ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಅರಿಯದಿರಲಿ ಬಾಳಿನ ನೋವು
ತನಷ್ಟಕ್ಕೆ ತಾನುರಿಯಲಿ ಸೊಡರು
ತನ್ಮಯತೆ ಜ್ವಾಲೆ, ಹಚ್ಚಿರುವರು ಯಾರು?
ನಿಲುಕದಿರಲಿ ಕೊನೆಯ ಉಸಿರು
ದಾರಿ ಕಾಣುವ ಬಯಕೆ ಯಾಕೆ?
ಉರಿದುರಿದು ನೀಡಲಿ ಚಿತ್ ಶಾಂತಿ
ಜ್ಯೋತಿಯೇ ವಿಸ್ಮಯ, ಆನಂದ ಬೆಳಕೇ!
ನಿನ್ನೊಳಗಿನ ಲೀನ ನನ್ನೊಳಗಿನ ಕಾಂತಿ

ಭರತ್ ಎಚ್ ಜಿ