ಶಾಯಿರಿ
ಹಸಿರಾಗಿರಲಿ
ಹಣ್ಣ ಹಣ್ಣ ಮುದುಕಿಯಾದ್ರೂ
ನಿನ್ನ ಮುಖದಾಗಿನ ನಗು ಮಾಸದಂಗಿರ್ಲಿ!
ನಾವಿಬ್ರೂ ಹಣ್ಣ ಹಣ್ಣ ಮುದುಕರಾದ್ರೂ
ನಮ್ಮಿಬ್ಬರ ಪ್ರೀತಿ ಮಾತ್ರ ಸದಾ ಹಸಿರಾಗಿರ್ಲಿ!!
ಚಂದ ಕಾಣತಿ
ಸಿಟ್ಟ ಮಾಡಕೊಂಡಾಗೆಲ್ಲಾ ನೀನ
ಎಷ್ಟ ಚಂದ ಕಾಣತೀ ಅಂದ್ರ
ಇಡೀ ದಿನ ನಿನಗ ಸಿಟ್ಟ
ಬರಸಗೊಂತನ ಇರಬೇಕನ್ನಸತೈತಿ!!
ಬರ್ತೀನಿ
ಪ್ರತೀ ರಾತ್ರಿ ಸ್ವಲ್ಪ ಕಿಡಕಿ ವಾರಿ ಮಾಡಿ
ನನ್ನ ಹೆಸರು ತಗೊಂಡ ಮಲಗು !
ನಿನ್ನ ಬಾಜೂಕ ಸ್ವಲ್ಪ ಜಗಾ ಬಿಟ್ಟೀರು
ತಪ್ಪದ ನಿನ್ನ ಕನಸನ್ಯಾಗ ಬರ್ತೀನಿ !
ಚಡಪಡಿಕೆ
ನನ್ನ ಮನಸನ್ಯಾಗ ನಿನ್ನ ಹೆಸರು
ಅದೆಂಗ ಗಟ್ಟಿಯಾಗಿ ಅಚ್ಚೊತ್ತೇತಿ ಅಂದ್ರ ,
ನಿನ್ನ ಹೆಸರನವರ ಬೇರೆ ಯಾರಾದ್ರೂ
ಸಿಕ್ಕರೂ ನನ್ನ ಮನಸ ಚಡಪಡಸತೈತಿ !!
ಶಿಫಾರಸ್ಸು
ದೇವರಿಗೆ ಪುರಸೊತ್ತಿದ್ದಾಗ ನಿನ್ನಂತ
ಚಂದನ್ನ ಚಲುವಿನ ಸೃಷ್ಟಿ ಮಾಡಿರಬೇಕು!
ನೀನ ನನಗ ಸತಿಯಾಗಿ ಬರುವಂಗ ಯಾರೋ
ಆ ದೇವರಿಗೇ ಶಿಫಾರಸ್ಸು ಮಾಡಿರಬೇಕು!!

ಡಾ. ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ
ಮೊಬೈಲ್ : 9916277217