶ್ವ ಹಾವುಗಳ ದಿನ, ಹಾವುಗಳು ಪರಿಸರದ ಆಹಾರ ಸರಪಳಿ ವ್ಯವಸ್ಥೆಯ ಬಹುಮುಖ್ಯ ಕೊಂಡಿಗಳು ಹಾಗಾಗಿ ಅವುಗಳ ಬಗೆಗೆ ಅರಿವು, ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಹಾವುಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಲ್ಲಿರುವ ಕೆಲವು ವಿಶೇಷ ಹಾವುಗಳ ಪರಿಚಯ ಹಾವುಗಳ ಕುರಿತು ಇರುವ ಮೂಢನಂಬಿಕೆಗಳು, ಅವುಗಳ ಜೀವನ ಶೈಲಿ ಈ ಕುತೂಹಲಕರ ಮಾಹಿತಿಗಳು ನಿಮಗಾಗಿ ಇಲ್ಲಿವೆ ನೋಡಿ. ವಿಶ್ವದಲ್ಲಿ 2500 ಕ್ಕೂ ಅಧಿಕ ಜಾತಿ / ಪ್ರಭೇದದ ಹಾವುಗಳಿದ್ದು, ಭಾರತದಲ್ಲಿ 300 ಕ್ಕೂ ಅಧಿಕ ಜಾತಿ/ […]Read More
ಕಟ್ಟುಹಾವು – Common Krait ನಮ್ಮ ಮಲೆನಾಡು ಭಾಗದಲ್ಲಿ ಕಟ್ಟುಹಾವು, ಕಡಂಬಳ ಹಾವು, ಕಟ್ಟು ಕಡಂಬಳ, ಕಟ್ಟು ಕನ್ನಡಿ ಹಾವು ಎಂದೆಲ್ಲ ಹೆಸರಿನಿಂದ ಕರೆವ ಈ ಹಾವಿಗೆ ಆಂಗ್ಲದಲ್ಲಿ Common Krait ಎನ್ನುತ್ತಾರೆ,ಭಾರತದ 4 ಅಪಾಯಕಾರಿ ಹಾವುಗಳಲ್ಲಿ (Big four venomous snakes) ಇದೂ ಒಂದು. ನಮ್ಮಲ್ಲಿ 2-3 ಅಡಿ ಉದ್ದದ ಹಾವುಗಳನ್ನು ಈ ಜಾತಿಯಲ್ಲಿ ನೋಡಬಹುದು, ಸದಾ ರಾತ್ರಿ ಸಂಚಾರಿಯಾದ (Noctarnul) ಇದು ಹೆಚ್ಚಾಗಿ ಇತರ ಜಾತಿ ಹಾವುಗಳನ್ನೇ ತಿಂದು ಜೀವಿಸುತ್ತದೆ. ಸಾಮಾನ್ಯವಾಗಿ ಕಪ್ಪು ಬಣ್ಣದಂತೆ […]Read More
ಮೊಸಳೆಗಳು – Crocodile ಸರೀಸೃಪ ವರ್ಗಕ್ಕೆ ಸೇರಿದ ಮೊಸಳೆಗಳು ಶೀತ ರಕ್ತ ಪ್ರಾಣಿಗಳು, ಪ್ರಸ್ತುತ ಭೂಮಿ ಮೇಲಿನ ಅತಿ ದೊಡ್ಡ ಸರೀಸೃಪ ಜುರಾಸಿಕ್ ಯುಗದಲ್ಲಿ ಭೂಮಿಯನ್ನು ಆಳಿದ ಡೈನೋಸಾರ್ ಗಳ ಸಂಬಂಧಿಗಳು, ಸುಮಾರು ೧೭೦ ಮಿಲಿಯನ್ ವರ್ಷಗಳಿಂದ ಅಷ್ಟೊಂದು ಬದಲಾವಣೆ ಹೊಂದದೆ ಭೂಮಿಯ ಬೆಚ್ಚಗಿನ ಮತ್ತು ಉಷ್ಣ ಹವಾಮಾನದ ವಲಯಗಳಲ್ಲಿ ವಿತರಣೆಗೊಂಡಿವೆ. ಜಲವಾಸಿಗಳಾದ ಇವು ಆಹಾರದ ವೇಳೆಯನ್ನು ಬಿಟ್ಟು ಇನ್ನುಳಿದ ಸಮಯದಲ್ಲಿ ಬಿಸಿಲು ಕಾಯಿಸಲು ಭೂಮಿಗೆ ಬರುತ್ತವೆ, ಜಾಲ ಪಾದಗಳನ್ನು ಹೊಂದಿ ಶರೀರ ಈಜುವುದಕ್ಕೆ ಮಾರ್ಪಾಡಾಗಿದೆ, ಬಾಲವು […]Read More
ಭಾರತದ ಘೇಂಡಾಮೃಗಗಳು ನಮ್ಮ ಭಾರತದ ಘೇಂಡಾಮೃಗ ಅಳಿವಿನಂಚಿನಲ್ಲಿರುವ ಒಂದು ವಿಶಿಷ್ಟವಾದ ಪ್ರಾಣಿ. ಇದಕ್ಕಿರುವ ಒಂಟಿಕೊಂಬಿನಿಂದಾಗಿ ನೋಡಲು ವಿಶಿಷ್ಟವಾಗಿ ಕಾಣುತ್ತದೆ. ಏಷ್ಯಾದಲ್ಲಿರುವ ಮೂರು ಪ್ರಮುಖ ಘೇಂಡಾಮೃಗಗಳಲ್ಲಿ” ನಮ್ಮ ಭಾರತದ ಒಂಟಿಕೊಂಬಿನ ಘೇಂಡಾಮೃಗ ದೊಡ್ಡದು. ಇನ್ನುಳಿದೆರಡು “ಸುಮಾತ್ರಾ ಘೇಂಡಾಮೃಗ” ಸುಮಾತ್ರ ಹಾಗು ಬೊರ್ನಿಯೊ ದ್ವೀಪಗಳಲ್ಲಿ ಕಂಡುಬಂದರೆ, “ಜಾವಾ ಘೇಂಡಾಮೃಗ” ಇಂಡೋನೇಷ್ಯಾ ಹಾಗು ಜಾವಾ ದ್ವೀಪಗಳಲ್ಲಿ ಮಾತ್ರ ಕಂಡುಬರುತ್ತದೆ. ನಮ್ಮ ಭಾರತದಲ್ಲಿನ ಘೇಂಡಾಮೃಗಗಳು ಹೆಚ್ಚು ಕಡಿಮೆ ಆಫ್ರಿಕಾದ ಬಿಳಿ ಘೇಂಡಾಮೃಗದಷ್ಟೇ ಗಾತ್ರದಲ್ಲಿ ಸಮನಾಗಿವೆ. ಇದನ್ನು ಖಡ್ಗಮೃಗ ಎಂದು ಸಹ ಕರೆಯಲಾಗುತ್ತದೆ. ಇದರ […]Read More
ಆಮೆಗಳು ಆಮೆಗಳು ‘ಅನಪ್ಸಿಡಾ’ ಉಪವರ್ಗದ ‘ಕೆಲೋನಿಯಾ’ ಗಣಕ್ಕೆ ಸೇರಿವೆ. ಇವುಗಳಿಗೆ ‘ಟೊರ್ಟಾಯಿಜ್ ‘ ‘ಟರ್ಟಲ್’ ಮತ್ತು ‘ಟೆರಾಪಿನ್ ‘ ಎಂದು ಕರೆಯುವುದುಂಟು ಇವೆಲ್ಲ ಒಂದೇ ಅರ್ಥ ನೀಡಿದರೂ ಆಮೆಗಳು ಆಶ್ರಯಿಸಿರುವ ಸ್ಥಳಗಳ ಮೇಲಿಂದ ಈ ಶಬ್ದಗಳನ್ನು ಬಳಸುವರು. ಭೂ ವಾಸಿಗಳಾದರೆ ಟೊರ್ಟಾಯಿಜ್(tortoise) ಎಂದು,ಸಿಹಿ ನೀರು, ಸಾಗರ ಸಮುದ್ರಗಳಲ್ಲಿದ್ದರೆ ಟರ್ಟಲ್(turtle) ಎಂದುಹಾಗೂ ಅಮೆರಿಕಾದ ಸಿಹಿ ನೀರು ಹಾಗೂ ಜವುಗಿನ ಆಮೆಗಳಿಗೆ ಟೆರಾಪಿನ್(terrapin) ಎಂದು ಕರೆವರು.ಆಮೆಗಳಲ್ಲಿ 300ಕ್ಕೂ ಹೆಚ್ಚು ಪ್ರಬೇದಗಳಿದ್ದು ಸರೀಸೃಪಗಳ ಗುಂಪಿಗೆ ಸೇರುತ್ತವೆ, ಇವು ಸಸ್ಯಹಾರಿ, ಮಾಂಸಾಹಾರಿ ಮಿಶ್ರ […]Read More
ಬಿಳಿ ಹುಬ್ಬಿನ ಗಿಬ್ಬನ್ ಅಥವಾ Whitebrowed Gibbon ಹೂಲಾಕ್ (Hoolock) ಅಥವಾ Whitebrowed Gibbon ಎಂದು ಕರೆಲ್ಪಡುವ ಇದು ನರ ವಾನರ(Apes) ಕುಟುಂಬಕ್ಕೆ ಸೇರಿದೆ. ಇಡೀ ಭಾರತ ಉಪಖಂಡಕ್ಕೆ ಇದೊಂದೇ ನರವಾನರ ಜಾತಿಯ ಜೀವಿಯಾಗಿದೆ, ನೋಡಲು ಮಂಗನಂತೆ ಕಂಡರೂ ಮಂಗಗಳಿಗೆ ಹಾಗು ನರವಾನರ ಗಳಿಗೆ ತುಂಬಾ ವ್ಯತ್ಯಾಸಗಳಿವೆ. ನರವಾನರಗಳು ನರವಾನರ ಅಥವಾ Apes ಗಳು ಬಾಲವಿಲ್ಲದ ಮನುಷ್ಯರ ಹತ್ತಿರದ ಸಂಬಂಧಿಗಳು, ಇವು ಬುದ್ಧಿವಂತಿಕೆಯಲ್ಲಿ ಮಂಗಗಳಿಗಿಂತ ಮುಂದುವರಿದಿವೆ, ಹಾಗು ಗಾತ್ರದಲ್ಲಿ ದೊಡ್ಡವು ಇವು ಆಯುಧವನ್ನು ಬಳಸಬಲ್ಲವು, ದೊಡ್ಡ ಮೆದುಳನ್ನ […]Read More
ಒಂದು ಕಾಲದಲ್ಲಿ ಗುಬ್ಬಿಗಳಿಲ್ಲದ ಮನೆಗಳನ್ನು ಊಹಿಸಲು ಸಾಧ್ಯವಿತ್ತೇ? ಮನೆ ಸದಸ್ಯರಂತೆ ಹಾಗು ನೆಂಟರ ಹಾಗೆ ಎಲ್ಲರ ಮನೆಗಳಲ್ಲಿ ಹೋಗಿ ಬಂದು ಮಾಡುತ್ತಿದ್ದವು. ಊರಲ್ಲಿನ ನಮ್ಮ ಅಜ್ಜಿಯ ಮನೆಯ ಪಡಸಾಲೆಯ ತುಂಬ ಹಾಗಾಗ ನಾನಾ ತರಹದ ಕಾಳುಗಳು, ಅಕ್ಕಿ ನುಚ್ಚು ಹಾಗೂ ಒಮ್ಮೊಮ್ಮೆ ಗೋದಿ ಕಾಳುಗಳನ್ನು ಒಣಗಲು ಹಾಕುತಿದ್ದಾಗ ಈ ಗುಬ್ಬಿಗಳು ತಮ್ಮ ಸೈನ್ಯದ ಸಮೇತ ದಾಳಿ ಇಡುತಿದ್ದವು. ಚಿಇಂಕ್-ಚಿಇಂಕ್ ಎಂದು ಎಡೆಬಿಡದೆ ಸದ್ದು ಮಾಡಿ ಕಾಳುಗಳನ್ನು ಹಾರಿಸಿಕೊಂಡೋಗುತಿದ್ದವು. ಅದೇನು ಸದ್ದು ಅವುಗಳದ್ದು, ಅಬ್ಬಬಾ! ಆದರು ಇವುಗಳ ಸದ್ದು […]Read More
ಕೃಷ್ಣಮೃಗ Black buck or Indian antelopeScientific name: Antelope cervicapra ಇತ್ತೀಚಿಗೆ ಕೃಷ್ಣಮೃಗಗಳನ್ನು ನೋಡುವ ಸಲುವಾಗಿ ಚಿಕ್ಕಮಗಳೂರಿನ ಒಂದು ಊರಿಗೆ ಬೇಟಿ ನೀಡಿದ್ದೆವು (ಕೆಲವು ಕಾರಣಗಳಿಂದ ಊರಿನ ಹೆಸರು ತಿಳಿಸಿಲ್ಲ) ಸುಮಾರು 700 ಹೆಕ್ಟೇರ್ ಪ್ರದೇಶ ಇರುವ ಈ ಜಾಗದ ಸುತ್ತಲೂ ಕೃಷಿ ಭೂಮಿ ಇದೆ, ಹಾಗಾಗಿ ಕೃಷ್ಣ ಮೃಗಗಳು ಇರುವ ಸಾಧ್ಯತೆ ಇಲ್ಲ ಎಂದು ಕೊಂಡು ಒಳ ಪ್ರವೇಶ ಮಾಡಿದೆವು. ಹುಲ್ಲುಗಾವಲಿನಿಂದ ಕೂಡಿದ ಈ ಜಾಗದಲ್ಲಿ ಅಲ್ಲಲ್ಲಿ ಪೊದೆಗಳು ತುಂಬಿಕೊಂಡಿದ್ದವು, ಕೃಷ್ಣಮೃಗಗಳ ವಾಸಕ್ಕೆ ಯೋಗ್ಯವಾದ […]Read More
ಚಿರತೆ – (Cheetha, Leopard, Jaguar, Panther) ಒಮ್ಮೆ ಸ್ನೇಹಿತನೊಬ್ಬನಿಗೆ ಮೂರು ಚಿತ್ರಗಳನ್ನು ತೋರಿಸಿ ಇದೇನೆಂದು ಕೇಳಿದೆ.ಮೂರು ಚಿತ್ರಗಳನ್ನು ಚಿರತೆ ಎಂದೇ ಹೆಸರಿಸಿದ ಹಾಗೂ ‘ಸರ್ ಇದೇನಿದು ತಮಾಷೆ’ ಮೂರು ಚಿರತೆಯಲ್ಲವೇ ಸರ್ ಎಂದ.ನಾನು ಈ ಮೂರಕ್ಕೂ ಬೇರೆ ಬೇರೆ ಹೆಸರಿದೆ ಎಂದು ಹೇಳಿದೆ. ಮಲೆನಾಡು ಕಡೆ ಇದನ್ನು ಚಿಟ್ಟೆ ಹುಲಿ ಅಂತಾನೂ ಕರೆಯುತಾರೆ. ಹಳದಿ ಮಿಶ್ರಿತ ಕಂದು ಬಣ್ಣದ ಪ್ರಾಣಿ ಚಿರತೆ. ಆದರೆ ಸಾಮಾನ್ಯವಾಗಿ ನಾವು ಕರೆಯುವುದು ಚಿರತೆಯೆಂದೇ ಇದರ ಮೂಲ ನಾಮ ಪ್ಯಾಂಥೇರಾ (Pantheras). […]Read More