ಗ್ಯಾಲಾಪಾಗಸ್ ದ್ವೀಪದ ಬೃಹತ್ ಆಮೆಗಳು

ಗ್ಯಾಲಾಪಾಗಸ್ ದ್ವೀಪದ ಬೃಹತ್ ಆಮೆಗಳು

ಗ್ಯಾಲಾಪಾಗಸ್ ದ್ವೀಪ ಸಮೂಹದ ದೈತ್ಯಾಕಾರದ ಆಮೆಗಳು ಭೂಮಿಯ ಮೇಲೆ ವಾಸಿಸುವ ಭೂಚರಗಳು. 400 kg ತೂಕ ಮತ್ತು 1.8 ಉದ್ದ ಬೆಳೆಯವ ಈ ಆಮೆಗಳು ದೈತ್ಯದೇಹ ಮತ್ತು ದೀರ್ಘ ಆಯುಷ್ಯಕ್ಕೆ ಪ್ರಸಿದ್ಧವಾಗಿವೆ. ನೂರು ವರ್ಷಕ್ಕಿಂತಲೂ ಅಧಿಕ ಕಾಲ ಬದುಕುವ ಈ ಆಮೆಗಳು “ಗ್ಯಾಲಾಪಾಗಸ್ ದ್ವೀಪ ಸಮೂಚ್ಚಯಗಳ ಅಚ್ಚರಿಗಳಲ್ಲಿ ಒಂದಾಗಿವೆ.

ಬಹುಶಃ ಗ್ಯಾಲಾಪಾಗಸ್ ದ್ವೀಪಸಮುಚ್ಚಯಗಳಲ್ಲಿ ಕಂಡುಬರುವಂತ ವಿಶಿಷ್ಟ ಹಾಗು ವೈವಿಧ್ಯಮಯ ಜೀವ ಪ್ರಭೇದಗಳು ಪ್ರಪಂಚದ ಬೇರೆ ಯಾವ ದ್ವೀಪಗಳಲ್ಲೂ ಕಂಡುಬರುವುದಿಲ್ಲ. ಹಾಗಾಗಿಯೇ ಈ ದ್ವೀಪಸಮೂಹಗಳನ್ನ ಯುನೆಸ್ಕೋ ಪಟ್ಟಿಗೆ ಸೇರಿಸಿ ಅಂತರಾಷ್ಟ್ರೀಯ ರಕ್ಷಣೆಯನ್ನ ಒದಗಿಸಲಾಗಿದೆ.

ಅತ್ಯಂತ ನಿಧಾನಗತಿಯಲ್ಲಿ ಸಾಗುವ ಈ ಆಮೆಗಳು ದಪ್ಪ ಹಿಂಗಾಲಿನ ಚಿಪ್ಪುಗಳನ್ನ ಹೊಂದಿದ್ದೂ ಹುಲ್ಲು
ಎಲೆ ಕಳ್ಳಿ ಮತ್ತು ಇತರೇ ಹಣ್ಣುಗಳನ್ನ ತಿಂದು ಬದುಕುತ್ತವೆ. ಇಕ್ವಿಡಾರ್ ನಿಂದ 1000 km ದೂರದಲ್ಲಿ ಪೆಸಿಫಿಕ್ ಸಾಗರದಿಂದ ಸುತ್ತುವರೆದ ಈ ದ್ವೀಪ ಸಮುಚ್ಚಯಗಳು ಇವುಗಳ ಜೀವನಶೈಲಿಗೆ ಹೇಳಿ ಮಾಡಿಸಿದಂತಿವೆ.

19 ನೇಯ ಶತಮಾನದಲ್ಲಿ ವಿಪರೀತವಾಗಿ ತಿಮಿಂಗಿಲಗಳ ಭೇಟೆಯ ಜೊತೆಗೆ ಇವುಗಳನ್ನೂ ಸಹ ಭೇಟೆಯಾಡಲಾಗಿತ್ತು. ತೀರಾ ಇಳಿಮುಖವಾಗಿದ್ದ ಇವುಗಳನ್ನ ” ಚಾರ್ಲ್ಸ್ ಡಾರ್ವಿನ್ ಸಂಶೋದನಾ ಕೇಂದ್ರ” ವು ಸಂರಕ್ಷಿಸಿತು. ಈ ದ್ವೀಪ ಸಮುಚ್ಚಗಳ ಪ್ರತಿಯೊಂದು ದ್ವೀಪದಲ್ಲೂ ಒಂದೊಂದು ವಿಭಿನ್ನ ತಳಿಯ ಆಮೆಗಳಿದ್ದು ಡಾರ್ವಿನ್ ವಿಕಾಸನವನ್ನು ತಿಳಿಯಲು ಅನುಕೂಲಕರವಾಗಿವೆ.

ಈ ಗ್ಯಾಲಾಪಾಗಸ್ ದ್ವೀಪಸಮುಚ್ಚಯಗಳು 252 ಮಿಲಿಯನ್ ವರ್ಷಗಳ ಹಿಂದಿನಿಂದ 66 ಮಿಲಿಯನ್ ವರ್ಷಗಳ ಹಿಂದಿನವರೆಗೂ ಈ ಭೂಮಿಯ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಿದ್ದ ಡೈನಾಸಾರಸ್ ಕಾಲದ ಜೀವಂತ ಕೊಂಡಿಗಳಾಗಿದ್ದು ಪರಿಸರ ಮತ್ತು ಜೀವ ವಿಕಾಸದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ.

ಮೃತ್ಯುಂಜಯ ನ. ರಾ.

Related post