ಆಮೆಗಳು ಆಮೆಗಳು ‘ಅನಪ್ಸಿಡಾ’ ಉಪವರ್ಗದ ‘ಕೆಲೋನಿಯಾ’ ಗಣಕ್ಕೆ ಸೇರಿವೆ. ಇವುಗಳಿಗೆ ‘ಟೊರ್ಟಾಯಿಜ್ ‘ ‘ಟರ್ಟಲ್’ ಮತ್ತು ‘ಟೆರಾಪಿನ್ ‘ ಎಂದು ಕರೆಯುವುದುಂಟು ಇವೆಲ್ಲ ಒಂದೇ ಅರ್ಥ ನೀಡಿದರೂ ಆಮೆಗಳು ಆಶ್ರಯಿಸಿರುವ ಸ್ಥಳಗಳ ಮೇಲಿಂದ ಈ ಶಬ್ದಗಳನ್ನು ಬಳಸುವರು. ಭೂ ವಾಸಿಗಳಾದರೆ ಟೊರ್ಟಾಯಿಜ್(tortoise) ಎಂದು,ಸಿಹಿ ನೀರು, ಸಾಗರ ಸಮುದ್ರಗಳಲ್ಲಿದ್ದರೆ ಟರ್ಟಲ್(turtle) ಎಂದುಹಾಗೂ ಅಮೆರಿಕಾದ ಸಿಹಿ ನೀರು ಹಾಗೂ ಜವುಗಿನ ಆಮೆಗಳಿಗೆ ಟೆರಾಪಿನ್(terrapin) ಎಂದು ಕರೆವರು.ಆಮೆಗಳಲ್ಲಿ 300ಕ್ಕೂ ಹೆಚ್ಚು ಪ್ರಬೇದಗಳಿದ್ದು ಸರೀಸೃಪಗಳ ಗುಂಪಿಗೆ ಸೇರುತ್ತವೆ, ಇವು ಸಸ್ಯಹಾರಿ, ಮಾಂಸಾಹಾರಿ ಮಿಶ್ರ […]
Feature post
ಬಿಳಿ ಹುಬ್ಬಿನ ಗಿಬ್ಬನ್ ಅಥವಾ Whitebrowed Gibbon ಹೂಲಾಕ್ (Hoolock) ಅಥವಾ Whitebrowed Gibbon ಎಂದು ಕರೆಲ್ಪಡುವ ಇದು ನರ ವಾನರ(Apes) ಕುಟುಂಬಕ್ಕೆ ಸೇರಿದೆ. ಇಡೀ ಭಾರತ ಉಪಖಂಡಕ್ಕೆ ಇದೊಂದೇ ನರವಾನರ ಜಾತಿಯ ಜೀವಿಯಾಗಿದೆ, ನೋಡಲು ಮಂಗನಂತೆ ಕಂಡರೂ ಮಂಗಗಳಿಗೆ ಹಾಗು ನರವಾನರ ಗಳಿಗೆ ತುಂಬಾ ವ್ಯತ್ಯಾಸಗಳಿವೆ. ನರವಾನರಗಳು ನರವಾನರ ಅಥವಾ Apes ಗಳು ಬಾಲವಿಲ್ಲದ ಮನುಷ್ಯರ ಹತ್ತಿರದ ಸಂಬಂಧಿಗಳು, ಇವು ಬುದ್ಧಿವಂತಿಕೆಯಲ್ಲಿ ಮಂಗಗಳಿಗಿಂತ ಮುಂದುವರಿದಿವೆ, ಹಾಗು ಗಾತ್ರದಲ್ಲಿ ದೊಡ್ಡವು ಇವು ಆಯುಧವನ್ನು ಬಳಸಬಲ್ಲವು, ದೊಡ್ಡ ಮೆದುಳನ್ನ […]Read More
ಒಂದು ಕಾಲದಲ್ಲಿ ಗುಬ್ಬಿಗಳಿಲ್ಲದ ಮನೆಗಳನ್ನು ಊಹಿಸಲು ಸಾಧ್ಯವಿತ್ತೇ? ಮನೆ ಸದಸ್ಯರಂತೆ ಹಾಗು ನೆಂಟರ ಹಾಗೆ ಎಲ್ಲರ ಮನೆಗಳಲ್ಲಿ ಹೋಗಿ ಬಂದು ಮಾಡುತ್ತಿದ್ದವು. ಊರಲ್ಲಿನ ನಮ್ಮ ಅಜ್ಜಿಯ ಮನೆಯ ಪಡಸಾಲೆಯ ತುಂಬ ಹಾಗಾಗ ನಾನಾ ತರಹದ ಕಾಳುಗಳು, ಅಕ್ಕಿ ನುಚ್ಚು ಹಾಗೂ ಒಮ್ಮೊಮ್ಮೆ ಗೋದಿ ಕಾಳುಗಳನ್ನು ಒಣಗಲು ಹಾಕುತಿದ್ದಾಗ ಈ ಗುಬ್ಬಿಗಳು ತಮ್ಮ ಸೈನ್ಯದ ಸಮೇತ ದಾಳಿ ಇಡುತಿದ್ದವು. ಚಿಇಂಕ್-ಚಿಇಂಕ್ ಎಂದು ಎಡೆಬಿಡದೆ ಸದ್ದು ಮಾಡಿ ಕಾಳುಗಳನ್ನು ಹಾರಿಸಿಕೊಂಡೋಗುತಿದ್ದವು. ಅದೇನು ಸದ್ದು ಅವುಗಳದ್ದು, ಅಬ್ಬಬಾ! ಆದರು ಇವುಗಳ ಸದ್ದು […]Read More
ಕೃಷ್ಣಮೃಗ Black buck or Indian antelopeScientific name: Antelope cervicapra ಇತ್ತೀಚಿಗೆ ಕೃಷ್ಣಮೃಗಗಳನ್ನು ನೋಡುವ ಸಲುವಾಗಿ ಚಿಕ್ಕಮಗಳೂರಿನ ಒಂದು ಊರಿಗೆ ಬೇಟಿ ನೀಡಿದ್ದೆವು (ಕೆಲವು ಕಾರಣಗಳಿಂದ ಊರಿನ ಹೆಸರು ತಿಳಿಸಿಲ್ಲ) ಸುಮಾರು 700 ಹೆಕ್ಟೇರ್ ಪ್ರದೇಶ ಇರುವ ಈ ಜಾಗದ ಸುತ್ತಲೂ ಕೃಷಿ ಭೂಮಿ ಇದೆ, ಹಾಗಾಗಿ ಕೃಷ್ಣ ಮೃಗಗಳು ಇರುವ ಸಾಧ್ಯತೆ ಇಲ್ಲ ಎಂದು ಕೊಂಡು ಒಳ ಪ್ರವೇಶ ಮಾಡಿದೆವು. ಹುಲ್ಲುಗಾವಲಿನಿಂದ ಕೂಡಿದ ಈ ಜಾಗದಲ್ಲಿ ಅಲ್ಲಲ್ಲಿ ಪೊದೆಗಳು ತುಂಬಿಕೊಂಡಿದ್ದವು, ಕೃಷ್ಣಮೃಗಗಳ ವಾಸಕ್ಕೆ ಯೋಗ್ಯವಾದ […]Read More
ಚಿರತೆ – (Cheetha, Leopard, Jaguar, Panther) ಒಮ್ಮೆ ಸ್ನೇಹಿತನೊಬ್ಬನಿಗೆ ಮೂರು ಚಿತ್ರಗಳನ್ನು ತೋರಿಸಿ ಇದೇನೆಂದು ಕೇಳಿದೆ.ಮೂರು ಚಿತ್ರಗಳನ್ನು ಚಿರತೆ ಎಂದೇ ಹೆಸರಿಸಿದ ಹಾಗೂ ‘ಸರ್ ಇದೇನಿದು ತಮಾಷೆ’ ಮೂರು ಚಿರತೆಯಲ್ಲವೇ ಸರ್ ಎಂದ.ನಾನು ಈ ಮೂರಕ್ಕೂ ಬೇರೆ ಬೇರೆ ಹೆಸರಿದೆ ಎಂದು ಹೇಳಿದೆ. ಮಲೆನಾಡು ಕಡೆ ಇದನ್ನು ಚಿಟ್ಟೆ ಹುಲಿ ಅಂತಾನೂ ಕರೆಯುತಾರೆ. ಹಳದಿ ಮಿಶ್ರಿತ ಕಂದು ಬಣ್ಣದ ಪ್ರಾಣಿ ಚಿರತೆ. ಆದರೆ ಸಾಮಾನ್ಯವಾಗಿ ನಾವು ಕರೆಯುವುದು ಚಿರತೆಯೆಂದೇ ಇದರ ಮೂಲ ನಾಮ ಪ್ಯಾಂಥೇರಾ (Pantheras). […]Read More
ಜಗತ್ತಿನಾದ್ಯಂತ ಅತೀ ಹೆಚ್ಚು ಕಳ್ಳಸಾಗಣೆಗೆ ಒಳಗಾಗಿ ಬಹುತೇಕ ನಶಿಸುವ ಹಂತಕ್ಕೆ ತಲುಪಿರುವ ಚಿಪ್ಪುಹಂದಿಗಳನ್ನು ಇತ್ತೀಚಿಗೆ ನೋಡಿದವರೆ ಬಹಳ ವಿರಳ, ಮಾನವನ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದ್ದರೂ, ಇದರ ಚಿಪ್ಪು ,ಅಂಗಾಂಗಗಳಲ್ಲಿ ಕಾಮೋತ್ತೇಜಕ ಗುಣಗಳು ಇವೆ ಹಾಗು ಕೆಲ ಸಾಂಪ್ರದಾಯಕ ಔಷದಿ ತಯಾರಿಸಬಹುದು ಎಂಬ ಮೂಢ ನಂಬಿಕೆ ಈ ಜೀವಿಯನ್ನು ಅಪಾಯಕ್ಕೆ ಸಿಲುಕಿಸಿವೆ. ಮಾಂಸಕ್ಕೆ ಬೇಟೆಯಾಡಿದ್ದಕ್ಕಿಂತ ಕಳ್ಳಸಾಗಣೆಗಾಗಿಯೇ ಬಲಿಯಾಗಿದ್ದು ಹೆಚ್ಚು.ಹಾರೆ ಗುದ್ದಲಿಯೊಂದಿಗೆ ಕಾಡಿಗೆ ನುಗ್ಗುವ ಅನುಭವಿ ಬೇಟೆಗಾರರು ಯಾವುದೇ ಗುಂಡಿನ ಶಬ್ದ ಮಾಡದೆ, ಬಿಲಗಳಲ್ಲಿ ಇರುವ ಇವನ್ನು ಹೊರತೆಗೆದು […]Read More
ದಂಶಕಗಳ ಲೋಕ ದಂಶಕಗಳು, ಯುಗ್ಮದಂತಿಗಳು, Rodents, Gnawing animals ಎಂದೆಲ್ಲಾ ಕರೆವ ಈ ಗಣದ ಪ್ರಾಣಿಗಳು ಸಸ್ತನಿಗಳಲ್ಲೇ ದೊಡ್ಡ ಸಂಖ್ಯೆಯ ಗುಂಪನ್ನು ಹೊಂದಿವೆ. ಈ ಗಣದಲ್ಲಿ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಬಲ್ಲ ಬೀವರ್ (Beaver) ಗಳಿಂದ ಹಿಡಿದು ಮನೆಯಲ್ಲಿರುವ ವಸ್ತುಗಳನ್ನು ಕಡಿದು ಅಪಾರ ಹಾನಿ ಮಾಡಬಲ್ಲ ಇಲಿ ಹೆಗ್ಗಣಗಳು ಸೇರಿವೆ. ಈ ದಂಶಕಗಳ ದೇಹರಚನೆಯೇ ಒಂದು ರೀತಿಯ ವಿಶೇಷ, ಈ ಗುಂಪಿನ ಜೀವಿಗಳಿಗೆ ಮೇಲ್ದವಡೆ ಮತ್ತು ಕೆಳ ದವಡೆಗಳಲ್ಲಿ ಉಳಿಯಂತಿರುವ ಜೋಡಿ ಬಾಚಿ ಹಲ್ಲುಗಳಿದ್ದು ಈ ಹಲ್ಲುಗಳ […]Read More
ಸಿಂಗಳೀಕ – Macaque ಪಶ್ಚಿಮ ಘಟ್ಟ ಪ್ರದೇಶ, ಇದು ಸುತ್ತಲೂ ಹಚ್ಚ ಹಸಿರನ್ನು ಮೈ ತುಂಬಿ ಕೊಂಡಿರುವ ಸಹ್ಯಾದ್ರಿ, ಎತ್ತಲೂ ನದಿ ಕಣಿವೆಗಳಿಂದ ಕೂಡಿದ ಭೂ ಭಾಗ. ಬೆಟ್ಟ,ಗುಡ್ಡಗಳನ್ನು ಹೊಂದಿರುವ ಪರ್ವತ. ಇಲ್ಲಿ ಬಗೆ-ಬಗೆಯ ಪ್ರಾಣಿ-ಪಕ್ಷಿಗಳ ತಾಣವನ್ನು ನೋಡಿದಾಗ ಕಣ್ಣಿಗೆ ಆನಂದವಾಗುವುದು ಖಂಡಿತ. ಹಸಿರು ಸಿರಿಯ ವನ ರೂಪವನ್ನೊಮ್ಮೆ ನೋಡಿದಾಗ ಸ್ವರ್ಗದಷ್ಟೆ ಖುಷಿ ಅನುಭವ ಸಿಗುವುದು ಖಚಿತ. ಇಂತಹ ಸಸ್ಯ ವರ್ಗಗಳ ನಡುವೆ ಇಂದು ಉಳಿದಿರುವ ಜೀವಗಳೆಷ್ಟೊ, ಅಳಿದಿರುವ ಜೀವಿಗಳೆಷ್ಟೊ, ಅಳವಿನಂಚಿನಲ್ಲಿರುವ ಜೀವಿಗಳೆಷ್ಟೊ ? ಹುಡುಕುತ್ತಾ ಹೋದರೆ […]Read More
ಸಾಲ್ಮೋನ್ ಸಲಾರ್ – ವಿಸ್ಮಯ ಮೀನು ಈ ಭೂಮಿಯ ಮೇಲೆ ವಾಸಿಸುವ ಅನೇಕ ಜೀವಿಗಳಲ್ಲಿ ವಿಸ್ಮಯ ಜೀವನಚಕ್ರವಿದೆ. ಈ ಜೀವನ ಚಕ್ರ ಅತ್ಯಂತ ಕೂತುಹಲಕರ ವಿಷಯಗಳನ್ನೊಳಗೊಂಡಿರುತ್ತದೆ. ಇಂತಹ ವಿಸ್ಮಯ ಜೀವನಚಕ್ರಗಳನ್ನೊಳಗೊಂಡ ಜೀವಿಗಳ ಸಾಲಿನಲ್ಲಿ ಸಾಲ್ಮೋನ್ ಸಲಾರ್ (Salmo salar) ಮೀನಿನ ಪ್ರಭೇದವು ಸಹ ಸೇರುತ್ತದೆ. ಅಟ್ಲಾಂಟಿಕ್ ಸಾಗರದಲ್ಲಿ ಸಾಲ್ಮೊನ್ ಪ್ರಬೇದ ಮಾತ್ರ ಕಂಡುಬಂದರೆ ಪೆಸಿಫಿಕ್ ಸಾಗರದಲ್ಲಿ ಈ ಜಾತಿಗೆ ಸೇರಿದ ಹಲವಾರು ಪ್ರಭೇದಗಳು ಕಂಡು ಬರುತ್ತದೆ. ತಮ್ಮ ಹರೆಯದ ಜೀವನವನ್ನು ಇವು ಸಿಹಿನೀರಿನ ನದಿಗಳಲ್ಲಿ ಕಳೆದು ವಯಸ್ಕ […]Read More
ನಾನು ವಸಂತನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ ನಮ್ಮ ಊಟ ಮುಗಿಸಿ ಇನ್ನು ಉಳಿದ ಅರ್ಧ ಗಂಟೆ ಒಂದು ಮರದ ಕೆಳಗೆ ನಿಂತು ಹರಟೆ ಹೊಡೆಯುವುದು ನಮ್ಮ ದಿನನಿತ್ಯದ ಹವ್ಯಾಸವಾಗಿತ್ತು. ಅಲ್ಲಿಗೆ ಹೆಚ್ಚು ಕಡಿಮೆ ಅರ್ಧ ಕಚೇರಿಯೇ ಬಂದು ಸೇರುತಿತ್ತು. ಸುಮಾರು ನಾಲ್ಕೈದು ದಿನದಿಂದ ನಮ್ಮ ಟೀಮಿನ ‘ಸುನಿಲ್’ ಕಾಣಿಸುತ್ತಿರಲಿಲ್ಲ. ಆಶ್ಚರ್ಯವೆಂದರೆ ಆಫೀಸಿಗೆ ಬಂದು ಕೂಡ ನಮ್ಮ ಜೊತೆ ಬರದೇ ಆಫೀಸಿನ ಕೆಳಗೇ ನಿಂತು ಕಾಲಕಳೆಯುತಿದ್ದ. ಇದರ ಬಗ್ಗೆ ಜೊತೆಗಿರುವವರನ್ನು ವಿಚಾರಿಸಿದಾಗ ಯಾರ ಮೇಲೋ ಮುನಿಸಿಕೊಂಡಿರಬೇಕು […]Read More