ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಅದೃಷ್ಟದಾಟ
ಎಲ್ಲರ ಬಾಳಲೂ ಬಯಸಿದಂತೆ
ಅದೃಷ್ಟಭಾಗ್ಯ ಸಿಗದು!
ಅದೊಂದು ಗಗನಕುಸುಮದಂತೆ
ಕೆಲವರ ಪಾಲಿಗಿರುವುದು!!
ಅದೃಷ್ಟವೆಂಬುದು ಮರಳುಗಾಡಿನ
ನೀರ ಪುಟ್ಟ ಸೆಲೆಯಂತೆ!
ಕೈಗೆಟುಕಿದಂತಾಗಿ ಮಾಯ
ಕಂಡರೂ ಕಾಣದಂತೆ!!
ಅದೃಷ್ಟದಾಟಕೆ ಸಿಕ್ಕವರು
ಸಂತಸವಾಗಿಹರು!
ಸಿಗದವರು ಕೊರಗುತಲಿಹರು!
ಪರಿಶ್ರಮದೊಡೆ ಅದೃಷ್ಟವಿರೆ
ಯಶಸ್ಸು ಖಂಡಿತವೆಂಬ
ಮಾತನರಿಯರಿವರು!!
ಅದೃಷ್ಟದ ಮಾತೊಂದೇ ನಂಬಿ
ನೂಕದಿರಿ ಬಾಳನು ಹಲುಬಿ!
ದೈವದೊಲುಮೆಯೂ ಬೇಕು
ನೆಮ್ಮದಿಯಲಿ ಸಾಗಲು ಬದುಕು!!

ಸುಮನಾ ರಮಾನಂದ
ಮುಂಬೈ