ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶ್ರೀ ಎಂ.ಎಚ್. ಪೂಜಾರಿ
ಮೆರೆಯಲಿ ಕನ್ನಡತನ
ನಮ್ಮ ನಾಡು ಕನ್ನಡ,
ನಮ್ಮ ಭಾಷೆ ಕನ್ನಡ|
ನಮ್ಮ ನುಡಿಯೂ ಕನ್ನಡ
ನಮ್ಮ ಅಂಕೆಯೂ ಕನ್ನಡ||
ನೆರೆ ಹೊರೆಯವರು ಬರುತಿಹರು
ಕನ್ನಡವಾ ಕಲಿಯುತಿಹರು|
ಪರರಿಗೂ ಕನ್ನಡವ ಕಲಿಸುತಿಹರು
ಕನ್ನಡದೀ ವ್ಯವಹರಿಸುತಿಹರು||
ಎಲ್ಲರಲೂ ಮೆರೆಯುತಿರಲಿ,
ಕನ್ನಡತನ ಹಬ್ಬುತ್ತಿರಲೀ|
ಕನ್ನಡದ ಸೌಗಂಧ ಸೂಸುತಿರಲೀ|
ಕನ್ನಡ ಕಸ್ತೂರಿ ಘಮಘಮಿಸುತಲಿರಲೀ||
ದೇಗುಲಗಳಲೀ ಮಂತ್ರಗಳು ಕನ್ನಡದಲ್ಲಿರಲೀ!
ನ್ಯಾಯಾಂಗದಲಿ ಕನ್ನಡವು ಸ್ಥಿರವಾಗಿರಲೀ|
ವಕೀಲರು ಕನ್ನಡದಲ್ಲಿ ವಾದ ಮಂಡಿಸಲಿ
ನಾಗಶಯನ ಒಲಿಯವ ಆಗಲೀ||

ನಾಗರಾಜು.ಹ
ಬೆಂಗಳೂರು