ಯೋಚಿಸಿ ಪ್ರೀತಿಸು
ಮೋಸ ಮಾಡುವ ಮನಸು ಇದ್ದರೆ
ನನ್ನ ಕಾಡಬೇಡ……
ನಾನು ಬಡವನು, ಹೆಂಗೊ ಬದುಕಿರುವೆ
ನನ್ನ ಕೊಲ್ಲಬೇಡ…..
ಬದುಕು ಹಾಳುಮಾಡಬೇಡ.
ಒಮ್ಮೆ ಪ್ರೀತಿಯು ಹೃದಯ ಸೇರಿದರೆ
ಅಳಿಸಲಾಗದೆಂದು…..
ಹೃದಯ ಸೇರಿದ ಪ್ರೀತಿಯ ಮರೆತು
ಬದುಕಲಾರೆ ಎಂದು……
ಈ ಪ್ರೀತಿ, ಪ್ರೇಮ ಕೊಂದು.
ನೀ ನನ್ನ ಬದುಕಿಗೆ ಬೆಳಕು ಚೆಲ್ಲುವ
ದೀಪವಾಗಬೇಕು…..
ಆ ಬೆಳಕಿನಲಿ ಬದುಕು ನೆಡೆಸುತ
ನನ್ನ ಅರಿಯಬೇಕು……
ನಾ ನಿನ್ನ ಅರಿಯಬೇಕು.
ದುಡ್ಡು ಕಾಸಿನ ಆಸೆಯಿದ್ದರೆ
ನನ್ನ ಮರೆಯಬೇಕು…..
ಬೆವರು ಹರಿಸುತ, ನಾವು ದುಡಿಯುತ
ಬದುಕು ನಡೆಸಬೇಕು…..
ಪ್ರೀತಿಯ ಹಣತೆ ಹಚ್ಚಬೇಕು.
ತಂದೆ ತಾಯಿಯು ನನಗೆ ದೇವರು
ಜೊತೆಗೆ ಬದುಕಬೇಕು….
ಅವರ ಬದುಕನು ನಮಗೆ ಸವೆಸಿದರು
ಸೇವೆ ಮಾಡಬೇಕು…..
ಅವರ ಋಣವು ತೀರಬೇಕು.
ಹೇಗೆ ಪ್ರಸಾದ್
ಕುದೂರು ಲಕ್ಕೇನಹಳ್ಳಿ