ನಾಯಿಯ ಕುಟುಂಬದಲ್ಲಿ ಸಾಕುನಾಯಿ ಕಾಡುನಾಯಿ ತೋಳ ನರಿ ಕಯೋಟಿ ಹಾಗು ಆಸ್ಟ್ರೇಲಿಯಾದ ಡಿಂಗೋನಾಯಿ ಸೇರಿಕೊಂಡಿದೆ , ಇವೆಲ್ಲವು ಮಾಂಸಾಹಾರಿಗಣದ canidae ಕುಟುಂಬಕ್ಕೆ ಸೇರಿವೆ.ಈ ಕುಟುಂಬದ ಪ್ರಾಣಿಗಳು ನ್ಯೂಝಿಲ್ಯಾಂಡ್ ನ್ಯೂಗಿನಿ ಆಸ್ಟ್ರೇಲಿಯ ಮಡಗಾಸ್ಕರ್ ಮೊದಲಾದ ನಡುಗಡ್ಡೆಗಳನ್ನು ಬಿಟ್ಟು ಎಲ್ಲಾ ಕಡೆ ನೆಲೆಸಿವೆ.ಮರುಭೂಮಿ ಆರ್ಕಟಿಕ್ ಟಂಡ್ರಾ ಉಷ್ಣವಲಯದ ಕಾಡು ಈ ಎಲ್ಲ ವೈಪರೀತ್ಯದ ಪರಿಸರಗಳಿಗೆ ಹೊಂದಿಕೊಂಡಿವೆ. ಇವುಗಳಲ್ಲಿ ಅನೇಕ ಜಾತಿ, ಪ್ರಭೇದಗಳಿವೆ, ಭಾರತದಲ್ಲಿ ಎಂಟು ಜಾತಿಗಳಿದ್ದರೆ ಪ್ರಪಂಚದಲ್ಲಿ ಸುಮಾರು 34 ಜಾತಿಗಳಿವೆ. ಆಕಾರ ಅಳತೆ ಬಣ್ಣದಲ್ಲಿ ಬೇರೆ ಬೇರೆಯಾದರೂ ಇವೆಲ್ಲವೂ […]
Feature post
ಕೊಕ್ಕರೆಗಳು ದೊಡ್ಡ ಗಾತ್ರದ ಹಕ್ಕಿಗಳು. ಈಗಾಗಲೇ ಈ ಅಂಕಣದಲ್ಲಿ ಕೆಲವು ಕೊಕ್ಕರೆಗಳನ್ನು ಪರಿಚಯ ಮಾಡಿಕೊಂಡಿದ್ದೀವಿ. ಇದು ಅದರ ಮುಂದುವರೆದ ಭಾಗ. ನೀವು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪಯಣಿಸುತ್ತಿರುವಾಗ ಕಿಟಕಿ ಪಕ್ಕದಲ್ಲಿ ಕೂತಿದ್ದರೆ ಈ ಪಕ್ಷಿ ನಿಮ್ಮ ಕಣ್ಣಿಗೆ ಬೀಳುವ ಸಾಧ್ಯತೆಯಿದೆ. ಗಂಟಲಿನ ಮೇಲೆ ದಟ್ಟವಾದ ಬಿಳಿ ಗರಿಗಳಿರುವ ಇದನ್ನು ಸುಲಭವಾಗಿ ಪತ್ತೆಹಚ್ಚಬಹುದು. ದೇಹದ ಮೇಲ್ಭಾಗ ಬಹುತೇಕ ಕಪ್ಪು. ಕುತ್ತಿಗೆಯ ಸಮೀಪದ ಗರಿಗಳು ಹೊಳೆಯುತ್ತವೆ. ಈ ಹೊಳೆಯುವ ಗರಿಗಳು ಉದ್ದವಾಗಿದ್ದು ಪ್ರದರ್ಶನ ಮಾಡುವಾಗ ಈ ಗರಿಗಳನ್ನು ಹಕ್ಕಿ ಎದ್ದುನಿಲ್ಲಿಸುತ್ತದೆ. […]Read More
ಇದು ಗಂಡಿನ ನಕಲಿ ವೇಷಧಾರಿ. ಜಗತ್ತಿನಾದ್ಯಂತ ಹಯಿನಾದ ಒಂಬತ್ತು ಜಾತಿ / ಪ್ರಬೇಧಗಳಿದ್ದು ,ನಮ್ಮ ದೇಶದಲ್ಲಿ Striped Hyena ಅಥವಾ ಪಟ್ಟೆ ಕತ್ತೆ ಕಿರುಬವನ್ನು ನೋಡಬಹುದು. ಈಗ ನಾನು ಬರೆಯುತ್ತಿರುವುದು ಆಫ್ರಿಕಾದ Spotted Hyena ಬಗ್ಗೆ. ನಮ್ಮ ಪ್ರಯಾಣ ಈಗ ಆಫ್ರಿಕಾ ಕಡೆಗೆ, ಆಫ್ರಿಕಾ ಎಂದೊಡನೆ ಹೇಳಬೇಕಿಲ್ಲ, ಅದು ವನ್ಯಜೀವಿಗಳ ತವರು, ಕೃಗರ್, ಸರಂಗೇಟಿಯಂತ ದೊಡ್ಡ ದೊಡ್ಡ ರಾಷ್ಟ್ರೀಯ ಉದ್ಯಾನವನಗಳು ಅಲ್ಲಿವೆ, ಆಫ್ರಿಕಾ ಆನೆ, ಜೀರಾಫೆ, ಹಿಪ್ಪೊಗಳ ಸಮೂಹವನ್ನೇ ನೋಡಬಹುದು.ನವೆಂಬರ್ ತಿಂಗಳಲ್ಲಿ ಮಳೆಗಾಲ ಶುರುವಾದಂತೆ ವೈಲ್ಡ್ ಬೀಸ್ಟ್ […]Read More
ನೀವು ಬದರಿಯಾತ್ರೆಯಲ್ಲಿದ್ದಾಗ ಇದ್ದಕ್ಕಿದ್ದಂತೆ “ಅರೆ! ಈ ಕಾಗೆಗೆ ಹಳದಿ ಕೊಕ್ಕಿದೆ!” ಎನಿಸಬಹುದು. ಹಾಗೆಯೇ, ಕಾಲು ಕೆಂಪಗಿದಯಲ್ಲಾ ಎಂದೂ ಎನಿಸಬಹುದು. ಹೌದು! ಆ ಪ್ರದೇಶಗಳಲ್ಲಿ ಹಳದಿ ಕೊಕ್ಕಿನ ಕಾಗೆ ಕಂಡುಬರುತ್ತದೆ. ಇಂಗ್ಲಿಷಿನಲ್ಲಿ ಇದನ್ನು Yellow-billed Chough Pyrrhocorax graculus ಎನ್ನುತ್ತಾರೆ. ಕಾಗೆಗಳ ಕುಟುಂಬಕ್ಕೇ ಸೇರುತ್ತವೆ. ಹಾಗೆಯೇ, ಕೆಂಪು ಕೊಕ್ಕಿನ ಕಾಗೆಯೂ ಕಂಡುಬರುತ್ತದೆ. ಹಳದಿ ಕೊಕ್ಕು, ಕೆಂಪು ಕಾಲನ್ನು ಬಿಟ್ಟರೆ ಉಳಿದಂತೆ ಕಾಗೆಯಂತೆಯೇ ಕಾಣುತ್ತದೆ. ಬೇಸಿಗೆಯಲ್ಲಿ ಆ ಪ್ರದೇಶಗಳಲ್ಲಿ ಕಂಡುಬರುವ ಕೀಟಗಳನ್ನು ತಿಂದರೆ ಚಳಿಗಾಲದಲ್ಲಿ ಹಣ್ಣುಗಳನ್ನು ತಿನ್ನುತ್ತದೆ. ಒಂದು ಬಗೆಯ […]Read More
ನಮ್ಮ ಸುಂದರ ಹಕ್ಕಿಗಳಲ್ಲಿ ಒಂದಾದ ನೆಲಸಿಳ್ಳಾರಗಳು ನೆಲದ ಮೇಲೆ ಆಹಾರ ಅರಸುವ ಪ್ರಭೇದ. ಇದರ ಹೆಸರಿನಲ್ಲರಿವ “ನೆಲ” ಅದನ್ನೇ ಸೂಚಿಸುತ್ತದೆ. ಹೀಗೆಯೇ ಬಂಡೆ ಇಲ್ಲವೆ ಕಲ್ಲು ಸಿಳ್ಳಾರಗಳೂ ಇವೆ. ಅವು ಬಂಡೆಗಳ ನಡುವೆ ಹೆಚ್ಚು ಕಾಣಸಿಗುತ್ತವೆ. ನೆಲಸಿಳ್ಳಾರಗಳು ಕಾಡಿನ ನೆಲಹಾಸಿನಲ್ಲಿ ಒಣ ಎಲೆಗಳನ್ನು ತಲಕೆಳಗು ಮಾಡುತ್ತಾ ಹುಳ, ಜೇಡ ಇತ್ಯಾದಿಗಳನ್ನು ಹುಡುಕಿ, ಹಿಡಿದು ತಿನ್ನುತ್ತವೆ. ಒಟ್ಟಾರೆಯಾಗಿ ಸಿಳ್ಳಾರಗಳನ್ನು ತೆಗೆದುಕೊಂಡರೆ ದಕ್ಷಿಣ ಏಷ್ಯಾದಲ್ಲಿ ಇಪ್ಪತ್ತೆಂಟು ಇಲ್ಲವೆ ಇಪ್ಪತ್ತೊಂಬತ್ತು ಪ್ರಭೇದಗಳ ಸಿಳ್ಳಾರಗಳು ಕಂಡುಬರುತ್ತವೆ. ಜೊತೆಗೆ ನಾಲ್ಕು ಅಲೆಮಾರಿ ಹಾಗೂ ಎರಡು […]Read More
ರಂಗನತಿಟ್ಟಿನಲ್ಲಿ ನೀವು ದೋಣಿವಿಹಾರಕ್ಕೆ ಹೋಗಿ ದೊಡ್ಡಗಾತ್ರದ ಹಕ್ಕಿಗಳನ್ನು ನೋಡಿ ಆನಂದಿಸುತ್ತಾ ಹಾಗೇ ದೋಣಿ ಇನ್ನೇನು ಹೊರಟ ಸ್ಥಾನಕ್ಕೆ ಹಿಂದಿರುಗಿತು ಎನ್ನುವಾಗ ಬಂಡೆಯ ಮೇಲೆ ಕಾಣುವ ದಪ್ಪಕೊಕ್ಕಿನ, ಎದ್ದುಕಾಣುವ ಹಳದಿ “ಕನ್ನಡಕದ” ಹಕ್ಕಿಯೇ ಬಂಡೆಗೊರವ! ಪ್ರಧಾನವಾಗಿ ಬೂದು-ಬಿಳಿ ಹಕ್ಕಿ. ಬಲವಾದ ತುಸು ಮೇಲ್ತಿರುಗಿರುವ ಕೊಕ್ಕು. ಹಾರುವಾಗ ರೆಕ್ಕೆಯ ಮೇಲಿನ ಬಿಳಿ ಮಚ್ಚೆ ಹಾಗೂ ರೆಕ್ಕೆಯಂಚಿನ ಕಪ್ಪು ಬಣ್ಣ ಪ್ರಧಾನವಾಗಿ ಕಾಣುತ್ತದೆ. ಇದರ ಚಟವಟಿಕೆ ಸಂಜೆ ಮತ್ತು ರಾತ್ರಿಯೇ ಹೆಚ್ಚು. ಆದರೆ, ಹಗಲಿನಲ್ಲಿಯೂ ಕಾಣಿಸಿಕೊಳ್ಳುತ್ತದೆ. ಕಲ್ಲಿನ ಸಂದಿಯಲ್ಲಿನ ಏಡಿ ಪ್ರಧಾನವಾದ […]Read More
ಕಪ್ಪಗಿದೆ ಎಂಬ ಕಾರಣದಿಂದ ಕಾಗೆ ಎನಿಸಿಕೊಂಡಿರುವ ಹಕ್ಕಿ ನೀರುಕಾಗೆ. ಹೆಸರೇ ಹೇಳುವಂತೆ ಇದು ಒಂದು ನೀರ ಹಕ್ಕಿ. ಇಂಗ್ಲಿಷಿನಲ್ಲಿ ಇದನ್ನು ಕಾರ್ಮೊರಂಟ್ (Cormorants) ಎನ್ನುತ್ತಾರೆ. ಭಾರತ ಉಪಖಂಡದಲ್ಲಿ ನಾಲ್ಕು ಮತ್ತು ಜಗತ್ತಿನಲ್ಲಿ ಸುಮಾರು ನಲವತ್ತು ಬಗೆಯ ನೀರು ಕಾಗೆಗಳಿವೆ. ಪ್ರಧಾನವಾಗಿ ಕಪ್ಪು ಬಣ್ಣದವು. ಮೀನೇ ಪ್ರಧಾನವಾದ ಆಹಾರ. ಉಪಖಂಡದಲ್ಲಿ ಪಿಗ್ಮಿ ನೀರುಕಾಗೆ, ಸಣ್ಣ ನೀರುಕಾಗೆ, ದೊಡ್ಡ ನೀರುಕಾಗೆ ಮತ್ತು ಇಂಡಿಯನ್ ಶಾಗ್ ಎಂದು ಕರೆಯಲಾಗುವ ಇನ್ನೊಂದು ಬಗೆಯ ನೀರುಕಾಗೆ ಕಂಡುಬರುತ್ತವೆ. ಒಳ್ಳೆಯ ಮುಳುಗು ಹಕ್ಕಿಗಳು. ನೀರಿನೊಳಗೆ ಮುಳುಗಿಯೂ […]Read More
ಕಾಡು ಕುರಿ ಇದು ಜಿಂಕೆಗಳ ಜಾತಿಗೆ ಸೇರಿದ ಪ್ರಾಣಿ, ಇದಕ್ಕೆ ಬೊಗಳುವ ಜಿಂಕೆ ಎಂದೂ ಕರೆಯುತ್ತಾರೆ. ಆಂಗ್ಲದಲ್ಲಿ Barking deer ಅಥವಾ Muntjac ಎಂದು ಹೆಸರು, ನಮ್ಮ ಆಡು ಭಾಷೆಯಲ್ಲಿ ಕಾಡು ಕುರಿ ಎನ್ನುತ್ತೇವೆ ಆದರೆ ಇದು ಜಿಂಕೆಗಳ ಜಾತಿಗೆ ಸೇರಿದ ಪ್ರಾಣಿ, ಆದ್ದರಿಂದ ನಾನು ಮುಂದೆ ಬರೆಯುವಾಗ ಜಿಂಕೆ ಎಂಬ ಪದವನ್ನೇ ಬಳಸುತ್ತೇನೆ. ಇವು ಗೊರಸುಳ್ಳ ಪ್ರಾಣಿಗಳ ಸರ್ವಿಡೀ (Cervidae) ಕುಟುಂಬಕ್ಕೆ ಸೇರಿವೆ, ಎತ್ತರ 50-80 ಸೆಂ.ಮೀ, ತೂಕ 20-25 KG, ಗಂಡಿಗಿಂತ ಹೆಣ್ಣು ಚಿಕ್ಕದು, […]Read More
ಸಹ್ಯಾದ್ರಿ ಮಲೆಗಳಲ್ಲೆಲ್ಲೋ ನೀವು ಪಕ್ಷಿ ವೀಕ್ಷಣೆ ಮಾಡುತ್ತಿದ್ದೀರೆಂದುಕೊಳ್ಳಿ. ಒಂದು ಹಕ್ಕಿಯ ಕೂಗು ಕೇಳುತ್ತಿದೆ, ಆದರೆ ಅದು ಕಾಣುತ್ತಿಲ್ಲ. ಪಕ್ಷಿ ವೀಕ್ಷಕರಿಗೆ ಇದು ಸಾಮಾನ್ಯ ಅನುಭವ, ಜೊತೆಗೆ ಅವರು ಆ ಪಕ್ಷಿಯನ್ನು ಹುಡುಕಿ ನೋಡುವ ಸಾಮರ್ಥ್ಯವನ್ನೂ ಹೊಂದಿರುತ್ತಾರೆ. ಹೊಸದಾಗಿ ಪಕ್ಷಿ ವೀಕ್ಷಣೆಗೆ ತೊಡಗಿರುವವರನ್ನು ದಾರಿ ತಪ್ಪಿಸುವ ಕೂಗು ಎಂದರೆ ಈ ಕಾಜಾಣಗಳದ್ದು! ಏಕೆಂದರೆ ಇವು ಇತರ ಹಕ್ಕಿಗಳ ಧ್ವನಿಯನ್ನು ಚೂರೂ ಸಂದೇಹ ಬರದಂತೆ ಅನುಕರಿಸುತ್ತವೆ! ಇವನ್ನು ಪಕ್ಷಿಲೋಕದ ಮಿಮಿಕ್ರಿ ಕಲಾವಿದರು ಎನ್ನಬಹುದು! ಇವುಗಳ ಇನ್ನೊಂದು ಅಭ್ಯಾಸವೆಂದರೆ ಹಾರಿ ಮತ್ತೆ […]Read More
ನಮ್ಮಲ್ಲಿ ಹಕ್ಕಿಗಳಿಗೆ ಹೆಸರಿಡುವಾಗ ಎಷ್ಟು ಯೋಚಿಸಿರುತ್ತಾರೆ ನಮ್ಮ ಜನರು/ಜನಪದರು ಎಂಬುದು ಆ ಗೌರವ ತರುವ ವಿಷಯ. ಮಟಪಕ್ಷಿ ಎಂದೂ ಕರೆಯಲಾಗುವ ಈ ಕಳ್ಳಹಕ್ಕಿಗಳ ಇಂಗ್ಲಿಷ್ ಹೆಸರು ಟ್ರೀ ಪೈ ಎಂದು. ಇದು ಇತರ ಹಕ್ಕಿಗಳ ಮೊಟ್ಟೆ, ಮರಿಗಳನ್ನು ಕದ್ದು ತಿನ್ನುತ್ತದೆಯಾದ್ದರಿಂದ ಇದು ಕಳ್ಳಹಕ್ಕಿ. ಕರ್ನಾಟಕದಲ್ಲಿ ಎರಡು ಬಗೆಯ ಕಳ್ಳಹಕ್ಕಿಗಳು ಕಂಡುಬರುತ್ತವೆ. ಒಂದು ಕೆಂಗಂದು ಕಳ್ಳಹಕ್ಕಿ (Rufous Treepie Dendrocitta vagabunda) ಉದ್ದಬಾಲದ (ಸುಮಾರು ಮುವ್ವತ್ತು ಸೆಂಟಿಮೀಟರ್) ಚಿಕ್ಕ, ಆದರೆ ಗಟ್ಟಿಯಾದ ಕೊಕ್ಕನ್ನು ಹೊಂದಿರುವ ಹಕ್ಕಿ. ಬೂದು, ತೆಳುಹಳದಿ/ಕೆಂಗಂದು ವಿಶ್ರಿತ […]Read More